SUDDIKSHANA KANNADA NEWS/ DAVANAGERE/ DATE:10-03-2024
ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ 50 ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಆಶಯದೊಂದಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ದಾವಣಗೆರೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 10ಕೆ ಮತ್ತು 5ಕೆ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸೇರಿದಂತೆ ದಾವಣಗೆರೆ ಜಿಲ್ಲೆಯ ನಾಗರೀಕರು ಹಾಗೂ ದಾವಣಗೆರೆ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿ ಬಾಗವಹಿಸಿದ್ದರು.
ಡಾ.ಕೆ ತ್ಯಾಗರಾಜನ್, ಮಾನ್ಯ ಐಜಿಪಿ ಪೂರ್ವ ವಲಯ, ದಾವಣಗೆರೆ ರವರು ಹಾಗೂ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ಪೊಲೀಸ್ ಅಧೀಕ್ಷಕರವರು ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ಭಾಗವಹಿಸಿ ಪೊಲೀಸ್ ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಸೇರಿದಂತೆ ಮೆಡಲ್ ಹಾಗೂ ಪ್ರಶಂಸನಾ ಪತ್ರ ವಿತರಿಸಿದರು.
ಪೊಲೀಸ್ ಪುರುಷ ವಿಭಾಗದ 10k ಮ್ಯಾರಥಾನ್ ಓಟ ಸ್ಪರ್ಧೆ:
ಪ್ರಥಮ : ತಿಮ್ಮರಾಜು ಕೆ ಪಿ, ನ್ಯಾಮತಿ ಪೊಲೀಸ್ ಠಾಣೆ, ದ್ವಿತೀಯ: ಮಲ್ಲಿಕಾರ್ಜುನ, ಡಿಎಆರ್ ದಾವಣಗೆರೆ, ತೃತೀಯ: ಜಯ್ಯಣ್ಣ , ಡಿಎಆರ್ ದಾವಣಗೆರೆ.
ಪೊಲೀಸ್ ಪುರುಷ ವಿಭಾಗದ 5k ಮ್ಯಾರಥಾನ್ ಓಟ:
ಪ್ರಥಮ :ಅಜ್ಜಯ್ಯ, ಬಡಾವಣೆ ಪೊಲೀಸ್ ಠಾಣೆ, ದ್ವಿತೀಯ: ಶ್ರೀಶೈಲ, ಡಿಎಆರ್ ದಾವಣಗೆರೆ, ತೃತೀಯ:ಹೇಮಣ್ಣ & ಮಂಜುನಾಥ.
ಪೊಲೀಸ್ ಮಹಿಳಾ ವಿಭಾಗದ 10k ಮ್ಯಾರಥಾನ್ ಓಟ:
ಪ್ರಥಮ : ಮಧುರಾ, ಮಹಿಳಾ ಪೊಲೀಸ್ ಸಿಬ್ಬಂದಿ
ಪೊಲೀಸ್ ಮಹಿಳಾ ವಿಭಾಗದ 5k ಮ್ಯಾರಥಾನ್ ಓಟ:
ಪ್ರಥಮ : ಮಾಲತಿ, ಬಡಾವಣೆ ಪೊಲೀಸ್ ಠಾಣೆ, ದ್ವಿತೀಯ: ಶ್ವೇತಾ, ಹರಿಹರ ಪೊಲೀಸ್ ಠಾಣೆ.
ಸಾರ್ವಜನಿಕ ಪುರುಷ ವಿಭಾಗದ 10k ಮ್ಯಾರಥಾನ್ ಓಟ:
ಪ್ರಥಮ :ಪ್ರಭು ಲಮಾಣಿ, ದ್ವಿತೀಯ:ದೇವರಾಜ, ತೃತೀಯ: ಪ್ರವೀಣ್ ಎ ಕೆ ಕಾಡಜ್ಜಿ.
ಸಾರ್ವಜನಿಕ ಪುರುಷ ವಿಭಾಗದ 5k ಮ್ಯಾರಥಾನ್ ಓಟ:
ಪ್ರಥಮ :ನೀಲಪ್ಪ, ದ್ವಿತೀಯ: ಪ್ರಮೋದ್ ಭಜಂತ್ರಿ, ತೃತೀಯ: ರಮೇಶ್.
ಸಾರ್ವಜನಿಕ ಮಹಿಳಾ ವಿಭಾಗದ 10k ಮ್ಯಾರಥಾನ್ ಓಟ:
ಪ್ರಥಮ : ಅಕ್ಷತಾ ಎ, ದ್ವಿತೀಯ:ರೇಖಾ ಎಂ, ತೃತೀಯ: ಹರ್ಪಿತಾ ಕೆ.
ಸಾರ್ವಜನಿಕ ಮಹಿಳಾ ವಿಭಾಗದ 5k ಮ್ಯಾರಥಾನ್ ಓಟ:
ಪ್ರಥಮ : ಪದ್ಮಶ್ರೀ, ಬಡಾವಣೆ, ದ್ವಿತೀಯ: ಮಮತಾ., ತೃತೀಯ: ಖುಷಿ ಮತ್ತು ಶಿವಬಸವ್ವ ಕಲಕೋಟೆ.
ಕಾರ್ಯಾಕ್ರಮದಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಜಿ ಮಂಜುನಾಥ್ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನೆ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ಧನಗೌಡ್ರು, ಡಿ ಎ ಆರ್, ಡಿಎಸ್ ಪಿ ನಿಷಿಮಪ್ಪ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ , ದಾವಣಗೆರೆ ವಿವಿಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಅಶೋಕ್ ಕುಮಾರ್ ಪಾಳೇದ, ಎನ್‌ಎಸ್‌ಎಸ್ ಅಧಿಕಾರಿ ಸಿದ್ದಪ್ಪ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮ ಮಿತ್ರರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.