SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರದ ಜವಾಬ್ದಾರಿ ಎಂದು ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಸ್ವಾಮಿಗಳು ತಿಳಿಸಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋ ಮಾತೆಯನ್ನು ಅತ್ಯಂತ ಪೂಜ್ಯ ಸ್ಥಾನದಿಂದ ಕಾಣುತ್ತೇವೆ. ಗೋವಿನಲ್ಲಿ 33 ಕೋಟಿ ದೇವಾನುದೇವತೆಗಳು ವಾಸ ಮಾಡಿದ್ದಾರೆ ಎಂಬ ಭಾವನೆಯಿಂದ ಇಂದಿಗೂ ಗೋವುಗಳನ್ನು ಪೂಜಿಸಿ ಮುನ್ನಡೆಯುತ್ತೇವೆ. ಆದರೆ ಕೆಲವರು ಜಾತಿಯ ಸಂಘರ್ಷದಲ್ಲಿ ಉದ್ದೇಶ ಪೂರ್ವಕವಾಗಿ ಗೋವುಗಳಿಗೆ ಈ ರೀತಿ ಹಿಂಸೆ ನೀಡುವುದು ಸರಿಯಲ್ಲ ಎಂದು ತಿಳಿಸಿದರು.
ಇಂದು ಹಿಂದೂ ಮಠಾಧೀಶರಲ್ಲಿ ಏಕಾಭಿಪ್ರಾಯ ಇಲ್ಲದ ಕಾರಣ ಇಂತಹ ಕೃತ್ಯಗಳು ನಡೆಯುತ್ತವೆ. ಮುಂದಿನ ದಿನಗಳಲ್ಲಾದರೂ ಹಿಂದೂ ಸಂಸೃತಿಯ ಸಂವರ್ಧನೆಗೆ ಮಠಾಧೀಶರು ಸಾರ್ವಜನಿಕವಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.