ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗಸ್ತು ಕರ್ತವ್ಯದಲ್ಲಿ ಲೋಪ: ಮೂವರು ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿ ಎಸ್ಪಿ ಉಮಾ ಪ್ರಶಾಂತ್ ಆದೇಶ!

On: February 20, 2025 11:08 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-02-2025

ದಾವಣಗೆರೆ: ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಆದೇಶಿಸಿದ್ದಾರೆ.

ಬಸವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಮಂಜಪ್ಪ, ಕಾನ್ಸ್ ಟೇಬಲ್ ಪಿ. ಆಕಾಶ್ ಹಾಗೂ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯ ಹಿರಿಯ ಕಾನ್ ಸ್ಟೇಬಲ್ ಹೆಚ್. ಚಂದ್ರಶೇಖರ್ ಸಸ್ಪೆಂಡ್ ಆದ ಪೊಲೀಸ್ ಸಿಬ್ಬಂದಿಗಳು.

ಬಸವನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಈ ಹಿಂದೆ ಸಾಕಷ್ಟು ಬಾರಿ ರಾತ್ರಿ ಗಸ್ತು ಸಮಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಪರಿಶೀಲಿಸಲು ಠಾಣಾ ಸರಹದ್ದಿನಲ್ಲಿ ನಿಯೋಜಿಸಲಾಗಿತ್ತು. ವ್ಯಾಪಾರ ವಹಿವಾಟು ಹೆಚ್ಚಾಗಿದ್ದು, ಮಂಡಿಪೇಟೆ ಮತ್ತು ಬಿನ್ನಿ ಕಂಪನಿ ರಸ್ತೆ, ಎನ್.ಆರ್ ರಸ್ತೆಗಳಲ್ಲಿ ಜ್ಯೂವೆಲ್ಲರಿ ಅಂಗಡಿಗಳಿವೆ. ಹೆಚ್ಚಾಗಿ ಗಸ್ತು ಮಾಡುತ್ತಾ ಸುಭಾಹು ತಂತ್ರಾಂಶದಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ಅಲ್ಲಿನ ಪಾಯಿಂಟ್‌ ರೀಡ್ ಮಾಡಿ, ಅಲ್ಲಿನ ಪಾಯಿಂಟ್ ಬುಕ್ಕಿಗೆ ಕಡ್ಡಾಯವಾಗಿ ಸಹಿ ಮಾಡುವಂತೆ ಸೂಚಿಸಲಾಗಿತ್ತು.

ಆದ್ರೆ. ಕಳೆದ ಜನವರಿ 29ರಂದು ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗಳಿಗೆ ರಾತ್ರಿ ಗಸ್ತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮತ್ತು ಮೇಲಾಧಿಕಾರಿಗಳ ಆದೇಶದಂತೆ ಎಲ್ಲಾ ಪಾಯಿಂಟ್‌ಗಳಿಗೆ ರೀಡ್ ಮಾಡಿ ಬೀಟ್ ಪುಸ್ತಕಗಳಿಗೆ ಸಹಿ ಮಾಡುವಂತೆ ಸೂಚಿಸಿ ಮಂಜಪ್ಪ, ಹೆಚ್‌ಸಿ-196 ಮತ್ತು ಆಕಾಶ್.ಪಿ., ಸಿಪಿಸಿ-515 ರವರುಗಳಿಗೆ ಸೂಚಿಸಿದ ಠಾಣೆಯ ಬೀಟ್‌ಗಳಿಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಿಸಿ ಕಳುಹಿಸಿಕೊಡಲಾಗಿತ್ತು. ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸದೇ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೇ ಆ ದಿನ ರಾತ್ರಿ ಸಮಯದಲ್ಲಿ ಬಿ.ಸಿ ರಸ್ತೆಯ ಉಪಹಾರದರ್ಶಿನಿ ಹೋಟೆಲ್ ಪಕ್ಕದ ಜ್ಯೂವೆಲರ್ಸ್ ಅಂಗಡಿಯಲ್ಲಿ ಯಾರೋ ಕಳ್ಳರು ಸುಮಾರು 18 ಲಕ್ಷ ಬೆಲೆ ಬಾಳುವ ಬೆಳ್ಳಿ ಸಾಮಾನುಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಆ ದಿನ ಸರಿಯಾಗಿ ಕರ್ತವ್ಯ ನಿರ್ವಹಿಸದೇ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿದ್ದರು. ರಸ್ತೆಯಲ್ಲಿ ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ಸರಿಯಾಗಿ ಪರಿಶೀಲಿಸದೇ ಇರುವುದು
ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಈ ಸಿಬ್ಬಂದಿಗಳ ವಿರುದ್ಧ ಇಲಾಖಾ ಶಿಸ್ತು ಕ್ರಮವನ್ನು ಜರುಗಿಸಲು ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಅವರು ಕೋರಿದ್ದರು. ನಗರ ಉಪವಿಭಾಗದ ಡಿವೈಎಸ್‌ಪಿ ಮುಂದಿನ ಕ್ರಮಕ್ಕಾಗಿ
ಕಛೇರಿಗೆ ವರದಿ ಸಲ್ಲಿಸಿದ್ದರು.

