SUDDIKSHANA KANNADA NEWS/ DAVANAGERE/ DATE:30-01-2025
ದಾವಣಗೆರೆ: ಜಿಎಂ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಹಾವಿದ್ಯಾಲಯದ ಆವರಣದಲ್ಲಿನ ಎಂಬಿಎ ಸಭಾಂಗಣದಲ್ಲಿ ದಿಶಾ – 2 ಕೆ 25 ಪೊರಂ ಸಮಾರಂಭ ಹಾಗೂ 2024-26ನೇ ಸಾಲಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು.
ಮುದ್ದೇನಹಳ್ಳಿ ವಿಟಿಯು ಸಿಪಿಜಿಎಸ್ ಸಹ ಪ್ರಾಧ್ಯಾಪಕ ಬಿನೋಯ್ ಮ್ಯಾಥ್ಯೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೋಲು ಕಂಡಾಗ ಕುಗ್ಗದೇ ಧೈರ್ಯವಾಗಿ ಗೆಲುವು ಸಾಧಿಸುವುದೇ ನಿಜವಾದ ಯಶಸ್ಸು ಎಂದು ಅಭಿಪ್ರಾಯಪಟ್ಟರು.
ಜೀವನದಲ್ಲಿ ಬರುವ ಸವಾಲುಗಳನ್ನೇ ಅನುಭವವಾಗಿ ಸ್ವೀಕರಿಸುತ್ತಾ ಮುಂದೆ ಸಾಗಿದರೆ ಗುರಿ ಸಾಧನೆ ಸಾಧ್ಯ. ಜೀವನದಲ್ಲಿ ಮೊದಲು ಗುರಿ ಇರಬೇಕು. ಆಗ ಸಾಧನೆ ಮಾಡಬಲ್ಲೆವು. ಜೀವನ ಸಾಧನೆಗೆ ಸಾಕಷ್ಟು ಮಾರ್ಗಗಳು, ಬದುಕು ಕಟ್ಟಿಕೊಳ್ಳಲು
ಸಾಕಷ್ಟು ಉದ್ಯೋಗ ಅವಕಾಶ ಉಂಟು. ಇವುಗಳ ಪಡೆಯುವ ಶಕ್ತಿ ನಿಮ್ಮ ಕೈಯಲ್ಲಿದೆ. ಅದೆಲ್ಲಾ ನಿಮ್ಮ ಶ್ರಮ, ನಿಮ್ಮ ಮೇಲೆಯೇ ನಂಬಿಕೆ ಮುಖ್ಯ ಎಂದು ಸಲಹೆ ನೀಡಿದರು.
ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ ಮಾತನಾಡಿ, ಏನು ಮಾಡಬೇಕು, ಯಾವುದು ಮಾಡಬಾರದು, ಏನು ಮಾಡುತ್ತಿದ್ದೇವೆ ಎಂಬುದರ ಅರಿವು ನಿಮಗಿರಬೇಕು. ಆಗ ವಿದ್ಯಾಭ್ಯಾಸದಲ್ಲಾಗಲೀ, ಉಜ್ವಲ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಯಶಸ್ವಿ ಕಾಣಬಹುದು. ನಮ್ಮ ಗುರಿ ಸಾಧನೆ ಕಡೆ ಇದ್ದಾಗ ಯಾವುದೇ ಕಷ್ಟ, ಕೆಡಕು ನಮ್ಮ ಯಶಸ್ವಿಗೆ ಕಾರಣವಾಗಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ನಿರ್ದೇಶಕ ಡಾ. ಬಿ. ಬಕ್ಕಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ, ನಿರಂತರವಾಗಿ ಮುಂದೊರಿಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜು ಪಿ.ಎಸ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ.ಆರ್ ಸೇರಿದಂತೆ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.