SUDDIKSHANA KANNADA NEWS/ DAVANAGERE/ DATE:21-08-2024
ದಾವಣಗೆರೆ: ಚನ್ನಗಿರಿಯ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ವೃತ್ತಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡಲು ಪೊಲೀಸ್ ಇಲಾಖಾ ಅನುಮೋದನೆ ನೀಡುವಂತೆ ಸೂಚಿಸಬೇಕು ಎಂದು ಸ್ವಾಭಿಮಾನಿ ಯುವಕರ ಸಂಘ ಒತ್ತಾಯಿಸಿ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ಮನವಿ ಸಲ್ಲಿಸಿತು.
ಬೀರೂರು ಕ್ರಾಸ್ ನಲ್ಲಿರುವ ವತ್ತಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡುವಂತೆ ಈ ಹಿಂದೆಯೂ ಒತ್ತಾಯಿಸಲಾಗಿತ್ತು. ಈ ಸಂಬಂಧ ಚನ್ನಗಿರಿ ಪೊಲೀಸರಿಗೆ ಮನವಿಯನ್ನೂ ನೀಡಲಾಗಿತ್ತು. ಆದರೂ ನಾಮಕರಮ ಮಾಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಹರ್ಷಿ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಪೊಲೀಸ್ ಇಲಾಖೆಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದ ಕಾರಣ ಮುಂದಿನ ವಾಲ್ಮೀಕಿ ಜಯಂತಿಯ ಒಳಗಾಗಿ ಈ ವೃತ್ತಕ್ಕೆ ಸರ್ಕಾರದಿಂದ ಅಧಿಕೃತವಾಗಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತವೆಂದು ಅಧಿಕೃತಗೊಳಿಸುವುದಾಗಿ ಭರವಸೆ ನೀಡಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಸೂಕ್ತವಾದ ಮಾಹಿತಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ
ನಾಮಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಈ ವೇಳೆ ಸ್ವಾಭಿಮಾನಿ ನಾಯಕರ ಯುವ ವೇದಿಕೆ ಅಧ್ಯಕ್ಷ ನವೀನ್ ಚನ್ನಗಿರಿ. ಉಪಾಧ್ಯಕ್ಷರಾದ ಯಲೋದಹಳ್ಳಿ ರವಿಕುಮಾರ್, ತ್ಯಾವಣಗಿ ಮಂಜುನಾಥ, ಹಳ್ಳಿ ಮಲ್ಲಾಪುರ ರಾಜಣ್ಣ, ಯೋಗರಾಜ್, ಅಣ್ಣಪ್ಪ. ಸಚಿನ್ ಮಲಹಾಳ್. ಅಣಪೂರ್ ಶಿವು, ಜೋಳದಾಳ್ ಮಂಜುನಾಥ, ಪುರಸಭೆ ಸದಸ್ಯ ಗಾದ್ರಿ ರಾಜು, ಮಲ್ಲಪ್ಪ, ಹನುಮಂತಪ್ಪ ಸೇರಿದಂತೆ ಇತರರು ಹಾಜರಿದ್ದರು. ಮನವಿ ಸ್ವೀಕರಿಸಿದ ಶಿವಗಂಗಾ ಬಸವರಾಜ್ ಅವರು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.