ವರದಿ ಪರಿಶೀಲಿಸಲಾಗಿ ಹೆಡ್ ಕಾನ್ ಸ್ಟೇಬಲ್ ಟಿ. ಮಂಜಪ್ಪ, ಆಕಾಶ್ ಪಿ. ರಾತ್ರಿ ಗಸ್ತು ಕರ್ತವ್ಯ ಸರಿಯಾಗಿ ಮಾಡಿಲ್ಲ. ಆದ್ದರಿಂದ ಬೆಲೆ ಬಾಳುವ ಬೆಳ್ಳಿ ಸಾಮಾನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಲು ಪರೋಕ್ಷವಾಗಿ
ಕಾರಣೀಕರ್ತರಾಗುವ ಮೂಲಕ ಸಿಬ್ಬಂದಿಗಳು ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡುಬಂದಿರುವುದರಿಂದ ಮುಂದಿನ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿಕೊಂಡು ತಕ್ಷಣದಿಂದಲೇ ಸೇವೆಯಿಂದ ಅಮಾನತ್ತಿಲ್ಲಿರಿಸಿ ಆದೇಶಿಸಿದ್ದಾರೆ.

ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನ ಬಾಡಾ ಕ್ರಾಸ್‌ನಲ್ಲಿ ಪ್ರತಿ ವಾಹನ ತಪಾಸಣೆ ಸಲುವಾಗಿ ನಾಕಾಬಂಧಿ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದು, ಅದರಂತೆ ಬಾಡಾ ಕ್ರಾಸ್ ನಾಕಾಬಂಧಿಯಲ್ಲಿ ವಾಹನಗಳ ತಪಾಸಣೆ ಕಾರ್ಯಕ್ಕೆ ಜನವರಿ 29ರಂದು ರಾತ್ರಿ ಠಾಣಾ ಸಿಬ್ಬಂದಿಗಳಾದ ಚಂದ್ರಶೇಖರ, ಹಾಗೂ ಗೃಹ ರಕ್ಷಕ ಸಿಬ್ಬಂದಿರವರನ್ನು ನೇಮಕ ಮಾಡಿ ಸೂಕ್ತ ಸೂಚನೆಗಳನ್ನು ನೀಡಿ ಎಲ್ಲಾ ವಾಹನಗಳು ಮತ್ತು ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡುವಂತೆ ಸೂಚಿಸಿ ಕಳುಹಿಸಲಾಗಿತ್ತು.

