SUDDIKSHANA KANNADA NEWS/ DAVANAGERE/ DATE:10-03-2024
ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿವೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯತ್ತ ಚಿತ್ತ ನೆಟ್ಟಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ಒಂದೊಂದಾಗಿ ಹೊರ ಬರುತ್ತಿವೆ. ಟೈಮ್ಸ್ ನೌ ಮತ್ತು ಇಟಿಜಿಯ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಎನ್ ಡಿ ಎ ಮೈತ್ರಿಕೂಟ 400 ರ ಗಡಿ ಬರಲಿದೆ.
ಟೈಮ್ಸ್ ನೌ ಸುದ್ದಿವಾಹಿನಿ ಇಟಿಜಿ ಜೊತೆಗೂಡಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಬಿಜೆಪಿ 358-398 ಸ್ಥಾನ ಮತ್ತು ಕಾಂಗ್ರೆಸ್ 28-48 ಸ್ಥಾನ ಗೆಲ್ಲಲಿದೆ ಎಂಬ ವರದಿ ಪ್ರಕಟಗೊಂಡಿದೆ.
ಲೋಕಸಭಾ ಚುನಾವಣೆಗೆ ಯಾವುದೇ ಸಮಯದಲ್ಲಿ ದಿನಾಂಕ ಘೋಷಣೆಯಾಗಬಹುದು ಎಂಬ ಹೊತ್ತಿನಲ್ಲೇ ಈ ವರದಿ ಪ್ರಕಟವಾಗಿದ್ದು, ಇದು ಬಿಜೆಪಿಯ ಈ ಬಾರಿಯ ಕನಸು 400 ಸ್ಥಾನಕ್ಕೆ ಬಹುತೇಕ ಸಮೀಪವಿದೆ.
ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು…?
ಪಶ್ಚಿಮ ಬಂಗಾಳದಲ್ಲಿ ಎನ್ಡಿಎ 20-24, ಟಿಎಂಸಿ 17-21, ಇಂಡಿಯಾ 0-2
ತಮಿಳುನಾಡು: ಇಂಡಿಯಾ 29-35, ಬಿಜೆಪಿ 2-6, ಎಐಎಡಿಎಂಕೆ 1-3
ಆಂಧ್ರಪ್ರದೇಶ: ವೈಎಸ್ಆರ್ ಕಾಂಗ್ರೆಸ್ 21-22, ಟಿಡಿಪಿ-ಜನಸೇನಾ 3-4
ಮಹಾರಾಷ್ಟ್ರ: ಎನ್ಡಿಎ 34-38, ಇಂಡಿಯಾ 9-13
ಮಧ್ಯಪ್ರದೇಶ: ಬಿಜೆಪಿ-28-29, ಇಂಡಿಯಾ 0-1
ರಾಜಸ್ಥಾನ: ಬಿಜೆಪಿ 20-24, ಇಂಡಿಯಾ 0-1
ಬಿಹಾರ: ಎನ್ಡಿಎ 34-39, ಇಂಡಿಯಾ 0-2
ಜಾರ್ಖಂಡ್: ಎನ್ಡಿಎ 12-14, ಇಂಡಿಯಾ 0-2
ಒಡಿಶಾ: ಬಿಜೆಪಿ 10-11, ಬಿಜೆಡಿ 10-11, ಇಂಡಿಯಾ 0-1
ಈ ರಾಜ್ಯಗಳಲ್ಲಿ ಇಷ್ಟು ಸ್ಥಾನಗಳನ್ನು ಎನ್ ಡಿ ಎ ಮೈತ್ರಿಕೂಟ ಜಯಭೇರಿ ಬಾರಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 21 ರಿಂದ 23 ಸ್ಥಾನ, ಕಾಂಗ್ರೆಸ್ 4-6 ಸ್ಥಾನ, ಜೆಡಿಎಸ್ 1-2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಆದ್ರೆ, ಈಗಿನ ಪರಿಸ್ಥಿತಿಗೆ ತಕ್ಕಂತೆ ಈ ಸಮೀಕ್ಷೆ ಬಂದಿದ್ದು, ಇನ್ನು ಎರಡು ತಿಂಗಳು ಫಲಿತಾಂಶಕ್ಕೆ ಬಾಕಿ ಇರುವುದರಿಂದ ಮತ್ತೆ ಏರುಪೇರಾಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಈ ಸಮೀಕ್ಷೆ ತಳ್ಳಿ ಹಾಕಿದ್ದರೆ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಮತದಾರ ಜೈ ಎಂದಿದ್ದಾನೆ ಎಂದು ಬಣ್ಣಿಸಿದೆ.