SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ:ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿದ್ದು, ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 180.2 ಅಡಿ ಆಗಿದ್ದು, ಭರ್ತಿಗೆ ಇನ್ನು 5.8 ಅಡಿ ನೀರು ಬೇಕು.
ಜಲಾಶಯಕ್ಕೆ 8419 ಕ್ಯೂಸೆಕ್ ಒಳಹರಿವಿದ್ದು, 7841 ಕ್ಯೂಸೆಕ್ ಹೊರ ಹರಿವಿದೆ. ಇನ್ನೂ ಒಂದು ವಾರಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ಹೇಳಿದ್ದು, ಹಾಗಾಗಿ, ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ.
ಭದ್ರಾ ಎಡದಂಡೆ ನಾಲೆಗೆ 380 ಕ್ಯೂಸೆಕ್ ಹಾಗೂ 2650 ಕ್ಯೂಸೆಕ್ ಭದ್ರಾ ಬಲದಂಡೆ ನಾಲೆಗೆ ಬಿಡಲಾಗುತ್ತಿದೆ. ಕ್ರಸ್ಟ್ ಗೇಟ್ ಮೂಲಕ 2000 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಒಟ್ಟು ಜಲಾಶಯದಿಂದ 7841 ಕ್ಯೂಸೆಕ್ ಹೊರಗಡೆ ಬಿಡಲಾಗುತ್ತಿದೆ.
ಜುಲೈ ತಿಂಗಳಿನಲ್ಲಿ ಅಬ್ಬರಿಸಿ ಬೊಬ್ಬಿರಿದದ್ದ ವರುಣ ಶಾಂತವಾಗಿದ್ದಾನೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು. ಆದ್ರೆ, ಕಳೆದ ವಾರದಿಂದೀಚೆಗೆ ಮಳೆ ಕುಸಿತ ಕಂಡಿದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದ್ದು, ಹೊರ ಹರಿವು ಜಾಸ್ತಿಯಾಕೆ ಎಂಬ ಪ್ರಶ್ನೆ ಎದ್ದಿದೆ.
ಭದ್ರಾ ಜಲಾಶಯದಿಂದ ನೀರು ಹೊರಗಡೆ ಬಿಡುತ್ತಿರುವ ಕಾರಣ ಜಲಾಶಯದ ನೀರಿನ ಮಟ್ಟ ನಿಧಾನವಾಗಿ ಏರುಮುಖವಾಗುತ್ತಿದೆ. ಕೃಷಿ ಚಟುವಟಿಕೆಗಳು ಒಂದೆಡೆ ಗರಿಗೆದರಿದ್ದರೆ, ಮತ್ತೊಂದೆಡೆ ಜಲಾಶಯಕ್ಕೆ ನೀರು ಹೆಚ್ಚು
ಬರಲಿ, ಮತ್ತಷ್ಟು ಸಂಗ್ರಹವಾಗಲಿ ಎಂಬ ಆಶಯ ರೈತರದ್ದಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಈ ಬಾರಿ ಭಾರೀ ಮಳೆಯಾದ ಪರಿಣಾಮ ಜಲಾಶಯವು ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು. ಇದರಿಂದಾಗಿ ‘ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿತ್ತು. ಈಗ ಒಳಹರಿವು ಕಡಿಮೆ ಆಗಿದ್ದು, ಹೊರ ಹರಿವು ಕಡಿಮೆಯಾಗಿದೆ. ಇದರಿಂದಾಗಿ ತಲೆದೋರಿದ್ದ ಪ್ರವಾಹ ಭೀತಿ ದೂರವಾಗಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 16-08-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 180.2 ಅಡಿ
-
ಕೆಪಾಸಿಟಿ: 64.378 ಟಿಎಂಸಿ
-
ಒಳಹರಿವು: 8419 ಕ್ಯೂಸೆಕ್
-
ಕ್ರಸ್ಟ್ ಗೇಟ್ ಹೊರಹರಿವು: 2000 ಕ್ಯೂಸೆಕ್
-
ಭದ್ರಾ ಎಡದಂಡೆ ನಾಲೆ: 380 ಕ್ಯೂಸೆಕ್
-
ಭದ್ರಾ ಬಲದಂಡೆ ನಾಲೆ: 2650 ಕ್ಯೂಸೆಕ್
-
ಅಪ್ಪರ್ ಭದ್ರಾ ಪ್ರಾಜೆಕ್ಟ್: 700 ಕ್ಯೂಸೆಕ್
-
ಒಟ್ಟು ಹೊರ ಹರಿವು: 7841 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 166.9 ಅಡಿ
-
ಕಳೆದ ವರ್ಷ ಇದೇ ದಿನ ಒಳಹರಿವು: 1743 ಕ್ಯೂಸೆಕ್