SUDDIKSHANA KANNADA NEWS/ DAVANAGERE/ DATE:16-11-2024
ಬೆಂಗಳೂರು: ಬಿಪಿಎಲ್, ಅಂತ್ಯೋದಯ ಕಾರ್ಡ್. ಪ್ರತಿಯೊಬ್ಬರಿಗೂ ಅವಶ್ಯಕವಾಗಿ ಬೇಕು. ಆದ್ರೆ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಯಾಕೆಂದರೆ ಲಕ್ಷಾಂತರ ಬಿಪಿಎಲ್ ಕಾರ್ಡ್ ಪಡಿತದಾರರು ಇದ್ದು, ರಾಜ್ಯ ಸರ್ಕಾರಕ್ಕೆ ಮೋಸ ಮಾಡುತ್ತಲೇ ಬಂದಿದ್ದಾರೆ. ಈ ಹಿಂದೆ ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ದಂಡ ಕಟ್ಟಿದ ಉದಾಹರಣೆಯೂ ಇದೆ.
ಆದ್ರೆ, ಈಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ರದ್ದತಿಗೆ ಮುಂದಾಗಿದೆ. ಜೊತೆಗೆ ಸ್ವಂತ ಮನೆ, ಕಾರು, ಬೈಕ್ ಸೇರಿದಂತೆ ವಿವಿಧ ಆಸ್ತಿ ಹೊಂದಿರುವ ಮಾನದಂಡ ಗಮನಿಸಿ ಈ ನಿರ್ಧಾರಕ್ಕೆ ಬರಲು ಸರ್ಕಾರವು ತೀರ್ಮಾನಿಸಿದೆ
ಎಂದು ಮೂಲಗಳು ತಿಳಿಸಿವೆ.
ವೋಟರ್ ಐಡಿ, ಆಧಾರ್ ಕಾರ್ಡ್ ನಂತೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಮುಖ್ಯ. ಪಡಿತರ ಚೀಟಿಯಿಂದ ಹಲವು ರೀತಿಯ ಅನುಕೂಲಗಳು ಇವೆ. ಆದ್ರೆ, ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ಪಡೆದಿದ್ದು, ಈಗ ಪತ್ತೆ ಹಚ್ಚಿ ನಿಧಾನವಾಗಿ
ಅಂದರೆ ಹಂತ ಹಂತವಾಗಿ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಅಕ್ರಮವಾಗಿ ರೇಷನ್ ಪಡೆದವರ ಎದೆಯಲ್ಲಿ ಢವ ಢವ ಆಗುವಂತೆ ಮಾಡಿದೆ.
ಬಿಪಿಎಲ್ ಕಾರ್ಡ್ ಪಡೆಯುವ ಅಕ್ರಮಕ್ಕೆ ಕಡಿವಾಣ ಹಾಕಲು ಆಹಾರ ಇಲಾಖೆಯು ಮುಂದಾಗಿದ್ದು, ಕರ್ನಾಟಕದಲ್ಲಿ 22 ಲಕ್ಷ ಪಡಿತರ ಚೀಟಿ ಅನರ್ಹಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ. ಆದ್ರೆ, ಇದನ್ನು ಆಹಾರ ಇಲಾಖೆಯು ಸ್ಪಷ್ಟವಾಗಿ
ನಿರಾಕರಿಸಿದೆ.
ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು 11 ಮಾನದಂಡಗಳನ್ನು ನಿಗದಿಪಡಿಸಿರುವ ಸರ್ಕಾರವು, ಉಲ್ಲಂಘಿಸಿದವರ ರೇಷನ್ ಕಾರ್ಡ್ ರದ್ದತಿಗೆ ನಿರ್ಧರಿಸಿದೆ.
ಯಾರದ್ದೆಲ್ಲಾ ರದ್ದಾಗುತ್ತೆ ಬಿಪಿಎಲ್ ಕಾರ್ಡ್:
– 7.5 ಏಕರೆ ಭೂಮಿಗಿಂತ ಮೇಲ್ಪಟ್ಟವರು
– ತೆರಿಗೆ ಪಾವತಿದಾರರು
– ಕಾರು, 100 ಸಿಸಿ ಮೇಲ್ಪಟ್ಟ ದಿಚಕ್ರ ವಾಹನ
– ಉದ್ಯಮ, ಬಹರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಮಾಡುತ್ತಿರುವವರು
ಇನ್ನು ಬಿಪಿಎಲ್ ಕಾರ್ಡ್ ಗೂ ಮಾನದಂಡ ನಿಗದಿಪಡಿಸಿದ್ದು, 14 ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ.
ಇ ಆಡಳಿತ ಕೇಂದ್ರದ ಮೂಲಕ ಡೇಟಾ ಸಂಗ್ರಹಿಸಿರುವ ಆಹಾರ ಇಲಾಖೆ ಬರೋಬ್ಬರಿ 22,62,413 ರೇಷನ್ ಕಾರ್ಡ್ ಅನರ್ಹ ಎಂದು ಪಟ್ಟಿ ಮಾಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ನೀಡಲಾಗುತ್ತದೆ. ಆದರೆ ಬಡತನ ರೇಖೆಗಿಂತ ಮೇಲ್ಪಟ್ಟವರು ಈ ಕಾರ್ಡ್ ಪಡೆದಿದ್ದಾರೆ. ಈ ಬಗ್ಗೆ ಆಹಾರ ಇಲಾಖೆಯು ಕುಟುಂಬ ತಂತ್ರಾಂಶದ ಮೂಲಕ ಮಾಹಿತಿ ಪಡೆದಿದೆ.
10,54,368 ಅಂತ್ಯೋದಯ ಕಾರ್ಡ್‌ಗಳು, 10,97,621 ಬಿಪಿಎಲ್ ಕಾರ್ಡ್ ಗಳು ಅಕ್ರಮವಾಗಿವೆ ಎಂಬುದು ಇ ಆಡಳಿತ ಕೇಂದ್ರದಿಂದ ಪಡೆದುಕೊಂಡಿರುವ ಮಾಹಿತಿ. ಆದ್ರೆ, ಅಕ್ರಮ ತಡೆಯಲು ಆಗುತ್ತಿಲ್ಲ. ಅಕ್ರಮವಾಗಿ ಪಡಿತರ ಚೀಟಿಗಳ ರದ್ದುಪಡಿಸುವ ಪ್ರಕ್ರಿಯೆ ಇಂದು ನಿನ್ನೆಯದಲ್ಲ, ಮೊದಲಿನಿಂದಲೂ ಈ ಪ್ರಯತ್ನ ನಡೆದಿದೆಯಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ಸರ್ಕಾರದ ಈ ನಿರ್ಧಾರವು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರಿಗೆ ಭಯ ಹುಟ್ಟಿಸಿರುವುದಂತೂ ನಿಜ.