SUDDIKSHANA KANNADA NEWS/ DAVANAGERE/ DATE:24-02-2024
ದಾವಣಗೆರೆ (Davanagere): ವಿದ್ಯಾವಂತರು ರಾಜಕಾರಣಕ್ಕೆ ಬರಬೇಕೆಂಬುದು ನಮ್ಮೆಲ್ಲರ ಬಯಕೆ. ಇದು ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಪೂರಕ ಎಂಬುದೇ ಇದಕ್ಕೆ ಮೂಲ ಕಾರಣವೆಂದರೆ ತಪ್ಪಾಗದು, ನಮ್ಮ ದೇಶದಲ್ಲಿರುವ ನೂರಾರು ಪಕ್ಷಗಳಲ್ಲಿ ಬಿಜೆಪಿಯಲ್ಲಿ ವಿದ್ಯಾವಂತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಯಲ್ಲಿ ಅನುಸರಿಸಿರುವ ಮಾನದಂಡವೇ ಉದಾಹರಣೆ.
ಈ ಸಾಲಿಗೆ ದಾವಣಗೆರೆ ಕೂಡ ಸೇರ್ಪಡೆ ಆಗಲಿದೆ ಎಂಬುದು ಜಿಲ್ಲೆಯ ನಾಗರೀಕರ ಅಭಿಪ್ರಾಯ. ಇದರ ಕೃತಶಕ್ತಿಯೇ ಡಾ. ರವಿಕುಮಾರ್ ಟಿ.ಜಿ.
ಆರೋಗ್ಯ ದಾಸೋಹ ಎಂಬ ಪರಿಶುದ್ಧ ಸೇವೆಯ ಮೂಲಕ ಜನಮಾನಸದಲ್ಲಿ ಉಳಿಯುತ್ತಿರುವ, ಬೆಳೆಯುತ್ತಿರುವ ಡಾ. ಟಿ.ಜಿ, ರವಿಕುಮಾರ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಸ್ಫರ್ಧಾಕಾಂಕ್ಷಿ ಕೂಡ ಹೌದು. ದಾವಣಗೆರೆ ಜಿಲ್ಲಾದ್ಯಂತ ಆರೋಗ್ಯ ಉಚಿತ ತಪಾಸಣೆ ಶಿಬಿರಗಳ ಆಯೋಜನೆ ಮೂಲಕ ಬಡವರ, ಗ್ರಾಮೀಣರು ಸೇರಿದಂತೆ ಎಲ್ಲ ವರ್ಗದವರ ಗಮನ ಸೆಳೆದಿರುವ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ. ಜಿ. ರವಿಕುಮಾರ್ ಅವರೇ ಬಿಜೆಪಿಯ ಭರವಸೆಯ ನಾಯಕ.
ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಡಾ. ರವಿಕುಮಾರ್ ಅವರು ಚುನಾವಣೆ ದೃಷ್ಟಿಯಿಂದಷ್ಟೇ ಗ ಜನಸೇವೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಮೆಚ್ಚುಗೆಯ ಮಾತು. ಕೊರೋನಾದ ಕರಿಛಾಯೆಯಲ್ಲಿ ಡಾ. ರವಿಕುಮಾರ್ ಅವರು ನೀಡಿದ ಸೇವೆಯನ್ನು ಕಂಡು ಜನರೇ ಇಂತಹ ಧೀಮಂತರೊಬ್ಬರು ರಾಜಕೀಯಕ್ಕೆ ಬಂದು, ನಮ್ಮೆಲ್ಲರ ಪ್ರತಿನಿಧಿ ಆಗಬೇಕು ಎಂಬ ಹಂಬಲ, ಅಭಿಲಾಷೆ ವ್ಯಕ್ತಪಡಿಸುತ್ತಿದ್ದರು. ಎಲ್ಲರ ಮನವಿ, ಕ್ಷೇತ್ರಾಭಿವೃದ್ಧಿಯ ಕನಸಿನೊಂದಿಗೆ ಡಾ. ಟಿ.ಜಿ. ರವಿಕುಮಾರ್ ರಾಜಕೀಯ ಅಂಗಳಕ್ಕೆ ಬಂದಿಳಿದಿದ್ದಾರೆ. ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಆರೋಗ್ಯ ಜಾಗೃತಿ ಮಾಡುತ್ತ ಮೌನ ಕ್ರಾಂತಿ ಮಾಡುತ್ತಿದ್ದಾರೆ.
ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯರಾದ ಡಾ. ಟಿ.ಜಿ. ರವಿಕುಮಾರ್ ಅವರು, ಜಗಳೂರು ಕ್ಷೇತ್ರದ ಯಶಸ್ವಿ, ಜನಪ್ರಿಯ, ಜನಾನುರಾಗಿ ಶಾಸಕರೆಂದೇ ಹೆಸರಾಗಿರುವ ಗುರುಸಿದ್ದನಗೌಡರ ಹಿರಿಯ ಪುತ್ರ. ಮಾಜಿ ಶಾಸಕನ ಪುತ್ರ ಎಂಬ ಹಮ್ಮು ಬಿಮ್ಮು ಇಲ್ಲದೆಯೇ, ಕೇವಲ ತಮ್ಮ ತಂದೆಯ ಜ್ಞಾನ, ಅನುಭವವನ್ನಷ್ಟೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಡಾ. ರವಿಕುಮಾರ್ ಅವರ ಹೆಗ್ಗಳಿಕೆಗಳಲ್ಲಿ ಒಂದು.
ಪ್ರೀತಿ ಆರೈಕೆ ಟ್ರಸ್ಟ್ ಯಾನ:
೨೦೨೧ರ ಸಂಕ್ರಾತಿ ದಿನದಂದು ಹುಬ್ಬಳ್ಳಿ ಬಳಿ ಸಂಭವಿಸಿದ ಅಫಘಾತದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಮಹಿಳೆಯರು ಮೃತಪಟ್ಟ ಕರಾಳತೆ ನಮ್ಮೆಲ್ಲರಿಗೂ ನೆನಪಿರಬಹುದು. ಅಂದಿನ ದಿನ ಡಾ.ರವಿ ಅವ ಧರ್ಮಪತ್ನಿ ಪ್ರೀತಿ ರವಿಕುಮಾರ್ ಅವರೂ ಅಸುನೀಗಿದ್ದರು. ಅಂದು ತಮಗಾದ ಆಘಾತ ಮತ್ತು ನೋವನ್ನು ಜೀರ್ಣಿಸಿಕೊಂಡು, ಪ್ರೀತಿ ಅವರ ಸ್ಮರಣಾರ್ಥ ಪ್ರೀತಿ ಆರೈಕೆ ಟ್ರಸ್ಟ್ ಸ್ಥಾಪಿಸಿ, ಆರೋಗ್ಯ ಸೇವೆ ಮೂಲಕ ಅವರನ್ನು ಜೀವಂತವಾಗಿ ಇರಿಸಿದ ಹಿರಿಮೆ ಡಾ. ರವಿ ಅವರಿಗೆ ಸಲ್ಲುತ್ತದೆ.
ಜನಸೇವೆಯ ಅಪಾರ ಹಂಬಲ ಹೊಂದಿದ್ದ ಪತ್ನಿಯ ಹೆಸರಿನಲ್ಲಿ ಜಿಲ್ಲೆಯಾದ್ಯಂತ ಆರೋಗ್ಯ ಶಿಬಿರ ನಡೆಸುತ್ತ, ಎಲ್ಲ ವರ್ಗದವರ ಪ್ರೀತಿ ಸಂಪಾದಿಸುತ್ತಿದ್ದಾರೆ.
ಸೇವೆಯೆಂಬ ಧನ್ಯತೆ
• ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಈವರೆಗೂ ೫೫ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರ ನೆರವೇರಿದ್ದು, ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ.
•160೦ಕ್ಕೂ ಹೆಚ್ಚು ಆಟೋ ಚಾಲಕರಿಗೆ ಒಂದು ವರ್ಷ ಉಚಿತ ಒಪಿಡಿ ಚಿಕಿತ್ಸೆ ನೀಡಲಾಗಿದೆ.
