SUDDIKSHANA KANNADA NEWS/ DAVANAGERE/ DATE:24-02-2025
ದಾವಣಗೆರೆ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗಿಯಾದರು.
ತ್ರಿವೇಣಿ ಸಂಗಮದಲ್ಲಿ ಪುಣ್ಯತೆಯ ಅನುಭವ ಪಡೆಯಲಾಯಿತು. ಸಾವಿರಾರು ಭಕ್ತರ ನಡುವೆ ಪವಿತ್ರ ಸಂಗಮದಲ್ಲಿ ಮಿಂದೇಳಲಾಯಿತು. ತಂಪಾದ ನೀರಿನ ಸ್ಪರ್ಶದಿಂದ ಮನಸ್ಸು ಚೈತನ್ಯಗೊಂಡಿತು ಎಂದು ತಿಳಿಸಿದ್ದಾರೆ.
ನಾನು ಅಲ್ಲಿ ಕಂಡ ನೋಟಗಳು ಅಪರೂಪದವು. ನಾಗಾ ಸನ್ಯಾಸಿಗಳ ಅದ್ಭುತ ಸನ್ನಿಧಾನ, ಗಂಗಾ ಆರತಿಯ ಪವಿತ್ರ ಜ್ಯೋತಿ, ಸನ್ಯಾಸಿಗಳು ಮತ್ತು ಭಕ್ತರ ಜಪ-ತಪದ ಆಧ್ಯಾತ್ಮಿಕ ಶಕ್ತಿ ಅಲ್ಲಿ ಕಂಡುಬಂದಿತು. ಸಂಗಮದ ತೀರದಲ್ಲಿ ಹೋಮ, ಯಜ್ಞ ಮತ್ತು ಪ್ರವಚನಗಳ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು ಎಂದು ಬಣ್ಣಿಸಿದ್ದಾರೆ.
ಆ ಕ್ಷಣ ನಾನು ಕೂಡ ಭಗವಂತನ ಅನುಗ್ರಹವನ್ನು ಅನುಭವಿಸಿದೆ. ನಂಬಿಕೆ, ಭಕ್ತಿ ಮತ್ತು ಶ್ರದ್ಧೆಯಿಂದ ತುಂಬಿದ ಆ ಕ್ಷಣಗಳು ನನ್ನ ಮನಸ್ಸಿಗೆ ಶಾಂತಿ ಮತ್ತು ಸಂತೋಷ ತಂದಿತು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಈ ವೇಳೆ ಸಮರ್ಥ ಶಾಮನೂರು, ಜೇಷ್ಠ ಮತ್ತಿತರರು ಇದ್ದರು.