Site icon Kannada News-suddikshana

ಅರ್ಧಕ್ಕೆ ನಿಂತ ಬಿಜೆಪಿ ಸಂಕಲ್ಪ ಯಾತ್ರೆ.. ಯಾಕೆ…? BJP SANKALPA YATHRE GALATE

ದಾವಣಗೆರೆ: ಚನ್ನಗಿರಿಯಲ್ಲಿಏರ್ಪಡಿಸಿದ್ದ ಬಿಜೆಪಿ ಸಂಕಲ್ಪ  ಯಾತ್ರೆ (BJP SANKLPA YATHRE) ಅರ್ಧಕ್ಕೆ ಮೊಟಕುಗೊಂಡಿದೆ. ಇದಕ್ಕೆ ಕಾರಣ ಶಾಸಕ ಮಾಡಾಳ್ (MADAL) ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಹೆಚ್. ಎಸ್. ಶಿವಕುಮಾರ್ (SHIVAKUMAR) ಬಣಗಳ ನಡುವಿನ ಜಟಾಪಟಿ.

ಬೆಳಿಗ್ಗೆ 10 ಗಂಟೆಗೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗಬೇಕಿದ್ದ ಯಾತ್ರೆ (YATHRE) ಶುರುವಾಗಿದ್ದೇ ಮಧ್ಯಾಹ್ನ 2 ಗಂಟೆಗೆ. ಅದೂ ಬಿಜೆಪಿ ಕಚೇರಿಯಿಂದ. ಯಾತ್ರೆಯ ಬಸ್ ಗೆ ಶಿವಕುಮಾರ್ ಹತ್ತಲು ಅವಕಾಶ ನೀಡಲಿಲ್ಲ ಎಂದು ಅವರ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಜಿ. ಎಂ. ಸಿದ್ದೇಶ್ವರ್ ಸೇರಿದಂತೆ ಬಿಜೆಪಿ ನಾಯಕರು ಅರ್ಧಕ್ಕೆ ಯಾತ್ರೆ ಮೊಟಕುಗೊಳಿಸಿ ಹೊರಟ ಘಟನೆ ಬಸ್ ನಿಲ್ದಾಣದ ಬಳಿ ನಡೆಯಿತು.

ಚನ್ನಗಿರಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ (BJP SANALPA YATHRE) ಆಯೋಜಿಸಲಾಗಿತ್ತು. ಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಜಿ. ಎಂ. ಸಿದ್ದೇಶ್ವರ, ಶಾಸಕ ಎಂ. ಪಿ. ರೇಣುಕಾಚಾರ್ಯ ಹಾಗೂ ಮಾಡಾಳ್ ಮಲ್ಲಿಕಾರ್ಜುನ್
ಆಗಮಿಸುತ್ತಿದ್ದರು. ಈ ವೇಳೆ ಐಬಿ ಸರ್ಕಲ್ ಬಳಿ ಇದ್ದ ಶಿವಕುಮಾರ್ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಗ ಶಿವಕುಮಾರ್ ಅವರಿಗೆ ಬಸ್ ಹತ್ತಲು ಹೇಳಿದಾಗ ಎರಡು ಬಣಗಳ ನಡುವೆ ಮಾತಿನ ಚಕಮಕಿ,
ಪರ ಹಾಗೂ ವಿರೋಧ ಘೋಷಣೆಗಳು ಮೊಳಗಿದವು.

ಮಾಡಾಳ್ ವಿರೂಪಾಕ್ಷಪ್ಪರ ಫ್ಲೆಕ್ಸ್ (FLEX) ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್ ಬೆಂಬಲಿಗರು, ಕೋಟಿ ಕಳ್ಳ, ಕೋಟಿ ಕಳ್ಳ ಎಂದು ಕೂಗಲು ಶುರು ಮಾಡಿದರು. ಆಗ ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಗರು ರೊಚ್ಚಿಗೆದ್ದು
ಶಿವಕುಮಾರ್ ಫ್ಲೆಕ್ಸ್, ಬ್ಯಾನರ್ ಕಿತ್ತು ಹಾಕಿದರು. ಯಾತ್ರೆ ವೇಳೆ ಇಬ್ಬರು ಆಕಾಂಕ್ಷಿಗಳ ಬೆಂಬಲಿಗರ ನಡುವೆ ಕಿತ್ತಾಟ, ತಳ್ಳಾಟ, ಕೂಗಾಟ ಜೋರಾಯಿತು.