ಆದ್ರೆ ಕೇವಲ 21 ವಾಹನಗಳನ್ನು ತಪಾಸಣೆ ಮಾಡಿದ ಬಗ್ಗೆ ನಾಕಾಬಂಧಿ ಪುಸ್ತಕದಲ್ಲಿ ನಮೂದು ಮಾಡಿದ್ದು, ಅನುಮಾನಾಸ್ಪದ ವಾಹನಗಳು, ವ್ಯಕ್ತಿಗಳು ಹಾಗೂ ಎಲ್ಲಾ ವಾಹನಗಳ ತಪಾಸಣೆ ಮಾಡಿ ಪರಿಶೀಲಿಸಿ ರಿಜಿಸ್ಟರ್‌ನಲ್ಲಿ ನಮೂದು ಮಾಡಬೇಕು ಎಂದು ಸೂಕ್ತ ಸೂಚೆನಗಳನ್ನು ನೀಡಲಾಗಿತ್ತು.

ಆದ್ರೆ ದಾವಣಗೆರೆ ನಗರ ವ್ಯಾಪ್ತಿಯ ಬಸವನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ಸಮಯದಲ್ಲಿ ಬಿ.ಸಿ ರಸ್ತೆಯ ಉಪಹಾರ ದರ್ಶಿನಿ ಹೋಟೆಲ್ ಪಕ್ಕದ ಜ್ಯೂವೆಲರ್ಸ್ ಅಂಗಡಿಯಲ್ಲಿ ಯಾರೋ ಕಳ್ಳರು ಸುಮಾರು 18 ಲಕ್ಷ ಬೆಲೆ ಬಾಳುವ ಬೆಳ್ಳಿ ಸಾಮಾನು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳ್ಳತನ ಮಾಡಿದಂತಹ ಆಸಾಮಿಗಳು ಪಲ್ಸರ್ ಬೈಕಿನಲ್ಲಿ ಠಾಣಾ ಸರಹದ್ದಿನ ಬಾಡಾ ಕ್ರಾಸ್ ಚೆಕ್‌ ಪೋಸ್ಟ್ ನಿಂದ ಹೋಗಿರುವುದು ಸ್ಮಾರ್ಟ್ ಸಿಟಿಯ ಸಿಸಿಟಿವಿ ಕಮಾಂಡೋ ಸೆಂಟರ್ ಕೊಠಡಿಯಿಂದ ಕಂಡುಬಂದಿದೆ. ಬಾಡಾ ಕ್ರಾಸ್‌ನಲ್ಲಿ ಇದ್ದಂತಹ ಸಿಬ್ಬಂದಿ ವಾಹನಗಳನ್ನು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿದ್ದಲ್ಲಿ, ಕಳ್ಳತನದ ಆರೋಪಿತರನ್ನು ಕೂಡಲೇ ಬಂಧಿಸಬಹುದಾಗಿತ್ತು. ಕಳ್ಳತನ ಮಾಲು ಸಹ ಪತ್ತೆ ಮಾಡಬಹುದಿತ್ತು.

ಸಿಬ್ಬಂದಿಯವರು ಆ ದಿನ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಅತೀವ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಶಿಸ್ತು ಕ್ರಮವನ್ನು ಜರುಗಿಸುವಂತೆ ಆಜಾದ್‌ನಗರ ವೃತ್ತದ ಸಿಪಿಐ ಮತ್ತು ಡಿವೈಎಸ್‌ಪಿ ಅವರು ಸಿಬ್ಬಂದಿ ವಿರುದ್ದ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸಿದ್ದರು.

ಈ ಅನ್ವಯ ಮುಂದಿನ ಇಲಾಖಾ ಶಿಸ್ತು ಕ್ರಮವನ್ನು ಬಾಕಿ ಇರಿಸಿಕೊಂಡು ತಕ್ಷಣದಿಂದಲೇ ಜಾರಿಗೆ ಬರುವಂತೆ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಿ ಎಸ್ಪಿ ಉಮಾ ಪ್ರಶಾಂತ್ ಅವರು ಆದೇಶಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment