Site icon Kannada News-suddikshana

ಮಂಗಳೂರು: ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಇನ್ಮುಂದೆ ರೇಡಾರ್ ಕಣ್ಣಾವಲು..!

ಮಂಗಳೂರು: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಮಂಗಳೂರು ಕೂಡ ಒಂದು. ಸ್ಮಾರ್ಟ್ ಸಿಟಿಯಾಗಿರುವ ಈ
ಮಂಗಳೂರು ನಗರ ಇನ್ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರೇಡಾರ್ ಕಣ್ಣಾವಲಿಗೆ ಒಳಪಡಲಿದೆ.

ಸಂಚಾರಿ ಪೊಲೀಸರಿಗೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಮೂಗುದಾರ ಹಾಕುವುದೇ ಸವಲಾಗಿ ಪರಿಣಮಿಸುತ್ತಿದೆ. ಇದಕ್ಕಾಗಿಯೇ ಸ್ಮಾರ್ಟ್ ನಗರದಲ್ಲಿ ಸ್ಮಾರ್ಟ್ ಆದ ತಂತ್ರಜ್ಞಾನಗಳನ್ನು ಜಾರಿಗೆ ತರಲಾಗಿದೆ. ಈಗಾಗಲೇ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಮರಾ ಹಾಗೂ ರೇಡಾರ್ ವ್ಯವಸ್ಥೆ ಅಳವಡಿಸಲಾಗಿದೆ.

Exit mobile version