SUDDIKSHANA KANNADA NEWS/ DAVANAGERE/ DATE-03-06-2025
ದಾವಣಗೆರೆ: ಇಂದು ನಡೆಯಲಿರುವ RCB – PBJS ನಡುವಿನ IPL ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆದ್ದು ಬರಲಿ ಎಂದು ದಾವಣಗೆರೆಯ ರಾಮ್ ಅಂಡ್ ಕೋ ಸರ್ಕಲ್ ನಲ್ಲಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಳೆದ ಹದಿನೇಳು ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಚಾಂಪಿಯನ್ ಆಗಿ ಹೊರ ಹೊಮ್ಮಿಲ್ಲ. 18ನೇ ಸೀಸನ್ ನಲ್ಲಿ ಗೆದ್ದು ಬರಲಿ ಎಂದು ಶ್ರೀ ವರಸಿದ್ಧಿ ವಿನಾಯಕನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಆರ್ ಸಿ ಬಿ ಗೆದ್ದುಬರಲಿ, ಉತ್ತಮ ಪ್ರದರ್ಶನ ನೀಡುವಂಥ ಶಕ್ತಿ ನೀಡು ಎಂದು ಬೇಡಿಕೊಂಡರು.
ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಗುರು ಸೋಗಿ, ನೀಲಗುಂದ ರಾಜ, ಶಂಕರ ಗೌಡ ಬಿರಾದರ್, ಯರಿಸ್ವಾಮಿ, ಹರೀಶ ಹೊನ್ನೂರು, ರವಿಕುಮಾರ, ಕಿಶೋರ್, ಶ್ರೀಕಾಂತ್ ನಿಲಗುಂದ, ಸಾಲಹಳ್ಳಿ ಹನುಮಂತು, ಅಭಿಷೇಕ್ ಪಿ. ಎಳೆಹೊಳೆ , ಕ್ರೀಡಾಭಿಮಾನಿಗಳು ಹಾಜರಿದ್ದರು.