SUDDIKSHANA KANNADA NEWS/ DAVANAGERE/ DATE:21-08-2024
ದಾವಣಗೆರೆ: ದಾವಣಗೆರೆ ನಗರದಲ್ಲಿ ವೇಗದ ವಾಹನ ಚಾಲನೆ, ವೀಲಿಂಗ್, ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿ ಇತರೆ ಬಳಕೆದಾರರ ಜೀವಕ್ಕೆ ತೊಂದರೆಯಾಗುವಂತಹ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ.
ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯಿಂದ ಗಣನಿಯವಾಗಿ ವಾಹನಗಳ ತಪಾಸಣೆ ಕೈಗೊಂಡು ಸಂಚಾರಿ ನಿಯಮಗಳನ್ಮ್ನ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ತಿಳಿಸಿದ್ದಾರೆ.