SUDDIKSHANA KANNADA NEWS/ DAVANAGERE/ DATE:10-03-2025
ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾನಿಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಬಿ.ಎಸ್.ಸಿ ಎಕ್ಸ್ ಕ್ಯೂಸಿವ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಾಯ್ಸ್ ಆಫ್ ವುಮೆನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಜನರ ಮಧ್ಯೆ ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸಲು ಅಲ್ಲಿನ ಮಹಿಳಾ ಸಿಬ್ಬಂದಿಯವರ ಜೊತೆ ಹಾಗೂ ಗ್ರಾಹಕರ ಜೊತೆ ಮುಕ್ತ ಮಾತುಕತೆ ಹಾಗೂ ಮಹಿಳೆಯರಿಗಾಗಿಯೇ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನಗಳನ್ನು ಕೊಡುವುದರ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಜಿ.ಎಂ. ವಿಶ್ವವಿದ್ಯಾನಿಲಯದ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ. ಶ್ವೇತಾ ಮರಿಗೌಡರ್ ಮತ್ತು ಸದಸ್ಯರಾದ ಡಾ. ಶ್ವೇತಾ ಹೆಚ್. ಎಸ್, ಅನುರೂಪ ಕುಮಾರಿ ಆರ್, ನೀಲಾಂಬಿಕೆ ಎಸ್, ನಿವೇದಿತ, ಸ್ವಾತಿ ಡಿ.ಎಂ, ಡಾ. ಜಗದೀಶ್ವರಿ, ಅನು ವಿ. ಬಿ., ಸಯದ ಅಂಜುಮ್, ಪೂಜ ಎಂ.ವಿ, ಅನನ್ಯ ಹಾಗೂ ವಿದ್ಯಾರ್ಥಿ ವೃಂದದವರು ನಡೆಸಿಕೊಟ್ಟರು.
ಬಿ.ಎಸ್.ಸಿ ಎಕ್ಸ್ಕ್ಯೂಸಿವ್ನ ಮಾರ್ಕೆಟಿಂಗ್ ಮುಖ್ಯಸ್ಥರಾದ ವೀರಣ್ಣ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಪ್ರೋತ್ಸಾಹ ಕೊಟ್ಟರು.