SUDDIKSHANA KANNADA NEWS/ DAVANAGERE/ DATE-09-06-2025
ದಾವಣಗೆರೆ: ಮನೆ ಕಳುವು ಮಾಡಿದ್ದ ಆರೋಪಿತರ ಬಂಧಿಸಿರುವ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಪೊಲೀಸರು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ವಶಪಡಿಸಿಕೊಂಡಿದ್ದಾರೆ.
ಕಾರಿಗನೂರು ಗ್ರಾಮದ ಕೂಲಿ ಕೆಲಸ ಮಾಡುತ್ತಿದ್ದ ಹರೀಶ್ ನಾಯ್ಕ್ ಅಲಿಯಾಸ್ ಲೂಲಿ (22), ರವಿನಾಯ್ಕ ಅಲಿಯಾಸ್ ಕಬ್ಬಳ ರವಿ (40), ಹರೀಶನಾಯ್ಕ (30) ಬಂಧಿತ ಆರೋಪಿಗಳು.
ಕಳೆದ ತಿಂಗಳು ಮೇ 21 ರಂದು ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಲಕ್ಷ್ಮೀ ಎಸ್.ಪಿ. ಅವರು ಮೇ 19ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಅಕ್ಕನ ಮಗಳ ಕಾರ್ಯಕ್ಕೆಂದು ಆಲೂರುಹಟ್ಟಿ ಹೋಗಿದ್ದರು.
ಈ ವೇಳೆ ಯಾರೋ ಕಳ್ಳರು ಮನೆಯ ಹಂಚನ್ನು ತೆಗೆದು ಮನೆಯೊಳಗೆ ಹೋಗಿ ಬೀರನ್ನು ಮುರಿದು ಬೀರುವಿನಲ್ಲಿದ್ದ 50 ಸಾವಿರ ಬೆಲೆ ಬಾಳುವ ಬೆಳ್ಳಿ ಆಭರಣಗಳು. 70 ಸಾವಿರ ಬೆಲೆ ಬಾಳುವ ಬಂಗಾರದ ಆಭರಣಗಳು, ನಗದು ಸೇರಿ ಒಟ್ಟು 1,30,000 ರೂ ಆಗಿದ್ದು, ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಬಸವಾಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು.
ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಇಮ್ಮಿಯಾಜ್ ಹಾಗೂ ಸಿಬ್ಬಂದಿ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ವಿಚಾರಣೆ ವೇಳೆ ಆರೋಪಿತರು ಪ್ರಕರಣ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡು ಕಾರಿಗನೂರು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ಹಿಂಭಾಗದ ಖಾಲಿ ಜಾಗದಲ್ಲಿ ಮುಚ್ಚಿಟ್ಟಿದ್ದ ಸುಮಾರು 80 ಸಾವಿರ ಬೆಲೆ ಬಾಳುವ
ಬೆಳ್ಳಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಬಸವಾಪಟ್ಟಣ ಠಾಣೆಯ ಪಿಎಸ್ಐ ಇಮ್ಮಿಯಾಜ್, ಸಿಬ್ದಂದಿಯವರಾದ ರಂಗನಾಥ, ಬಸವರಾಜ, ಇಬ್ರಾಹಿಂ, ಯೋಗೇಶ್, ಮೋಹನ್, ಅಂಜಿನಪ್ಪ, ಇರ್ಷಾದ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.