• 2000ಕ್ಕೂ ಹೆಚ್ಚಿನ ಶಬರಿಮಲೆ ಧಾರಿಗಳಿಗೆ ಉಚಿತ ಹೆಲ್ತ್ ಕಿಟ್ ವಿತರಿಸಲಾಗಿದೆ.
• 30ಕ್ಕೂ ಹೆಚ್ಚು ನಿವೃತ್ತ ಸೈನಿಕರಿಗೆ ಅಜೀವ ಪರ್ಯಂತ ಆರೈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
• ಆರೋಗ್ಯದ ಸಾಮಾನ್ಯ ತೊಂದರೆಗಳಾದ ರಕ್ತದೊತ್ತಡ, ಮಧುಮೇಹ, ಇಕೋ, ಸಾಂಕ್ರಾಮಿಕ ರೋಗಗಳ ಬಗ್ಗೆ ಮನೆ ಮನೆಗಳಿಗೂ ತೆರಳಿ, ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯಪಾಲರ ಪ್ರಶಂಸನಾ ಪತ್ರ
ಪ್ರೀತಿ ಆರೈಕೆ ಟ್ರಸ್ಟ್ ಸೇವಾ ಕಾರ್ಯಗಳನ್ನು ಮೆಚ್ಚಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನಕ್ಕೆ ಆಹ್ವಾನಿಸಿ ಪ್ರೀತಿ ಆರೈಕೆ ಕುಟುಂಬಕ್ಕೆ ಪ್ರಶಂಸಿದ್ದು, ದಾವಣಗೆರೆ ಜಿಲ್ಲೆಗೇ ಹೆಮ್ಮೆಯ ವಿಚಾರ.
ಈ ಗೌರವವನ್ನು ದಾವಣಗೆರೆ ಜಿಲ್ಲೆಯ ಸಮಸ್ತ ನಾಗರೀಕರಿಗೆ ಸಮರ್ಪಣೆ ಎಂದಿರುವ ಡಾ. ರವಿಕುಮಾರ್ ಅವರ ಮಾತು ಅವರ ವಿನಮ್ರತೆಗೆ ಸಾಕ್ಷಿ.
ದೇಶ-ಸಂಘದ ಸಾಂಗತ್ಯ
ತಂದೆ ಗುರುಸಿದ್ದನಗೌಡರು ಜಗಳೂರು ಶಾಸಕರಾಗಿ ಜನಮಾನಸ ಗೆದ್ದವರು. ಇನ್ನು ಡಾ. ರವಿಕುಮಾರ್ ಅವರು ಕುಟುಂಬಕ್ಕೆ ರಾಜಕೀಯವೇನು ಹೊಸತಲ್ಲ. ಜಿ.ಎಸ್. ಸಿದ್ದನಗೌಡ ಪಾಟೀಲ್ ಗಡಿಗುಡಾಳ್ ಅವರ ಮೊಮ್ಮಗನಾಗಿ ಬಾಲ್ಯದಿಂದಲೇ ರಾಷ್ಟ್ರಪ್ರೇಮದ ಜಾಗೃತಿ ಮೂಡಿಸಿಕೊಂಡವರು. ಹರಪನಹಳ್ಳಿಯ ಗಡಿಗುಡಾಳ್ ಸಿದ್ದನಗೌಡರು, ಎಂಎ, ಎಲ್ಎಲ್ಬಿ ಪದವಿಧರರು. ಸದಾ ಪರಿಶ್ರಮಶೀಲ ವ್ಯಕ್ತಿತ್ವ. ಕರ್ನಾಟಕದ ನಾಲ್ಕನೇ ಪ್ರಾಂತ ಸಂಘಚಾಲಕರಾಗಿ 1992ರಲ್ಲಿ ಜವಾಬ್ದಾರಿ ಸ್ವೀಕರಿಸಿ, 1996ರವರೆಗೂ ಜವಾಬ್ದಾರಿ ನಿರ್ವಹಿಸಿದರು. ನಂತರ 1996ರಲ್ಲಿ ಕರ್ನಾಟಕ ಉತ್ತರ ಮತ್ತು ಕರ್ನಾಟಕ ದಕ್ಷಿಣ ಪ್ರಾಂತಗಳ ಪ್ರತ್ಯೇಕ ರಚನೆ ಆದಾಗ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕರಾಗಿ ಜವಾಬ್ದಾರಿ ಸ್ವೀಕರಿಸಿದರು. ಒಟ್ಟು 12 ವರ್ಷ ಪ್ರಾಂತ ಸಂಘಚಾಲಕರಾಗಿದ್ದ ಸಿದ್ದನಗೌಡರು 2004ರ ತನಕ ಜವಾಬ್ದಾರಿ ನಿರ್ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಂದೆಯ ರಾಜಕೀಯ ಹಾದಿ
