SUDDIKSHANA KANNADA NEWS/ DAVANAGERE/ DATE: 14-01-2024
ದಾವಣಗೆರೆ: 2024ರ ಲೋಕಸಭೆ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿ ಇದೆ. ಎಲ್ಲಾ ಪಕ್ಷಗಳಲ್ಲಿಯೂ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಮುಂದುವರಿದಿದೆ. ಇನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ಅವರ ಪಾದಯಾತ್ರೆ ಶುರುವಾಗಿ ಹಲವು ದಿನಗಳು ಕಳೆದಿವೆ. ಹಳ್ಳಿಹಳ್ಳಿಗಳಿಗೆ ಹೋಗುವ ಮೂಲಕ ಗ್ರಾಮೀಣ ಭಾಗದ ಜನರ ಸಂಕಷ್ಟ ಆಲಿಸುವ ಜೊತೆಗೆ ಮಕ್ಕಳ ಜೊತೆಗೆ ಸಂವಾದ ನಡೆಸುತ್ತಿರುವ ವಿನಯ್ ಕುಮಾರ್ ಅವರ ಸಿಂಪ್ಲಿಸಿಟಿ (Simplicity) ಎಲ್ಲರ ಗಮನ ಸೆಳೆಯುತ್ತಿದೆ.

ಜನರು, ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರ ಹೃದಯದಲ್ಲಿ ನೆಲೆಸುತ್ತಿದ್ದಾರೆ. ಕಾಂಗ್ರೆಸ್ ಯುವ ನೇತಾರನ ಸರಳತೆಗೆ ಜೈ ಹೋ ಎನ್ನುತ್ತಿದ್ದಾರೆ.

ಪಾದಯಾತ್ರೆ ಮೂಲಕ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿರುವ ವಿನಯ್ ಕುಮಾರ್ ಅವರ ಸರಳತೆ, ಮಕ್ಕಳೊಂದಿಗೆ ಬೆರೆಯುವ ರೀತಿ, ಸಂವಾದ, ಶಿಕ್ಷಣದ ಬಗ್ಗೆ ನೀಡುತ್ತಿರುವ ಮೌಲ್ಯಯುತ ಮಾತುಗಳು ಪ್ರತಿಯೊಬ್ಬರನ್ನೂ ಸೆಳೆಯುತ್ತಿದೆ. ಮಾತ್ರವಲ್ಲ, ಹಿರಿಯರು ಆಶೀರ್ವಾದ ಮಾಡುತ್ತಿದ್ದಾರೆ. ಯುವಕರು ವಿನಯ್ ಕುಮಾರ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹತ್ತು ವರ್ಷದ ಸಂಭ್ರಮ
ಒಂದು ಸಂಸ್ಥೆ ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ. ಇಡೀ ದೇಶದ ಗಮನ ಸೆಳೆಯುವಂತೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಭಾರತ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ವಿನಯ್ ಕುಮಾರ್ ಅವರಿಗೆ ಸಲ್ಲುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಜೊತೆಗೆ ಐಎಎಸ್ ಕನಸು ಸಾಕಾರಗೊಳಿಸಿದ ಶಿಕ್ಷಣ ಪ್ರೇಮಿ, ಶಿಕ್ಷಣ ಪ್ರೋತ್ಸಾಹಕ.
ಇನ್‌ಸೈಟ್ ತರಬೇತಿ ಸಂಸ್ಥೆಗೆ 10 ವರ್ಷ ತುಂಬಿರುವುದು 450 ಜನರ ಶ್ರಮದಿಂದ ಸಾರ್ಥಕ ಯಶಸ್ಸು. ದೇಶದಲ್ಲಿಯೇ 3ನೇ ಸ್ಥಾನ ಹೊಂದಿದೆ. ಕಾಶ್ಮಿರದಲ್ಲಿ ಸ್ಥಾಪನೆಗೆ ವಿನಯ್ ಕುಮಾರ್ ಅವರ ಬಂಧು ಶರತ್ ರ ಕೊಡುಗೆ ಅಪಾರ.

