SUDDIKSHANA KANNADA NEWS/ DAVANAGERE/ DATE:14-10-2023
ಅಹಮದಾಬಾದ್: ಹಿಟ್ ಮ್ಯಾನ್ ಹಾಗೂ ಭಾರತೀಯ ಕ್ರಿಕೆಟ್ (Cricket)ತಂಡದ ನಾಯಕ ರೋಹಿತ್ ಶರ್ಮಾರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡವು ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಸೋಲಿಲ್ಲದ ಸರದಾರ ಎನಿಸಿಕೊಂಡಿದೆ. ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಭರ್ಜರಿ ಅರ್ಧಶತಕದ ನೆರವಿನಿಂದ 7ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.
READ ALSO THIS STORY:
ಅಬಕಾರಿ (Excise) ಡಿಸಿ, ನಿರೀಕ್ಷಕಿ ಸೇರಿ ನಾಲ್ವರು ಲೋಕಾಯುಕ್ತ ಪೊಲೀಸರ ಬಲೆಗೆ: ಮೂರು ಲಕ್ಷ ರೂ. ಲಂಚ ಕೇಳಿ ಸಿಕ್ಕಿಬಿದ್ದ ಅಧಿಕಾರಿಗಳು…!
ಟಾಸ್ ಗೆದ್ದ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಲಕ್ಷಾಂತರ ಮಂದಿಗೆ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ವೈಭವದಿಂದ ರಸದೂಟ ನೀಡಿದರು. ಸಿಕ್ಸರ್, ಬೌಂಡರಿಗಳ ಮೂಲಕ ಪಾಕ್ ಬೌಲರ್ ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು.ಕೇವಲ 63 ಎಸೆತಗಳಲ್ಲಿ ಆರು ಬೌಂಡರಿ, ಆರು ಸಿಕ್ಸರ್ ಬಾರಿಸಿ 86 ರನ್ ಗಳಿಸಿ ಔಟಾದರು. ಆಗ ಭಾರತಕ್ಕೆ ಕೇವಲ 36 ರನ್ ಬೇಕಿತ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿತು. ಪಾಕ್ ತಂಡದ ಆರಂಭಿಕ ಆಟಗಾರರು ಆರಂಭದಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರೂ 41 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆ ನಂತರ ಭಾರತದ ಬೌಲರ್ ಗಳ ಪಾರಮ್ಯ.
ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಭಾರತದ ಬೌಲರ್ ಗಳು ಸಂಘಟಿತ ಬೌಲಿಂಗ್ ಪ್ರದರ್ಶಿಸಿದರು. ಅದೇ ರೀತಿಯಲ್ಲಿ ಫೀಲ್ಡಿಂಗ್ ಕೂಡ ಚುರುಕಾಗಿತ್ತು. ಒಂದು ಹಂತದಲ್ಲಿ 250 ರನ್ ಗಳ ಗಡಿ ಮುಟ್ಟುವ ಸಾಧ್ಯತೆ ಹೊಂದಿದ್ದ ಪಾಕಿಸ್ತಾನ ತಂಡವು ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಮಿತ್ ಬೂಮ್ರಾ, ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆಯುವ ಮೂಲಕ ಪಾಕ್ ತಂಡದ ಸರ್ವಪತನಕ್ಕೆ ಕಾರಣರಾದರು.
192 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಭಾರೀ ಭರವಸೆ ಮೂಡಿಸಿದ್ದ ಶುಭಮನ್ ಗಿಲ್ ಜೊತೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. 11 ಎಸೆತಗಳಲ್ಲಿ 16 ರನ್ ಬಾರಿಸಿ ಶುಭಮನ್ ಗಿಲ್ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಒನ್ ಡೌನ್ ಆಗಿ ಬಂದ ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಸ್ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಕೇವಲ 16 ರನ್ ಗಳಿಸಿ ಔಟಾದರು. 18 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಯ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಅಬ್ಬರಿಸುತ್ತಲೇ ಇದ್ದ ರೋಹಿತ್ ಶರ್ಮಾ ಸಿಕ್ಸರ್, ಬೌಂಡರಿಗಳ ಮೂಲಕ ಕ್ರಿಕೆಟ್ ಪ್ರಿಯರಿಗೆ ಹಬ್ಬದೂಟ ಉಣಬಡಿಸಿದರು. ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಎದೆಗುಂದದ ರೋಹಿತ್ ಶರ್ಮಾ, ಸಿಕ್ಸರ್, ಬೌಂಡರಿ ಬಾರಿಸಿ ಮನರಂಜನೆ ನೀಡಿದರು.
56 ಎಸೆತಗಳಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್ ಗೆ 50 ರನ್ ಪೇರಿಸಿದರು. ಈ ವೇಳೆ ತಂಡದ ಮೊತ್ತ 130 ಆಗಿತ್ತು. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎಂದೂ ಸೋಲರಿಯದ ಟೀಂ ಇಂಡಿಯಾ ತಂಡವು
ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿತು.
ರೋಹಿತ್ ಶರ್ಮಾ ಜವಾಬ್ದಾರಿಯುತ ಇನ್ಸಿಂಗ್ಸ್ ಆಡಿದರು. ಶ್ರೇಯಸ್ ಅಯ್ಯರ್ ಸಖತ್ ಸಾಥ್ ಕೊಟ್ಟರು. ಇಬ್ಬರು ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಉತ್ತಮ ಜೊತೆಯಾಟ ನೀಡಿದರು. ಇವರಿಬ್ಬರ ಜೊತೆಯಾಟದಿಂದ ಭಾರತವು
ಸುಲಭವಾಗಿ ಗುರಿ ಮುಟ್ಟಲು ಸಾಧ್ಯವಾಯಿತು.
ವಿಶ್ವಕಪ್ ಟೂರ್ನಿಯಲ್ಲಿ ಚೇಸಿಂಗ್ ಗೆ ಹೆಚ್ಚು ಮಹತ್ವ ಕೊಟ್ಟ ಕಾರಣ ರೋಹಿತ್ ಶರ್ಮಾ ಟಾಸ್ ಗೆಲ್ಲುತ್ತಲೇ ಫೀಲ್ಡಿಂಗ್ ಆಯ್ದುಕೊಂಡರು. ನಿರ್ಧಾರ ಸರಿ ಎಂಬಂತೆ ಬೌಲರ್ ಗಳು ಬೌಲಿಂಗ್ ಪ್ರದರ್ಶನ ನೀಡಿದರೆ, ತಂಡದ ಗೆಲುವಿನಲ್ಲಿ
ರೋಹಿತ್ ಶರ್ಮಾ ಪ್ರಮುಖ ಪಾತ್ರವಹಿಸಿದರು.