SUDDIKSHANA KANNADA NEWS/ DAVANAGERE/ DATE:22-03-2025
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಕಿಚ್ಚ, ಬಾದ್ ಶಾ ಸುದೀಪ್ ನಡೆಸಿಕೊಡುತ್ತಿದ್ದ ಈ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ. ಬರೋಬ್ಬರಿ 11 ಸೀಸನ್ ಗಳನ್ನು ಮುಗಿಸಿರುವ ಈ ರಿಯಾಲಿಟಿ ಶೋ 12ಕ್ಕೆ ಪದಾರ್ಪಣೆ ಮಾಡಲಿದೆ.
ಆದ್ರೆ, ಕಿಚ್ಚ ಸುದೀಪ್ ಅವರು ಈಗಾಗಲೇ ಮುಂದಿನ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಹಾಗಾಗಿ, ಕಿಚ್ಚನ ಅಭಿಮಾನಿಗಳು ಮಾತ್ರವಲ್ಲ, ನಾಡಿನ ಜನರು ಬೇಸರಪಟ್ಟುಕೊಂಡಿದ್ದು ಹಳೆ ವಿಚಾರ. ಆದ್ರೆ, ಬಿಗ್ ಬಾಸ್ ನಿರೂಪಕರು ಯಾರಾಗ್ತಾರೆ ಎಂಬುದು ಎಲ್ಲರನ್ನೂ ಕುತುೂಹಲ ಕೆರಳಿಸಿದೆ.
ಬಿಗ್ ಬಾಸ್ ಸೀಸನ್ ಆರಂಭವಾಗುತ್ತದೆ. ಹೋಸ್ಟ್ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಈಗ ಬಿಗ್ ಬಾಸ್ ನಿರೂಪಕರ ಹೆಸರು ಕೇಳಿ ಬರುತ್ತಲೇ ಇದೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ರಮೇಶ್ ಅರವಿಂದ್,
ಶಿವಣ್ಣ ನಿರೂಪಣೆ ಮಾಡಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಟ್ರೆಂಡ್ ಪ್ರಕಾರ ರಮೇಶ್ ಅರವಿಂದ್ ಅವರು ಈ ಶೋ ನಡೆಸಿಕೊಡಲಿದ್ದಾರೆ ಎಂದು ಚರ್ಚಿತವಾಗುತ್ತಿದೆ. ವೀಕೆಂಡ್ ವಿಥ್ ರಮೇಶ್ ಜನಪ್ರಿಯ
ಶೋ ನಡೆಸಿಕೊಟ್ಟಿರುವ ರಮೇಶ್ ಅರವಿಂದ್ ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಹೆಸರುವಾಸಿಯಾಗಿದ್ದಾರೆ.
ರಮೇಶ್ ಅರವಿಂದ್ ಅವರು ಈ ಶೋಗೆ ಬಂದರೆ ಅವರ ತಾಳ್ಮೆ ಎಲ್ಲರ ಗಮನ ಸೆಳೆಯುತ್ತದೆ. ಆದ್ರೆ, ಸುದೀಪ್ ಅವರ ರೀತಿ ರಗಡ್ ಆಗಿ, ಸಿಟ್ಟಾಗಿ, ಖಡಕ್ ಆಗಿ ಮಾತನಾಡುವುದಿಲ್ಲ. ಹಾಗಾಗಿ, ಇವರಿಂದ ಸುದೀಪ್ ಸ್ಥಾನ ತುಂಬುವುದು ಕಷ್ಟ ಎಂಬ
ಮಾತೂ ಕೇಳಿ ಬರುತ್ತಿದೆ. ಕನ್ನಡದಲ್ಲಿ ಕಿಚ್ಚನಂತೆ ಸ್ಪಷ್ಟ ಕನ್ನಡ ಮತ್ತು ದೃಢವಾಗಿ ನಿರೂಪಣೆ ಮಾಡುವ ಗತ್ತು ಇರುವ ನಟರಲ್ಲಿ ರಮೇಶ್ ಅರವಿಂದ್ ಅವರೂ ಒಬ್ಬರು ಎಂಬ ಕಮೆಂಟ್ ಗಳು ಬರ್ತಿವೆ.
ರಿಷಬ್ ಶೆಟ್ಟಿ, ಡಾ.ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್ ಅವರ ಹೆಸರುಗಳು ಮುನ್ನೆಲೆಗೆ ಬಂದಿದ್ದರೂ ಯಾವುದೂ ಖಚಿತವಾಗಿಲ್ಲ. ಸುದೀಪ್ ಅವರ ಮಾತು, ವ್ಯಕ್ತಿತ್ವ, ಫ್ಯಾಶನ್ಗೆ ಮನಸೋಲದವರೇ ಇಲ್ಲ. ಇನ್ನು ಎಷ್ಟೋ ಪ್ರೇಕ್ಷಕರು ಕಿಚ್ಚನನ್ನು ನೋಡಲೆಂದೇ ಈ ಬಿಗ್ಬಾಸ್ ನೋಡುತ್ತಿದ್ದರು ಎಂಬುದಂತೂ ಸುಳ್ಳಲ್ಲ.
ಜನರಿಗೆ ಬೇಕಾದ ರೀತಿಯಲ್ಲಿ ಶೋ ಮಾಡ್ಬೇಕು. ಬಿಗ್ಬಾಸ್ ಈ ರೀತಿ ಮಾಡಿದ್ರೆ ಜನ ಇಷ್ಟ ಪಡ್ತಾರೆ. ಮತ್ತೊಂದು ರೀತಿಯಲ್ಲಿ ಮಾಡಿದ್ರೆ ಅದಕ್ಕೆ ಅದರದ್ದೇ ಆದ ಫಾರ್ಮ್ಯಾಟ್ ಇರ್ಬೇಕು. ಆದ್ದರಿಂದ ಇದೇ ರೀತಿಯಲ್ಲಿ ಫಾರ್ಮ್ಯಾಟ್ ಇದ್ರೆ ಸುದೀಪ್ ಅವರು ಇರ್ತಾರೆ ಎಂದು ಹೇಳಿದ್ದಾರೆ. ಇನ್ನು ಮತ್ತೆ ಸೀಸನ್ ಆರಂಭವಾದ್ರೆ ಮತ್ತೆ ಮಾತಾಡ್ತೀವಿ. ನೋಡೋಣ ಏನಾಗುತ್ತೆ ಎಂದು ಬಿಗ್ಬಾಸ್ ಹೋಸ್ಟ್ ಮಾಡೋದರ ಬಗ್ಗೆ ನಿರ್ದೇಶಕರು ಈ ಮುಂಚೆ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಯಾರಾಗ್ತಾರೆ ಬಿಗ್ ಪಾಸ್ ಹೋಸ್ಟ್ ಎಂಬ ಪ್ರಶ್ನೆಗೆ ಖಾಸಗಿ ವಾಹಿನಿಯೇ ಉತ್ತರ ನೀಡಬೇಕು.