ಡಾ. ರವಿಕುಮಾರ್ ಟಿ.ಜಿ ಅವರ ಪೂಜ್ಯ ತಂದೆಯಾದ ಗುರುಸಿದ್ದನಗೌಡರು ಬಿಎಸ್ಸಿ ಅಗ್ರಿ ಓದಿದವರು. ದಾವಣಗೆರೆಯ ವಾಜಪೇಯಿ ಎಂದೇ ಹೆಸರಾಗಿದ್ದು, ಮೂರು ಬಾರಿ ಚಿತ್ರದುರ್ಗ-ದಾವಣಗೆರೆ ಜಂಟಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2004ರಿಂದ 2007ರವರೆಗೆ ಜಗಳೂರು ಕ್ಷೇತ್ರದ ಶಾಸಕರಾಗಿದ್ದರು. 1955ರಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರು. ಎಮರ್ಜೆನ್ಸಿ ಕಾಲದಲ್ಲಿ 5 ತಿಂಗಳು ಜೈಲುವಾಸ ಅನುಭವಿಸಿದ್ದರು. ಭಾರತೀಯ ಜನತಾ ಪಕ್ಷದ ನಿಷ್ಠ್ಠಾವಂತ ಕಾರ್ಯಕರ್ತರಾಗಿ, ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ.
ರವಿಕುಮಾರ್ ಬೆಳೆದು ಬಂದ ಹಾದಿ:
ಪ್ರಾಥಮಿಕ, ಫ್ರೌಢ ಶಿಕ್ಷಣ ಪಡೆದು, ಅಮರ ಭಾರತಿ ವಿದ್ಯಾಕೇಂದ್ರದಲ್ಲಿ ಪಿಯು ಶಿಕ್ಷಣ ಪಡೆದರು. ಶಾಲಾ ಹಂತದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು ಬೆಳೆಯಿತು. ರಾಷ್ಟ್ರಪ್ರೇಮಿಗಳಾದ ದಿ. ಜಿ. ಎಸ್. ಸಿದ್ದಣ್ಣಗೌಡ ಜಿ, ದಿ. ಬಲರಾಮ್ ಶೆಟ್ಟಿ ಜಿ, ದಿ. ಶ್ರೀ ರುದ್ರಯ್ಯ ಜಿ ಅವರ ನೇತೃತ್ವದ ಶಾಖೆಯಲ್ಲಿ ಭಾಗವಹಿಸುತ್ತಿದ್ದರು. 1984ರಲ್ಲಿ ದಾವಣಗೆರೆಯಲ್ಲಿ ನಡೆದ ಐಟಿಸಿ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು. ಜಗಳೂರು ತಾಲೂಕು ಎಬಿವಿಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ (1987-89) ಜವಾಬ್ದಾರಿ, ಕರ್ತವ್ಯ ನಿಭಾಯಿಸಿದ್ದಾರೆ.
ಇದೇ ಅವಧಿಯಲ್ಲಿ ವಿವೇಕಾನಂದ ಜಯಂತಿ, ಡಾ. ಹೆಗಡೇವಾರ್ ಜಿ ಅವರ ಶತಮಾನೋತ್ಸವ, ಪರೀಕ್ಷಾ ಪೇ ಚರ್ಚಾದಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಉನ್ನತ ಶಿಕ್ಷಣ:
ಪಿಯುಸಿ ನಂತರ ಮೆರಿಟ್ ಕೋಟಾದಡಿ ಬಿಜಾಪುರದ ಅಲ್ ಅಮೀನ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು 1994ರಲ್ಲಿ ಪಡೆದರು. ದಾವಣಗೆರೆಯ ಜೆಜೆಎಂಸಿ ಕಾಲೇಜಿನಲ್ಲಿ ಸೀನಿಯರ್ ರೆಸಿಡೆಂಟ್ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಜನರಲ್ ಸರ್ಜರಿ ವಿಭಾಗದಲ್ಲಿ ಮಾಸ್ಟರ್ ಆಫ್ ಸರ್ಜರಿ ಪದವಿ ಪಡೆದಿದ್ದಾರೆ.