ಕನಸು ಕಾಣುವ, ಕನಸು ಪೋಷಿಸುವ ಹಾಗೂ ಕನಸುಗಳ ಸಶಕ್ತಗೊಳಿಸುವ ದಶಕದ ಸಂಭ್ರಮ ಆಚರಿಸುವ ಈ ಸಂಸ್ಥೆಯು ಈಗ ಎಲ್ಲೆಡೆ ಮನೆ ಮಾತಾಗಿದೆ. ಯಶಸ್ಸಿನ ಆಧಾರಸ್ಥಂಭವಾಗಿರುವುದು ವಿದ್ಯಾರ್ಥಿಗಳು. ಕಳೆದ 10 ವರ್ಷಗಳ ಈ ಪ್ರಯಾಣ ಹಲವು ಸಮಸ್ಯೆಗಳನ್ನ ಮೆಟ್ಟಿ ನಿಂತಿದೆ.
Read Also This Story: ನನ್ನ ಕಾಲು ಕಡಿಬೇಕು, ಪಾಯಿಸನ್ ಹಾಕ್ಬೇಕು.. ತೆಗೀಬೇಕು ಎಂಬ ಸಂಚಿದೆ, ಯಾವುದಕ್ಕೂ ಜಗ್ಗಲ್ಲ ಬಗ್ಗಲ್ಲ: ಡಾ. ಜಿ. ಎಂ. ಸಿದ್ದೇಶ್ವರ ಸ್ಫೋಟಕ ಹೇಳಿಕೆ
ಇನ್ಸೈಟ್ಸ್ ಐಎಎಸ್ ನಿಂದ ಹೊರಹೊಮ್ಮಿದ ಪ್ರತಿಯೊಂದು ಯಶಸ್ಸಿನ ಕಥೆಗೆ ವಿದ್ಯಾರ್ಥಿಗಳ, ಪೋಷಕರ ಹಾಗೂ ಜನರ ನಂಬಿಕೆಯೇ ಪ್ರೇರಕ ಶಕ್ತಿ. ಒಟ್ಟಾಗಿ ನಾವು ಸವಾಲುಗಳನ್ನು ಜಯಿಸಿದ್ದೇವೆ, ವಿಜಯಗಳನ್ನು ಆಚರಿಸಿದ್ದೇವೆ. ತರಗತಿಯ ಮಿತಿಗಳನ್ನು ಮೀರಿದ ಬಂಧಗಳನ್ನು ಬೆಸೆದುಕೊಂಡಿದ್ದೇವೆ. ಮುಂಬರುವ ವರ್ಷಗಳಲ್ಲಿಯೂ ಅಸಂಖ್ಯಾತ ಮನಸ್ಸುಗಳನ್ನು ತಲುಪುವ, ಕನಸುಗಳನ್ನು ಪೋಷಿಸುವ ಹಾಗೂ ಪರಿಣಾಮಕಾರಿಯಾದ ಭವಿಷ್ಯವನ್ನು ರೂಪಿಸುವ ಕಾರ್ಯಕ್ಕೆ ನಾವು ಬದ್ಧರಾಗಿದ್ದೇವೆ ಎನ್ನುತ್ತಾರೆ ವಿನಯ್ ಕುಮಾರ್.
VINAY KUMAR ಸಿಂಪ್ಲಿಸಿಟಿ ಅಚ್ಚುಮೆಚ್ಚು
ಇದಿಷ್ಟು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುವ ವಿನಯ್ ಕುಮಾರ್ ಈಗ ಸಿಂಪ್ಲಿಸಿಟಿಯಿಂದ ಪ್ರತಿಯೊಬ್ಬರನ್ನೂ ಸೆಳೆಯುತ್ತಿದ್ದಾರೆ. ಸರಳತೆ ಮೂಲಕ ಮಕ್ಕಳ ಮನ ಗೆದ್ದಿದ್ದಾರೆ.

ಹಿರಿಯರ ಆಶೀರ್ವಾದವನ್ನೂ ಪಡೆದಿದ್ದಾರೆ. ಜೊತೆಗೆ ಯುವಕರು, ಮಹಿಳೆಯರು, ರೈತರು ಸೇರಿದಂತೆ ಎಲ್ಲಾ ವರ್ಗದವರು ಇದ್ದರೆ ಇರಬೇಕು ಈ ರೀತಿಯ ಜನಪ್ರತಿನಿಧಿ ಎಂಬಷ್ಟರ ಮಟ್ಟಿಗೆ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಪಾದಯಾತ್ರೆ ಎಂಬ ರಾಜಕಾರಣದ ದೊಡ್ಡ ಸಂಚಲನ.
ಕಾಂಗ್ರೆಸ್ ಯುವ ನೇತಾರನ ಸರಳತೆ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮುದ್ದು ಮಕ್ಕಳೊಂದಿಗೆ ಮಗುವಾಗಿ ಮಕ್ಕಳಿಗೆ ಜೀವನದಲ್ಲಿ ದೊಡ್ಡ ಕನಸು ಕಾಣಬೇಕು ಎಂದು ತಿಳಿಸುತ್ತಿರುವ ಯುವ ನಾಯಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ಜಿ. ಬಿ. ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದರು. ತಾನೊಬ್ಬ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇನೆ ಎಂಬ ಅಹಂ ಇರಲಿಲ್ಲ, ಮಕ್ಕಳ ಜೊತೆ ಬೆರೆತ ರೀತಿ ಪೋಷಕರು, ಶಿಕ್ಷಕರೂ ಪ್ರಶಂಸೆ ವ್ಯಕ್ತಪಡಿಸಿದರು.

