SUDDIKSHANA KANNADA NEWS/ DAVANAGERE/ DATE:27-02-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸೃಷ್ಟಿ ಕೆ. ಭಾನುವಳ್ಳಿ ಅವರು ಗ್ರಾಮೀಣ ಬಾಲ ಯೋಗ ಕ್ರೀಡಾಪಟು. ಈಗಾಗಲೇ ನೂರಾರು ಚಿನ್ನದ ಪದಕಗಳು, ನೂರಾರು ಪ್ರಶಸ್ತಿಗಳನ್ನು ಪಡೆದ ಈ ಬಾಲ ಪ್ರತಿಭೆ ಈ ಬಾರಿಯ ನಾಡಿನ ಖ್ಯಾತ ಹಂಪಿ ಉತ್ಸವದಲ್ಲಿ ತನ್ನ ಯೋಗ ವಿವಿಧ ನಾನಾ ಪಟ್ಟುಗಳನ್ನ ಪ್ರದರ್ಶನ ನೀಡಲಿದ್ದಾಳೆ.
ಮಾರ್ಚ್ 2ರ ಭಾನುವಾರ ಸಂಜೆ 5.30ರಿಂದ 5.40ರವರೆಗೆ ಯೋಗ ಪ್ರದರ್ಶನವನ್ನು ಸೃಷ್ಟಿ ಕೆ. ಭಾನುವಳ್ಳಿ ನೀಡಲಿದ್ದು, ಇದಕ್ಕಾಗಿ ತಾಲೀಮು ನಡೆಸಿದ್ದಾಳೆ.
ಸೃಷ್ಟಿಕೆ ವೈ. ಭಾನುವಳಿಯ ಗ್ರಾಮೀಣ ಪ್ರತಿಭೆ ಶಾಂಭವಿ ಯೋಗೀಶ್ ಅವರ ಏಕೈಕ ಪುತ್ರಿ, ತಾಯಿ ಕೂಡ ಯೋಗ ಪಟು, ದಾವಣಗೆರೆ ಜಿಲ್ಲೆಯ ಭಾರತೀಯ ಜನಕಲಾ ಸಮಿತಿಯ ಕಲಾವಿದೆ, ಜಿಲ್ಲಾ ಉಪಾಧ್ಯಕ್ಷೆ ಕೂಡ.
ಅರಿವು, ಸಾಮಾಜಿಕ ಜಾಗೃತಿ ಕಲಾಜಾಥ ಗಳನ್ನು ನಡೆಸಿದ ಹೆಗ್ಗಳಿಕೆ ಶಾಂಭವಿ ಅವರದು, ತಂದೆ ಯೋಗೇಶ್ ಭಾನುವಳ್ಳಿ ಅವರು ಗೃಹರಕ್ಷಕ ಇಲಾಖೆಯ ನೌಕರ. ಕಳೆದ ಕೊರೊನ ವೇಳೆಯಲ್ಲಿ ಲಾಕ್ಡೌನ್ ನಲ್ಲಿ ಸೃಷ್ಟಿ ತನ್ನ ತಾಯಿಂದ ಹಲವಾರು ಯೋಗ ಆಸನಗಳನ್ನು ಕಲಿತುಕೊಂಡು ಸತತ 18 ಗಂಟೆಗಳ ಕಾಲ ಸೂರ್ಯಾಸನ ಹಾಕಿ ಗ್ಲೋಬಲ್ ಅವಾರ್ಡ್ ಪಡೆದುಕೊಂಡ ಹೆಗ್ಗಳಿಕೆ ಈಕೆಯದು.
ನೇಪಾಳ ವಿಯೇಟ್ನಾಂ, ಪೂನಾ, ಬೆಂಗಳೂರು, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಅತ್ಯಂತ ವಿಶಿಷ್ಟ ವಿಭಿನ್ನವಾಗಿ ಯೋಗ ಪ್ರದರ್ಶನ ಮಾಡಿ ಎಲ್ಲಾರಿಂದಲೂ ಸೈ ಅನಿಸಿಕೊಂಡು ಹೋದೆಡೆ ಶಹಬ್ಬಾಸ್ ಗಿರಿ
ಪಡೆದಿದ್ದಾಳೆ.
ನಂದೀಪುರ ಮಠದ ಡಾಕ್ಟರ್ ಮಹೇಶ್ವರ ಸ್ವಾಮೀಜಿ ಮತ್ತು ಗುರು ಬಸವರಾಜ್ ಅವರ ಆಶೀರ್ವಾದ ಎಸ್. ವಿ. ಪಾಟೀಲ್ ಗುಂಡುರವರ ಸಹಕಾರದಿಂದ ಈ ಬಾರಿಯ ಹಬ್ಬಿ ಉತ್ಸವದಲ್ಲಿ ಸೃಷ್ಟಿಗೆ ಅವಕಾಶ ಸಿಕ್ಕಿರುವುದು ಶ್ಲಾಘನೀಯ, ಸಾಧನೆ ಕೂಡ ಹೌದು.
ಪ್ರತಿಷ್ಠಿತ ಇನ್ಸೈಟ್ ಐಎಎಸ್ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಅವರ ಸಹಕಾರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಹಿರಿಯರು, ಶ್ರೀಗಳ ಆಶೀರ್ವಾದ ದಾವಣಗೆರೆಯ ಯೋಗ ಒಕ್ಕೂಟ ಯೋಗ ಗುರುಗಳು ಮತ್ತು ಕೆ ಆರ್ ನವೀನ್ ಕುಮಾರ್ ಗುರುಗಳು ಸೇರಿದಂತೆ ಈ ಬಾಲ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.