ಸಂಸದ ಜಿ. ಎಂ. ಸಿದ್ದೇಶ್ವರ್ (G. M. SIDDESHWAR) ಕಾರಿಗೆ ಮುತ್ತಿಗೆ ಹಾಕಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿ ಚನ್ನಗಿರಿ ಕ್ಷೇತ್ರಕ್ಕೆ ಕಳಂಕ ತಂದೊಡ್ಡಿದವರನ್ನು ಯಾಕೆ ಸೇರಿಸಿಕೊಂಡಿದ್ದೀರಾ. ಚನ್ನಗಿರಿಗೆ ಮಾತ್ರವಲ್ಲ, ದಾವಣಗೆರೆ ಜಿಲ್ಲಾ ಬಿಜೆಪಿ ತಲೆತಗ್ಗಿಸುವ ಕೆಲಸ ಮಾಡುವ ಇಂಥವರಿಂದ ಪಕ್ಷಕ್ಕೆ ಮುನ್ನಡೆಯಾಗುವುದಕ್ಕಿಂತ ಅವಮಾನ ಆಗಿದೆ. ಇಂಥವರನ್ನು ಹತ್ತಿರಕ್ಕೂ ಸೇರಿಸಬಾರದು. ಶಿವಕುಮಾರ್ ಗೆ ಯಾಕೆ
ಅವಕಾಶ ನೀಡಿಲ್ಲ ಎಂದು ಪ್ರಶ್ನಿಸಿದರು. ಸಂಸದರ ಕಾರಿಗೆ ಮುತ್ತಿಗೆ ಹಾಕಿ ಸಿಟ್ಟು ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆ ಗಮನಿಸಿದ ಬಿಜೆಪಿ ನಾಯಕರು ಸಹವಾಸವೇ ಬೇಡ ಎಂಬಂತೆ ಯಾತ್ರೆ ಅರ್ಧಕ್ಕೆ ನಿಲ್ಲಿಸಿ ಹೊರಟರು. ಬಿಜೆಪಿಯಲ್ಲಿ ಬಂಡಾಯ ದಿನ ಕಳೆದಂತೆ ಜೋರಾಗುತ್ತಿದೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಗೆ
ಬಂದರೂ ಯಾತ್ರೆಗೆ ಬರಲಿಲ್ಲ. ಆದ್ರೆ, ಅವರ ಪುತ್ರ ಮಲ್ಲಿಕಾರ್ಜುನ್ ಬಂದದ್ದು ಮಾತ್ರ ಶಿವಕುಮಾರ್ ಬೆಂಬಲಿಗರು ಹಾಗೂ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿತು.

ಈಗಾಗಲೇ ಬಣ ರಾಜಕೀಯ ಜೋರಾಗಿದೆ. ಶಿವಕುಮಾರ್ ಹಾಗೂ ಮಾಡಾಳ್ ವಿರೂಪಾಕ್ಷಪ್ಪರ ಬೆಂಬಲಿಗರ ಒಂದು ಹಂತದ ಜಟಾಪಟಿ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಕುಮಾರ್ ಗೆ ಟಿಕೆಟ್ (TICKET) ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಅವರು ತಾವಿನ್ನೂ ಬಿಜೆಪಿಯಲ್ಲಿದ್ದೇನೆ. ನಾನೇ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಜಿಲ್ಲಾ ಮುಖಂಡರು ಹಾಗೂ ರಾಜ್ಯ ನಾಯಕರು ಮಾಡಾಳ್ (MADAL) ವಿರೂಪಾಕ್ಷಪ್ಪ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ.

ಬಂಡಾಯದ ಬಿಸಿ ಹೆಚ್ಚಾಗಿರುವ ಚನ್ನಗಿರಿ (CHANNAGIRI) ಯಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದು ಬಿಜೆಪಿ ನಾಯಕರ ತಲೆಬಿಸಿಗೂ ಕಾರಣವಾಗಿದೆ. ಈ ಕಾರಣಕ್ಕಾಗಿ ಯಾವ ಹೇಳಿಕೆಯನ್ನೂ ನೀಡುತ್ತಿಲ್ಲ. ಒಟ್ಟಿನಲ್ಲಿ ಚನ್ನಗಿರಿ ಬಿಜೆಪಿಯಲ್ಲಿ ಈಗ
ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾದರೂ ಹೊಗೆ ಮಾತ್ರ ಜೋರಾಗಿಯೇ ಆಡುತ್ತಿದೆ.

ಸಿಎಂ (CM) ರದ್ದು ಮಾಡಿದ್ಯಾಕೆ…?

ಚನ್ನಗಿರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಕಾರ್ಯಕ್ರಮವೂ ನಿಗದಿಯಾಗಿತ್ತು. ಆದ್ರೆ. ಬಣ ರಾಜಕೀಯ ಹಾಗೂ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದರು. ಅದೇ ರೀತಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಇನ್ನು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಕ್ಷೇತ್ರಕ್ಕೆ ಬಂದರೆ ಮುಜುಗರ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭೇಟಿ ರದ್ದು ಮಾಡಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಬರಲೇ ಇಲ್ಲ.

Exit mobile version