SUDDIKSHANA KANNADA NEWS/ DAVANAGERE/ DATE-24-04-2025
ಬಿಹಾರ: ಪ್ರಧಾನಿ ನರೇಂದ್ರ ಮೋದಿ ಅಕ್ಷರಕ್ಷಃ ಕೆರಳಿ ಕೆಂಡವಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ 26 ಪ್ರವಾಸಿಗರ ಕೊಂದು ಹಾಕಿದ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಎಲ್ಲೇ ಅಡಗಿ ಕುಳಿತರೂ ನುಗ್ಗಿ ಹೊಡೆಯುತ್ತೇವೆ. ಭಯೋತ್ಪಾದಕರ ಅಡಗು ತಾಣ ಧ್ವಂಸ ಖಚಿತ. ಉಗ್ರರು ಕನಸಿನಲ್ಲೂ ಊಹಿಸದ ಶಿಕ್ಷೆ ಖಚಿತ ಎಂದು ಮೋದಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದು ಪಾಕಿಸ್ತಾನ ಬುಡವೇ ಅಲ್ಲಾಡುವಂತೆ ಮಾಡಿದೆ.
ಬಿಹಾರದ ಮಧುಬನಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಿದರು. ಭಾರತವು ತನ್ನ ಚೈತನ್ಯದ ಮೇಲೆ ದಾಳಿ ಮಾಡಲು ಪ್ರಯತ್ನಿಸುವವರನ್ನು ಬಿಡುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಕಳುಹಿಸುತ್ತಿದ್ದಂತೆ ಪಾಕಿಸ್ತಾನ ಗಡಗಡ ನಡುಗಲು ಶುರುಮಾಡಿದೆ.
ಏಪ್ರಿಲ್ 22 ರ ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ಸ್, ಸ್ಥಳೀಯವಾಗಿ ನೆರವು ನೀಡಿದವರ ಎದೆಯಲ್ಲಿ ಕಂಪನವಾಗಿಯೇ ಆಗಿದೆ. ಅಂಥ ಕಟುಶಬ್ಧಗಳಲ್ಲಿ ಮೋದಿ ಮಾತನಾಡಿದರು. ಉಗ್ರರು ಕನಸಿನಲ್ಲಿಯೂ ಊಹಿಸಿರಬಾರದು. ಇಂಥ ಶಿಕ್ಷೆ ಕೊಟ್ಟೇ ಕೊಡುತ್ತೇವೆ ಎಂದು ಗುಡುಗಿದ್ದಾರೆ.
“ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಆತನ ಬೆಂಬಲಿಗರ ಸಂಹಾರ ಮಾಡುವುದು ಕಟ್ಟಿಟ್ಟ ಬುತ್ತಿ. ಅಲ್ಲಿಯವರೆಗೆ ಭಾರತ ವಿರಮಿಸುವುದಿಲ್ಲ. ಇದು ಭಾರತದ ಆತ್ಮದ ಮೇಲೆ ದಾಳಿ. ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಿಹಾರದ ನೆಲದಲ್ಲಿ, ನಾನು ಇಡೀ ಜಗತ್ತಿಗೆ ಹೇಳುತ್ತೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ ಮತ್ತು ಶಿಕ್ಷಿಸುತ್ತದೆ. ಭಯೋತ್ಪಾದನೆಯಿಂದ ಭಾರತದ ಚೈತನ್ಯ ಎಂದಿಗೂ ಮುರಿಯುವುದಿಲ್ಲ. ಹತ್ಯೆಗೀಡಾದ 26 ಮಂದಿಗೆ ನ್ಯಾಯ ಕೊಡಿಸಿಯೇ ತೀರುತ್ತೇವೆ ಎಂದು ಮೋದಿ ಗುಡುಗಿದ್ದು, ಪಾಕಿಸ್ತಾನವಂತೂ ಏನು ಮಾಡಲು ತೋಚದೇ ಒದ್ದಾಡುತ್ತಿದೆ.