ರಾಮಮಂದಿರ ಅಭಿಯಾನದಲ್ಲಿ ಸಕ್ರಿಯ:
1990ರ ಅಯೋಧ್ಯ ರಾಮ ಮಂದಿರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಜಗಳೂರಿನ ದಲಿತ ಕಾಲೋನಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಸಿದ್ದರು. ವಿದ್ಯಾನಂದ ಶಣೈ ನೇತೃತ್ವದಲ್ಲಿ ಭಾರತ ದರ್ಶನ ಕಾರ್ಯಕ್ರಮ ನೆರವೇರಿಸಿದ್ದರು.
ಜಗಳೂರಿನಲ್ಲಿ ಆರೋಗ್ಯ ಕ್ರಾಂತಿ:
ರಾಜ್ಯದ ಹಿಂದುಳಿದ, ಬರಪೀಡಿತ ತಾಲೂಕೆಂಬ ಅಪಖ್ಯಾತಿ ಹೊತ್ತಿರುವ ಜಗಳೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಸ್ನಾತಕ್ಕೋತ್ತರ ಪದವಿ ನಂತರ ವೈದ್ಯನಾಗಿ 2001ರಲ್ಲಿ ಕರ್ತವ್ಯ ಪ್ರಾರಂಭಿಸಿದರು. 2009ರಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಮುಂಬಡ್ತಿ ಹೊಂದಿ 2014ರ ವರೆಗೂ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು.
ಅರಸಿ ಬಂದ ಗೌರವಗಳು:
ಡಾ. ರವಿಕುಮಾರ್ ಅವರಿಗೆ ಹಲವು ಗೌರವಗಳು ಅರಸಿ ಬಂದಿವೆ. ಪ್ರೀತಿ ಆರೈಕೆ ಟ್ರಸ್ಟಿನ ಸಮಾಜ ಮುಖಿ ಕೆಲಸಗಳನ್ನು ಗುರುತಿಸಿ, ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಬೆಂಗಳೂರಿನ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ಹಾಲ್)ದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿ. ನ್ಯಾ. ನಿಟ್ಟೆ ಸಂತೋಷ್ ಹೆಗ್ಡೆ. ನಿ. ಮುಖ್ಯ ಕಾರ್ಯದರ್ಶಿ ಎ.ರತ್ನಪ್ರಭಾ, ನಿವೃತ್ತ ಪೊಲೀಸ್ ಮಹಾ ನಿದೇರ್ಶಕರಾದ ಗರುಡಾಚಾರ್, ನಿವೃತ್ತ ಎಸಿಪಿ ಟೈಗರ್ ಅಶೋಕ್ ಕುಮಾರ್, ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರಂಥ ಮಹನೀಯರಿಂದ ಪ್ರಶಸ್ತಿ ಸ್ವೀಕರಿಸಿದ್ದು, ಡಾ. ರವಿ ಅವರ ಕಾರ್ಯಪರತೆಗೆ ನಿದರ್ಶನ.
