Site icon Kannada News-suddikshana

ಕಪ್ಪು ಬಾವುಟ ಪ್ರದರ್ಶಿಸಲು ಹೋದರೆ ಜೈಲಿಗೋಗ್ತಾರೆ: ಸಂಸದ ಸಿದ್ದೇಶ್ವರ G.M. SIDDESHWARA WARNING

SUDDIKSHANA KANNADA NEWS

DATE:22-03-2023

DAVANAGERE

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು ಮಾರ್ಚ್ (MARCH) 25 ರಂದು ಆಗಮಿಸುವ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದವರು ಜೈಲಿಗೆ ಹೋಗುತ್ತಾರೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ (G.M. SIDDESHWARA) ಹೇಳಿದರು.

ಜಿಎಂಐಟಿ GMIT) ಯಲ್ಲಿ ಪತ್ರಿಕಾಗೋಷ್ಛಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ (MODI) ಅವರ ಆಗಮನ ದಿನದಂದು ಭದ್ರತೆ ಬಿಗಿಯಾಗಿರುತ್ತದೆ. ಇಂಥದ್ದಕ್ಕೆ ಆಸ್ಪದ ಕೊಡುವುದಿಲ್ಲ. ಒಂದು ವೇಳೆ ಮುಂದಾದರೆ ಪರಿಣಾಮ  ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಕುಂದುವಾಡದಲ್ಲಿ ದೂಡಾ ವತಿಯಿಂದ ನಿವೇಶನ ಬಡಾವಣೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಕುಂದುವಾಡ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಂದು ದಾವಣಗೆರೆಗೆ ಬರುವ ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NALIN KUMAR KATEEL) ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಿರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಂಸದರು ಈ ರೀತಿ ಉತ್ತರಿಸಿದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ (MADAL VIRUPAKSHAPPA) ಅವರು ಮಾರ್ಚ್ 25ರಂದು ನರೇಂದ್ರ ಮೋದಿ ಅವರು ಆಗಮಿಸುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮಕ್ಕೆ ಆಹ್ವಾನ ನೀಡಲಾಗಿದೆಯಾ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ನನಗೆ ಗೊತ್ತಿಲ್ಲ. ಶಾಸಕರಾಗಿರುವುದರಿಂದ ಫ್ಲೆಕ್ಸ್, ಬ್ಯಾನರ್ (BANNER) ಹಾಕಿಸಿದ್ದಾರೆ ಎಂದು ಹೇಳಿದರು.

 

 

Exit mobile version