SUDDIKSHANA KANNADA NEWS/ DAVANAGERE/ DATE-05-06-2025
ದಾವಣಗೆರೆ: 2024-2025 ನೇ ಸಾಲಿನಲ್ಲಿ ನಡೆದ JEE advanced Examination ಫಲಿತಾಂಶ, ಪ್ರಕಟಗೊಂಡಿದೆ. ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್. ವಿ. ಯದುನಂದನ್ 2076 ನೇ ರ್ಯಾಂಕ್ ಗಳಿಸಿದ್ದಾರೆ. ಈ ಮೂಲಕ ಸಿದ್ಧಗಂಗಾ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗೆ ಗುರುವಾರ ಕಾಲೇಜಿನ ಆವರಣದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ, ಕಾರ್ಯದರ್ಶಿಗಳಾದ ಡಿ. ಎಸ್. ಹೇಮಂತ್, ನಿರ್ದೇಶಕರಾದ ಡಾ. ಜಯಂತ್ ಡಿ.ಎಸ್., ಪ್ರಾಂಶುಪಾಲರಾದ ವಾಣಿಶ್ರೀ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ವಿದ್ಯಾರ್ಥಿ ಎಸ್. ವಿ. ಯದುನಂದನ್‌ಗೆ ಅವರ ಪೋಷಕ ವರ್ಗದವರ ಸಮಕ್ಷಮದಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಮೆಚ್ಚುಗೆಯ ಕರತಾಡನದೊಂದಿಗೆ ಸನ್ಮಾನ ಮಾಡಿ ಗೌರವ ಸಮರ್ಪಣೆ ಮಾಡಲಾಯಿತು.
ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಅವರು, ಎಸ್.ವಿ.ಯದುನಂದನ್ ಸಾಧನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದರು.
ಹಿರಿಯ ಭೌತಶಾಸ್ತ್ರ ಉಪನ್ಯಾಸಕರಾದ ಎಲ್ ವಿ ಸುಬ್ರಮಣ್ಯ ಹಾಗೂ ಪ್ರಾಂಶುಪಾಲರಾದ ವಾಣಿಶ್ರೀ ಅವರು ವಿದ್ಯಾರ್ಥಿಗೆ ಅಭಿನಂದನೆಗಳನ್ನು ತಿಳಿಸಿದರು.