ಮುಖ್ಯ ವೈದ್ಯಾಧಿಕಾರಿಯಾಗಿದ್ದ ವೇಳೆಯ ಕಾರ್ಯಗಳು:
- ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ಟ್ಯಬೆಕ್ಟೊಮಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
- 30 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಯಾಗಿ ಪರಿವರ್ತನೆ, ಹೃದಯ ಶಸ್ಚ್ರ ಚಿಕಿತ್ಸೆಗೆ ಅನುವಾಗುವಂತೆ ಐಸಿಯು ವ್ಯವಸ್ಥೆ
- ಶ್ರೀ ಧರ್ಮಸ್ಥಳ ಮಂಜುನಾಥ ಯೋಗ ನೇಚರ್ ಕೇರ್ ಆಸ್ಪತ್ರೆ ಸಹಯೋಗದಲ್ಲಿ ನಾಚುರೋಪತಿ ಮತ್ತು ಯೋಗ ಆಸ್ಪತ್ರೆ ಪ್ರಾರಂಭ
- ಜಗಳೂರು ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಸರಕಾರಿ ಆಸ್ಪತ್ರೆ ವತಿಯಿಂದ ಉಚಿತ ತಪಾಸಣೆ ಶಿಬಿರ ಆಯೋಜನೆ
- ಸಾವಿರಕ್ಕಿಂತ ಅಧಿಕ ಸಣ್ಣ, ಮಧ್ಯಮ ಶಸ್ತ್ರ ಚಿಕಿತ್ಸೆಗಳು ಯಶಸ್ವಿ.
ಕೊರೊನಾ ಸೇವೆ:
ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಆರೈಕೆ ಆಸ್ಪತ್ರೆಯಲ್ಲಿ ಅನಿಯಮಿತ ಆರೋಗ್ಯ ಸೇವೆ ನೀಡಲಾಯಿತು. ಈ ಮೂಲಕ ಜಿಲ್ಲೆಯ ಜನರ ಪ್ರೀತಿ – ಅಭಿಮಾನಕ್ಕೆ ಆರೈಕೆ ಆಸ್ಪತ್ರೆ ಪಾತ್ರವಾಗಿದೆ. ಜಿಲ್ಲೆಯಲ್ಲೇ ಆರೈಕೆ ಆಸ್ಪತ್ರೆಯಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣ ಕಂಡಿದ್ದು, ಆರೈಕೆ ಹೆಸರಿಗೆ ತಕ್ಕನಾಗಿ ತನ್ನ ಸೇವೆಯನ್ನು ಮಾಡಿದ ಸಾರ್ಥಕತೆಯನ್ನು ಡಾ. ರವಿಕುಮಾರ್ ಟಿ.ಜಿ. ಸಾರಥ್ಯದ ಆರೈಕೆ ಆಸ್ಪತ್ರೆ ಪಡೆದಿದೆ.
ವಿಶ್ವಾದ್ಯಂತ ಪ್ರವಾಸ, ಫೊಟೋಗ್ರಫಿ, ಪಕ್ಷಿ ವೀಕ್ಷಣೆ, ವನ್ಯಜೀವಿ ಸಂರಕ್ಷಣೆ, ಸಾಹಿತ್ಯ(ಓದು, ಬರವಣಿಗೆ), ರಾಜಕೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಮರ್ಶೆ, ಕ್ರೀಡೆ(ಟೆನ್ನಿಸ್), ಯೋಗ, ಆಧ್ಯಾತ್ಮ, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಮುಂಬೈನ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಅಧಿವೇಶನದಲ್ಲಿ ಪ್ರಬಂಧ ಮಂಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವನ್ಯಜೀವಿಗಳು ಮತ್ತು ಅರಣ್ಯ ಸಂರಕ್ಷಣೆಯಲ್ಲಿರುವ ಹಲವು ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಜತೆಗೆ ತೊಡಗಿಸಿಕೊಂಡಿದ್ದಾರೆ. ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸದಸ್ಯನಾಗಿದ್ದು, ಬಡವರು ಮತ್ತು ನಿರ್ಗತಿಕರಿಗೆ ಆರೋಗ್ಯ, ಶಿಕ್ಷಣವು ತ್ವರಿತ ಮತ್ತು ಉಚಿತವಾಗಿ ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ.
