ವಾಷಿಂಗ್ಟನ್: ಕೆನಡಾವನ್ನು ಅಮೆರಿಕದ ಭಾಗವಾಗಿಸುವ ಬಗ್ಗೆ ಹೇಳಿಕೆ ನೀಡುತ್ತಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ದೇಶದ ಭೂಪಟದಲ್ಲಿ ಕೆನಡಾದ ಭಾಗವನ್ನೂ ಸೇರಿಸಿರುವ ಚಿತ್ರವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ಕ್ರಮಕ್ಕೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರಾಡೋ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕದ 51 ರಾಜ್ಯಗಳ ಭೂಪಟದೊಂದಿಗೆ ಕೆನಡಾದ ಕೆಲವು ಭಾಗವನ್ನೂ ಅಮೆರಿಕ ಎಂದೇ ಗುರುತಿಸಿರುವ ಚಿತ್ರವೊಂದನ್ನು ಟ್ರಂಪ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಓಹ್ ಕೆನಡಾ’ ಎಂದು ಶೀರ್ಷಿಕೆ ನೀಡಿದ್ದಾರೆ.
ತಕ್ಷಣವೇ ಕೆನಡಾ ಪ್ರಧಾನಿ ಜಸ್ಟೀನ್ ಟ್ರಾಡೋ ಅವರ ಲಿಬರಲ್ ಪಕ್ಷವು ಇದಕ್ಕೆ ತಿರುಗೇಟು ನೀಡಿದ್ದು, ಕೆನಡಾ ಹಾಗೂ ಅಮೆರಿಕದ ಭೂಪಟವನ್ನು ಪ್ರತ್ಯೇಕಿಸಿರುವ ಚಿತ್ರ ಹಂಚಿಕೊಂಡಿದೆ.