SUDDIKSHANA KANNADA NEWS/ DAVANAGERE/ DATE:25-03-2025
ಮುಂಬೈ: ಬಿಜೆಪಿ ಜೊತೆ ಸೇರಿದ್ದಕ್ಕೆ ದೇಶದ್ರೋಹಿ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ಮಹಾರಾಷ್ಟ್ರ ಡಿಸಿಎಂ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ಎಲ್ಲದಕ್ಕೂ ಮಿತಿ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕುನಾಲ್ ಕಮ್ರಾ ಅವರ ದೇಶದ್ರೋಹಿ ಆರೋಪಕ್ಕೆ ಏಕನಾಥ್ ಶಿಂಧೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಮಗೆ ವಿಡಂಬನೆ ಅರ್ಥವಾಗುತ್ತದೆ, ಆದರೆ ಮಿತಿ ಇರಬೇಕು. ಕುನಾಲ್ ಕಮ್ರಾ ‘ದೇಶದ್ರೋಹಿ’ ಎಂಬ ಟೀಕೆಗೆ ಈ ಉತ್ತರ ಕೊಟ್ಟಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಮಂಗಳವಾರ ತಮ್ಮ ಮೇಲೆ ಸ್ಟ್ಯಾಂಡ್-ಅಪ್ ಹಾಸ್ಯನಟ ಕುಮಾರ್ ಕಮ್ರಾ ಅವರ ‘ಗದ್ದರ್’ (ದೇಶದ್ರೋಹಿ) ಜೋಕ್ ಕುರಿತು ನಡೆಯುತ್ತಿರುವ ರಾಜಕೀಯ ಬಿರುಗಾಳಿಯ ಬಗ್ಗೆ ಮಾತನಾಡಿದರು.
ಆಡಳಿತ ವ್ಯವಸ್ಥೆಯ ಕಟುವಾದ ಟೀಕೆಗಳಿಗೆ ಹೆಸರುವಾಸಿಯಾದ ಕುನಾಲ್ ಕಮ್ರಾ ಭಾನುವಾರ ಶಿಂಧೆಯನ್ನು ಗುರಿಯಾಗಿಸಿಕೊಂಡು ಹಾಸ್ಯ ಮಾಡುವ ಮೂಲಕ ಭಾರಿ ವಿವಾದಕ್ಕೆ ಕಾರಣರಾದರು. ಯಾರನ್ನೂ ಹೆಸರಿಸದೆ, ಕಮ್ರಾ ಬಾಲಿವುಡ್ ಚಿತ್ರ ದಿಲ್ ತೋ ಪಾಗಲ್ ಹೈ ಯ ಜನಪ್ರಿಯ ಹಾಡಿನ ಸಾಹಿತ್ಯವನ್ನು ತಿರುಚುವ ಮೂಲಕ ಶಿಂಧೆ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು, ಇದಕ್ಕೆ ಶಿವಸೇನಾ ನಿಷ್ಠಾವಂತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
“ವಾಕ್ ಸ್ವಾತಂತ್ರ್ಯವಿದೆ. ನಮಗೆ ವಿಡಂಬನೆ ಅರ್ಥವಾಗುತ್ತದೆ. ಆದರೆ ಅದಕ್ಕೊಂದು ಮಿತಿ ಇರಬೇಕು” ಎಂದು ಉಪಮುಖ್ಯಮಂತ್ರಿ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.