SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ಉಪನ್ಯಾಸಕಿ, ಶಿಲ್ಪಿ ಹಾಗೂ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಾಂತಲಾ ಶಿಲ್ಪಾಚಾರ್ಯ ಅವರಿಗೆ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದಿಂದ ಕೊಡಮಾಡುವ ವಿಶ್ವಕರ್ಮ ಮಹಿಳಾ ಸಾಧಕಿ ಪ್ರಶಸ್ತಿ ದೊರೆತಿದೆ.
ಈಚೆಗೆ ಧಾರವಾಡದ ಪಾಟೀಲ ಪುಟ್ಟಪ್ಪ ಸಭಾ ಭವನ ವಿದ್ಯಾವರ್ಧಕ ಸಂಘ ಕಲಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಿಳಾ ಪ್ರಥಮ ಜಾಗೃತಿ ಸಮಾವೇಶದಲ್ಲಿ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಕೆ. ಶಿಲ್ಪಾಚಾರ್ಯ, ರಾಜ್ಯ ಘಟಕದ ಅಧ್ಯಕ್ಷರಾದ ಕನ್ನಡ ಸೋಮು, ಲಕ್ಷ್ಮಿ ಬಡಿಗೇರ್ ಮತ್ತು ವಿಶ್ವ ಕರ್ಮ ಮಹಿಳಾ ಕಣ್ಮಣಿ ಪವಿತ್ರ ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು.