SUDDIKSHANA KANNADA NEWS/ DAVANAGERE/ DATE:26-03-2025
ದಾವಣಗೆರೆ: ಸತ್ಪುರುಷ ಶ್ರೀರಾಮನಿಗೆ ವನವಾಸ ತಪ್ಪಲಿಲ್ಲ, ಸತ್ಯ ನುಡಿಯುತ್ತಿದ್ದ ಹರಿಶ್ಚಂದ್ರನಿಗೂ ಸಂಕಷ್ಟ ತಪ್ಪಿಲ್ಲ. ಇತಿಹಾಸದಲ್ಲಿ ಸತ್ಯವಂತರು, ಪುಣ್ಯ ಪುರುಷರಿಗೆ ಮಾತ್ರ ಕಷ್ಟಗಳು ಎದುರಾಗುವುದನ್ನ ನೋಡಿದ್ದೇವೆ. ಅದೇ ರೀತಿ ರಾಜಕಾರಣದಲ್ಲಿ ಕಂಡ ಅಪರೂಪದ ರಾಜಕಾರಣಿ ಪಕ್ಷಕ್ಕಾಗಿ ನಿಷ್ಠಯಿಂದ ಕಾರ್ಯಕರ್ತರು ಹಾಗೂ ಹಿಂದೂಗಳ ಪರ ಕೆಚ್ಚೆದೆಯಿಂದ ಹೋರಾಡಿದ ಬಿಜೆಪಿ ಹಿರಿಯ ನಾಯಕ ಯತ್ನಾಳ್. ಅವರನ್ನು ಉಚ್ಛಾಟನೆ ಮಾಡಿರುವುದು ಯಾವ ನ್ಯಾಯ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಆಡಳಿತ ಪಕ್ಷದ ವೈಫಲ್ಯ ಎತ್ತಿ ಹಿಡಿಯುವಲ್ಲಿ ವಿಫಲವಾಗಿದ್ದು, ಇಂಥ ಸಂದರ್ಭದಲ್ಲಿ ಆಡಳಿತ ಪಕ್ಷದವನ್ನು ಪ್ರಶ್ನೆ ಮಾಡಿ ಹೆದರಿಸುತ್ತಿದ್ದ ಏಕೈಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಅವರನ್ನು ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ಹಿಂದೂಗಳ ಪರವಾಗಿ ಹೋರಾಟ ಮಾಡಿ ಅವರ ಬೆಂಬಲಕ್ಕೆ ನಿಂತಿದ್ದು ತಪ್ಪಾ? ಭಷ್ಟಚಾರ ವಿರುದ್ಧ ಧ್ವನಿ ಎತ್ತುವುದು ತಪ್ಪಾ? ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯವಾಡಿ ನಿಷ್ಠಾವಂತ ಕಾರ್ಯಕರ್ತನಿಗೆ ಅಧಿಕಾರ ಸಿಗಬೇಕು ಎಂದಿದ್ದೇ ತಪ್ಪು ಎನ್ನುವುದಾದರೆ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ ಎಂದು ಬಾಡದ ಆನಂದರಾಜು ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿ ನೆಲೆ ಇಲ್ಲದೆ ಸೋತು ಮನೆಗೆ ಕೂತಿರುವ ಸ್ವಯಂ ನಾಯಕರೆಂದು ಘೋಷಣೆ ಮಾಡಿಕೊಂಡು ಪಕ್ಷದ ವಿರುದ್ಧ ಪಿತೂರಿ ಮಾಡಿದವರ ಮಾತುಗಳನ್ನ ಕೇಳಿ ಬಸನಗೌಡ ಪಾಟೀಲ್ ರಂತ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.