SUDDIKSHANA KANNADA NEWS/ DAVANAGERE/ DATE:05-01-2025
ದಾವಣಗೆರೆ: ಊಟಕ್ಕೆ ಸೇರೋದು ತಪ್ಪಾ. ನೀವು ನಾಲ್ಕೈದು ಜನರು ಊಟಕ್ಕೆ ಸೇರಲ್ವಾ. ನಾವೂ ಹಾಗೂ ನೀವೂ ಊಟ ಮಾಡುವುದೂ ಒಂದೇ. ಮಾಂಸಹಾರ, ಸಸ್ಯಹಾರ ಸೇವಿಸುತ್ತಾರೆ. ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟುತ್ತಾರೆ. ಬೇರೆಯವರು ಊಟಕ್ಕೆ ಸೇರಿದರೆ ಬಣ್ಣ ಕಟ್ಟುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆ ನಗರದ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮುಂಚೆ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಔತಣಕೂಟಕ್ಕೆ ಸೇರಿದಾಗ ಯಾವುದೇ
ರಾಜಕೀಯ ಚರ್ಚೆ ನಡೆದಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ಊಹಾಪೋಹ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಕೆಎಸ್ ಆರ್ ಟಿ ಸಿ ಬಸ್ ದರ ಎಲ್ಲಾ ಕಾಲದಲ್ಲಿಯೂ ಏರಿಸಿಕೊಂಡು ಬರಲಾಗಿದೆ . ಎಲ್ಲಾ ಸರ್ಕಾರದಲ್ಲಿಯೂ ಆಗಿದೆ. ನೌಕರರ ಸಂಬಳ ಜಾಸ್ತಿಯಾಗುತ್ತದೆ. ಡೀಸೆಲ್ ಬೆಲೆ ಹೆಚ್ಚಾಗುತ್ತದೆ. ಬಸ್ ನ ಬೆಲೆಯೂ ಹೆಚ್ಚಳವಾಗುತ್ತದೆ. ಐದು ವರ್ಷಗಳ
ಹಿಂದೆ ಸಾರಿಗೆ ದರ ಏರಿಸಲಾಗಿತ್ತು. ಎಲ್ಲಾ ಕೆ ಎಸ್ ಆರ್ ಟಿ ಸಿ ಕಾರ್ಪೊರೇಷನ್ ತೊಂದರೆಯಲ್ಲಿವೆ ಹಾಗೂ ದರ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಈಗ ಮಾಡಿದ್ದೇವೆ. ಬಿಜೆಪಿಯವರು ಹಾಗೂ ಹೆಚ್. ಡಿ. ಕುಮಾರಸ್ವಾಮಿ
ಅಧಿಕಾರದ ಕಾಲದ ಅವಧಿಯಲ್ಲಿ ದರ ಹೆಚ್ಚಳ ಮಾಡಿರಲಿಲ್ವ. ಕೇಂದ್ರ ಸರ್ಕಾರದವವರು ರೈಲ್ವೆ ದರ ಏರಿಸಿಲ್ಲವಾ ಎಂದು ಪ್ರಶ್ನಿಸಿದರು.