ಜನರ ಸಮಸ್ಯೆಗಳಿಗೆ ಧ್ವನಿಯಾಗುವ ದೃಷ್ಟಿಯಿಂದ, ಪಾದಯಾತ್ರೆಯ ಮೂಲಕ ಜನರ ಬಳಿ ತೆರಳಿ, ಸಮಸ್ಯೆಗಳನ್ನು ಆಲಿಸಿ, ಮುಂದೆ ಅಧಿಕಾರಕ್ಕೆ ಬಂದಾಗ ಆ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿ, ಜನರು ಮತ್ತು ಜನಪ್ರತಿನಿಧಿಗಳ ಮಧ್ಯೆ ಆರೋಗ್ಯಕರ ಬಾಂಧವ್ಯವನ್ನು ಬೆಳೆಸುವುದೇ ಈ ಪಾದಯಾತ್ರೆಯ ಮೂಲ ಉದ್ದೇಶ ಎನ್ನುತ್ತಾರೆ ವಿನಯ್ ಕುಮಾರ್.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನೀವು ಕೈಗೊಂಡಿರುವ ವಿನಯ್ ನಡಿಗೆ ಹಳ್ಳಿಯ ಕಡೆಗೆ ಪಾದಯಾತ್ರೆಯಿಂದ ವಿರೋಧ ಪಕ್ಷದವರಿಗೆ ಈಗಾಗಲೇ ನಡುಕ ಶುರುವಾಗಿದೆ. ಈ ಕ್ಷೇತ್ರದ ಬಡವರು, ದೀನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಕಾಮಿ೯ಕರ ಯುವಕರು ಹಾಗೂ ಪ್ರತಿ ಹಳ್ಳಿಯಲ್ಲಿರುವ ಪ್ರತಿಯೊಬ್ಬರನ್ನು ಭೇಟಿ ಮಾಡಿ ಅವರ ಕಷ್ಟ ನೋವುಗಳ ಬಗ್ಗೆ ಅವರ ಜೊತೆ ಪ್ರೀತಿ, ವಿಶ್ವಾಸ ಸಂತೋಷದಿಂದ ಚರ್ಚಿಸಿ ನಂತರ ಮುಂದಿನ ದಿನಮಾನದಲ್ಲಿ ಅವರ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನೋಟ್ ಮಾಡಿಕೊಳ್ಳುತ್ತಿದ್ದಾರೆ.
ಕ್ಷೇತ್ರದ ಸಂಸದರಾದರೆ…
ಈ ಕ್ಷೇತ್ರದ ಸಂಸದರಾದ ನಂತರ ಹಳ್ಳಿಯ ಜನರ ಸಮಸ್ಯೆಗೆ ಬೇಗನೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಈ ಪಾದಯಾತ್ರೆಯಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇ ಆದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಆಗುವ ಜೊತೆಗೆ ಗ್ರಾಮೀಣಾಭಿವೃದ್ಧಿ ಆಗಲಿದೆ. ಜೊತೆಗೆ ಸಾಕಷ್ಟು ಕನಸುಗಳನ್ನು ಕಂಡಿರುವ ವಿನಯ್ ಕುಮಾರ್ ಅವರು ಈಡೇರಿಸಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರದ ಜನರು ಅಭಿಪ್ರಾಯಪಡತೊಡಗಿದ್ದಾರೆ.
ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು. ಸಂಘಟಿತರಾಗಿ ಎಲ್ಲರೂ ಕೆಲಸ ಮಾಡಬೇಕಿದೆ ಎಂಬ ಅಭಿಪ್ರಾಯವೂ ಬಲವಾಗಿ ಕೇಳಿ ಬರುತ್ತಿದೆ. ಪದವೀಧರರು, ಭಾಷಾ ಕೌಶಲ್ಯ ಇರುವ ಕಾರಣಕ್ಕೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಲವಾಗಿ ಪ್ರತಿಪಾದಿಸುವ ನಾಯಕನಾಗಿ ಬೆಳೆಯುತ್ತಾರೆ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ.

ಎದೆಯಲ್ಲಿ ಕಿಚ್ಚು, ರಾಜಕೀಯ ಹಸಿವು:
ಎದೆಯಲ್ಲಿ ಕಿಚ್ಚಿದೆ ರಾಜಕೀಯದ ಹಸಿವಿದೆ. ಜನರಲ್ಲಿ ಜಾಗೃತಿ ಮೂಡಿಸುವ ಹಂಬಲವಿದೆ ಈ ಯುವನಾಯಕನಿಗೆ. ದಾವಣಗೆರೆ ಗ್ರಾಮೀಣ ಜನರ ಬದುಕು ಹಾಗೂ ಹಳ್ಳಿಗಳು ಉದ್ದಾರವಾದಾಗ ಮಾತ್ರ ದೇಶ ಉದ್ದಾರವಾಗಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿರುವ ವಿನಯ್ ಕುಮಾರ್ ಅವರು, ಈಗಾಗಲೇ ಜಗಳೂರು, ಹೊನ್ನಾಳಿ, ಚನ್ನಗಿರಿಯಲ್ಲಿ ಜನರ ಬಳಿಗೆ ಹೋಗಿ ಸಹಕಾರ ಕೋರುತ್ತಿದ್ದಾರೆ.

ವಿನಯ್ ನಡಿಗೆ ಹಳ್ಳಿಕಡೆಗೆ ಪಾದಯಾತ್ರೆ ಹೊನ್ನಾಳಿ ತಾಲೂಕಿನಲ್ಲಿಯೂ ಧೂಳೆಬ್ಬಿಸಿದೆ. ಚುನಾವಣೆ ಘೋಷಣೆಗೂ ಮುನ್ನ ಜನರ ಬಳಿಗೆ ಬಂದು ಕಷ್ಟ ಆಲಿಸುತ್ತಿರುವ ವಿನಯ್ ಕುಮಾರ್ ಅವರ ರಾಜಕೀಯ ಹೆಜ್ಜೆ ಹಾಗೂ ಪ್ರಯತ್ನಕ್ಕೆ ಶಹಬ್ಬಾಸ್ ಎನ್ನತೊಡಗಿದ್ದಾರೆ ಜನರು.
ಏನಂತಾರೆ ವಿನಯ್ ಕುಮಾರ್…?
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ. ಪಕ್ಷದ ಹೈಕಮಾಂಡ್, ರಾಜ್ಯ ನಾಯಕರು, ಕೇಂದ್ರ ನಾಯಕರು, ಸ್ಥಳೀಯ ನಾಯಕರ ಸಹಕಾರ ದೊರೆತರೆ ಗೆಲುವು ಕಷ್ಟ ಸಾಧ್ಯವೇನಲ್ಲ. ನಾನು ರಾಜಕಾರಣದ ಮುನ್ನಲೆಗೆ ಬಂದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ನನಗೆ ಯಾವುದೇ ಅಡೆ-ತಡೆ ಬಂದಿಲ್ಲ, ನನಗೆ ಪಕ್ಷದ ಮುಖಂಡರು ಮತ್ತು ಜನರು ಸಹಕಾರ ನೀಡುತ್ತಿದ್ದಾರೆ. ಶಿಕ್ಷಣ ಮತ್ತು ಹೋರಾಟ ಎರಡು ನನಗೆ ಯಶಸ್ಸು ತಂದುಕೊಟ್ಟಿವೆ ಎಂದು ಹೇಳುತ್ತಾರೆ.

ಎಲ್ಲಾ ವರ್ಗದವರ ಸಹಕಾರ
ನಾನು ಹೋದ ಕಡೆಗಳಲ್ಲಿ ಯಾವುದೋ ಒಂದು ಜಾತಿ, ಸಮುದಾಯ, ಧರ್ಮದವರಷ್ಟೇ ಅಲ್ಲ, ಎಲ್ಲಾ ಜಾತಿ, ಧರ್ಮ, ಸಮುದಾಯವರು ಬೆಂಬಲಿಸುತ್ತಿದ್ದಾರೆ, ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರತಿಯೊಬ್ಬರು ಅಕ್ಕರೆಯಿಂದ ಸ್ವಾಗತಿಸುತ್ತಿದ್ದಾರೆ, ಪಾದಯಾತ್ರೆ ವೇಳೆ ಜನರ ಕಷ್ಟ, ಸರ್ಕಾರಿ ಶಾಲೆಗಳ ಮಕ್ಕಳ ಸಮಸ್ಯೆ, ರೈತರು ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳು ಗಮನಕ್ಕೆ ಬಂದಿವೆ. ಅವುಗಳನ್ನು ಪರಿಹರಿಸಬೇಕೆಂಬ ಅದಮ್ಯ ಬಯಕೆ, ಉತ್ಸಾಹ ಇದೆ. ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ವಿನಯ್ ಕುಮಾರ್.