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ- ಆಯುಷ್ಮಾನ್ ಭಾರತ್ ಯೋಜನೆಯನ್ನು ಫಲನಾಭವನ್ನು ಆರೈಕೆ ಆಸ್ಪತ್ರೆಯಿಂದಲೂ ನೀಡಲಾಗುತ್ತಿದೆ. ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ದಾವಣಗೆರೆ ಜಿಲ್ಲೆಗಳ ಸುಮಾರು 28,500ಕ್ಕೂ ಹೆಚ್ಚಿನ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಉಚಿತ ಮಾಸ್ಟರ್ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ನಿಸ್ವಾರ್ಥವಾಗಿ ಸಾಮಾಜಿಕ ಚಟುವಟಿಕೆ ಮಾಡುತ್ತಿರುವ ವಿವಿಧ ಸಂಘ-ಸಂಸ್ಥೆಗಳಿಗೆ ನಿಯಮಿತವಾಗಿ ದೇಣಿಗೆ ನೀಡುತ್ತಿದ್ದು, ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಣ್ಣ ಪಾಲುದಾರನಾಗುವ ಅಭಿಲಾಷೆ ಹೊಂದಲಾಗಿದೆ.
ಏನಂತಾರೆ ರವಿಕುಮಾರ್…?
ರಾಷ್ಟ್ರಪ್ರೇಮ, ದೇಶಾಭಿಮಾನವನ್ನು ಉಸಿರಾಗಿಸಿಕೊಂಡ ತಾತ ಮತ್ತು ತಂದೆಯವರ ಮಾರ್ಗದರ್ಶನದಲ್ಲಿ ಬೆಳೆಯುವ ಸುದೈವ ನನ್ನದು. ನಮ್ಮ ಕುಟುಂಬ ಮೂರು ತಲೆಮಾರುಗಳಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸೇವೆ ಸಲ್ಲಿಸುತ್ತಿದೆ. ಚಿತ್ರದುರ್ಗ – ದಾವಣಗೆರೆ ಜಿಲ್ಲೆಯಾಗಿದ್ದಾಗ ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಸಂಘಟಿಸಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಪಕ್ಷ ಕಟ್ಟಿ ಬೆಳೆಸಿರುವ ಪರಿ ಅನನ್ಯ. ಶಾಸಕರ ಸ್ಥಾನದಿಂದ ಇಳಿದು ೧೫ ವರ್ಷ ಕಳೆದರೂ ಈಗಲೂ ಅವರು ಜನಾನುರಾಗಿ ಕೆಲಸಗಳ ಬಗ್ಗೆ ಕ್ಷೇತ್ರವೇ ಹೆಮ್ಮಯಿಂದ ಮಾತನಾಡುತ್ತದೆ. ಹಲವು ಕನಸು, ದೂರದೃಷ್ಟಿಯಲ್ಲಿ ದಾವಣಗೆರೆ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಹಂಬಲವಿದೆ.
ವೈದ್ಯ ಸೇವೆ ಮಾಡುತ್ತಿದ್ದ ನನಗೆ ಪತ್ನಿಯ ಅನಿರೀಕ್ಷಿತ ನಿರ್ಗಮನ, ತಂದೆಯವರ ಮಾರ್ಗದರ್ಶನ ಮತ್ತು ಸ್ನೇಹಿತರು, ಬೆಂಬಲಿಗರ ಒತ್ತಾಸೆಯು ರಾಜಕೀಯ ಕ್ಷೇತ್ರಕ್ಕೆ ಬರಲು ಪ್ರೇರೇಪಣೆ ನೀಡಿದೆ. ಪ್ರಸ್ತುತ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನರೇಂದ್ರ ಮೋದಿಯವರಂಥ ಧೀಮಂತ ನಾಯಕರ ನೇತೃತ್ವದಲ್ಲಿ ದಾವಣಗೆರೆಗೆ ಹೊಸ ರೂಪ-ಸ್ವರೂಪ ನೀಡಿ, ಅಭಿವೃದ್ಧಿಯ ರಾಜಧಾನಿ ಮಾಡಬೇಕು ಎಂಬ ಕನಸು ಹೊಂದಿದ್ದೇನೆ. ಪಕ್ಷದ ವರಿಷ್ಠರು ಈ ಬಾರಿ ನನಗೆ ಟಿಕೆಟ್ ನೀಡುವ ವಿಶ್ವಾಸವಿದ್ದು, ಜನರು ಆಶೀರ್ವಾದ ಸಿಗುವ ಎಲ್ಲ ದೃಢ ನಂಬಿಕೆಯಿದೆ ಎಂದು ದಾವಣಗೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆದ ಟಿ. ಜಿ. ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.