Site icon Kannada News-suddikshana

ಯುವನಿಧಿ ಫಲಾನುಭವಿಗಳೇ ಗಮನಿಸಿ: ಸ್ವಯಂ ಘೋಷಣೆ ಪ್ರತಿ ತಿಂಗಳು ಕಡ್ಡಾಯ ಮಾಡದಿದ್ದರೆ ಬರಲ್ಲ ಹಣ!

ಯುವನಿಧಿ

ದಾವಣಗೆರೆ: ಗ್ಯಾರಂಟಿ ಯೋಜನೆ ಯುವನಿಧಿ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ಸಂದಾಯ ಮಾಡಲಾಗುತ್ತಿದ್ದು, ಫಲಾನುಭವಿಗಳಿಗೆ ನಂತರದ ತಿಂಗಳುಗಳ ಯುವನಿಧಿ ಹಣ ಸಂದಾಯವಾಗಲು ಕಡ್ಡಾಯವಾಗಿ ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಸ್ವಯಂ ದೃಢೀಕರಣ ಮಾಡಿಕೊಳ್ಳಬೇಕಾಗಿರುತ್ತದೆ.

READ ALSO THIS STORY: ಐಟಿ ಬಿಟಿ ಹಬ್ ಆಗಲಿದೆ ದಾವಣಗೆರೆ: 60 ದಿನಗಳಲ್ಲಿ10ಕ್ಕಿಂತ ಹೆಚ್ಚು ಐಟಿ ಕಂಪನಿಗಳ ಆಗಮನದ ನಿರೀಕ್ಷೆ!
ಆದ್ದರಿಂದ ಯುವನಿಧಿ ಯೋಜನೆಯ ಫಲಾನುಭವಿಗಳು ಮೊಬೈಲ್ ಮೂಲಕ ಅಥವಾ ಹತ್ತಿರದ ದಾವಣಗೆರೆ ಒನ್, ಗ್ರಾಮ ಒನ್ ಸೆಂಟರ್‍ಗಳಲ್ಲಿ ಸ್ವಯಂ ದೃಢೀಕರಣ ಮಾಡಿಕೊಳ್ಳಬೇಕು. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ, ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಇಲಾಖೆಯ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

Exit mobile version