SUDDIKSHANA KANNADA NEWS/ DAVANAGERE/ DATE:24-03-2025
ಬೆಳಗಾವಿ: ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಮಹಿಳೆಯರು ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತಲೇ ಇರುತ್ತಾರೆ. ಕಳೆದ ತಿಂಗಳು ಮತ್ತು ಈ ತಿಂಗಳ ಮೊದಲ ವಾರದಲ್ಲಿ ಮಹಿಳೆಯರ ಅಕೌಂಟ್ ಗೆ ಒಂದು ತಿಂಗಳ 2 ಸಾವಿರ ರೂಪಾಯಿ ಬಂದಿತ್ತು. ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ ಎರಡು ತಿಂಗಳ ನಾಲ್ಕು ಸಾವಿರ ರೂಪಾಯಿ ಬರಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನನಗೆ ಅಪಘಾತ ಆಗಿದ್ದ ಕಾರಣಕ್ಕೆ ಹಣ ಜಮಾವಣೆ ಆಗಿರಲಿಲ್ಲ. ಮಹಿಳೆಯರ ಅಕೌಂಟ್ ಗೆ ಹಣ ಹಾಕಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದ ಬಳಿಕ 2 ಸಾವಿರ ರೂಪಾಯಿ ಬಂದಿತ್ತು. ಆದರೂ ಇನ್ನು ಎರಡು ತಿಂಗಳ ಹಣ ಬಾಕಿ ಇದ್ದು, ಯುಗಾದಿ ಹಬ್ಬಕ್ಕೆ ಗೃಹಲಕ್ಷ್ಮೀಯರಿಗೆ ನಾಲ್ಕು ಸಾವಿರ ಬರಲಿದೆ ಎಂದು ಸಚಿವೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಯಂತೆ ಪಂಚ ಗ್ಯಾರಂಟಿಗಳಾದ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡಿತ್ತು. ಇನ್ನು ಇದೇ ಪಂಚ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹಲವರು ಹೇಳುತ್ತಿದ್ದರು.
ಆದರೆ ಕೆಲ ತಿಂಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಂದಿರಲಿಲ್ಲ. ಹಾಗಾಗಿ ಯಾಕೆ ಈ ಬಾರಿ ಇಷ್ಟು ತಿಂಗಳಾದ್ರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಜನ ಚಿಂತಿತರಾಗಿದ್ದರು. ಆದ್ರೆ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್ 31 ರ ನಂತರ ಗೃಹಲಕ್ಷ್ಮಿ ಯೋಜನೆಯ
ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಆ ಬಳಿಕ, ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವಾಗಲೇ ಅಂಗನವಾಡಿ ಕಾರ್ಯಕರ್ತೆಯರ 2 ಸಾವಿರ ರೂಪಾಯಿಯಷ್ಟು ಗೌರವಧನವನ್ನು ಹೆಚ್ಚಿಸಿದ್ದೆವು. ಆದ್ರೆ ಆ ನಂತರ ಯಾವುದೇ ಪಕ್ಷಗಳಾಗಲಿ ಇದನ್ನು ಏರಿಕೆ ಮಾಡಿಲ್ಲ. ಅಲ್ಲದೇ ಈ ಬಜೆಟ್ನಲ್ಲೂ ಕಾರ್ಯಕರ್ತೆಯರ ಗೌರವಧನವನ್ನು 1 ಸಾವಿರ ಮತ್ತು ಸಹಾಕಿಯರ ಗೌರವಧನವನ್ನು 750 ರೂಪಾಯಿ ಹೆಚ್ಚಿಸಿದ್ದೇವೆ, ಮುಂದಿನ ದಿನಗಳಲ್ಲಿ ಅದನ್ನೂ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.