SUDDIKSHANA KANNADA NEWS/ DAVANAGERE/ DATE:25-02-2024
ದಾವಣಗೆರೆ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಡಿರುವ ಶ್ರೀರಾಮ ದೇಶದ ಜನರ ಗಮನ ಸೆಳೆದಿದೆ. ಮರ್ಯಾದೆ ಪುರುಷೋತ್ತಮ. ಶ್ರೀರಾಮನ ದರ್ಶನಕ್ಕೆ ಲಕ್ಷಾಂತರ ಜನರು ಅಯೋಧ್ಯೆಗೆ ಹೋಗುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಜನರು ಹೋಗ್ತಿದ್ದಾರೆ. ದಾವಣಗೆರೆಯಿಂದಲೂ ಶ್ರೀರಾಮ ಭಕ್ತರು ತೆರಳುತ್ತಿದ್ದಾರೆ.
ಶ್ರೀರಾಮ ಭಕ್ತರು ದೇಶದ ಮೂಲೆ ಮೂಲೆಗಳಿಂದ ಹೋಗುತ್ತಿದ್ದು, ದಾವಣಗೆರೆಯಿಂದಲೂ ನೂರಾರು ಮಹಿಳೆಯರು ರೈಲಿನ ಮೂಲಕ ಅಯೋಧ್ಯೆಗೆ ