ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೋಡಬನ್ನಿರಣ್ಣ ಕೋಳಿ ಜೂಜಾಟ ಪಂದ್ಯದ ಜಾನಪದ ಗೀತೆಯ ನೃತ್ಯವೈಭವ!

On: January 5, 2025 6:27 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:05-01-2025

ದಾವಣಗೆರೆ: ಬಿ.ಐ.ಇ.ಟಿ. ಇಂಜಿನಿಯರಿಂಗ್ ಕಾಲೇಜು ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾದ ಯುವಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲಾ ತಂಡ, ಕೋಳಿ ಜೂಜಾಟ ಪಂದ್ಯದ ಕುರಿತು ಜಾನಪದ ಗೀತೆಯನ್ನು ನೃತ್ಯದೊಂದಿಗೆ ಪ್ರದರ್ಶಿಸಿದರು.

ಕೋಲಾರ ಜಿಲ್ಲೆ ಸೇರಿದಂತೆ ಆಂದ್ರ ಗಡಿ ಭಾಗದಲ್ಲಿ ಪ್ರಚಲಿತ ಇರುವ ಕೋಳಿ ಪಂದ್ಯ ಗ್ರಾಮೀಣ ಭಾಗದಲ್ಲಿನ ಮೋಜಿನ ಆಟವಾಗಿದೆ. ಇದರಲ್ಲಿ ಗ್ರಾಮೀಣ ಪುರುಷರು ಹಣ, ಬಂಗಾರಗಳನ್ನು ಪಣದಲ್ಲಿ ಇಟ್ಟು ಸೋತು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದರಿಂದ ಬಾದಿತವಾದ ಹೆಣ್ಣು ಮಗಳು ತನ್ನ ಗಂಡನಿಗೆ ಕೋಳಿ ಪಂದ್ಯ ಆಡದಂತೆ, ವಿವಿಧ ರೂಪಕಗಳಲ್ಲಿ ಎಚ್ಚರಿಸುತ್ತಾರೆ.

ಪ್ರಸ್ತುತ ಸಮಾಜದಲ್ಲಿ ಆನ್ ಲೈನ್ ಬೆಟ್ಟಿಂಗ್ ಭೂತಕ್ಕೆ ರಾಜ್ಯದಲ್ಲಿ ಹಲವರು ಹಣ ಸೋತು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಮಾಧ್ಯಮದಲ್ಲಿ ವರದಿಯಾಗಿವೆ. ಈ ಹಿನ್ನಲೆಯಲ್ಲಿ ಕೋಳಿ ಪಂದ್ಯ ಅಥವಾ ಆನ್ ಲೈನ್ ಬೆಟ್ಟಿಂಗ್ ಇರಲಿ
ಇಂದಿಗೂ ಮಹಿಳೆಯರು ಜೂಜಾಟದ ಬವಣೆ ಎದುರುಸುತ್ತಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment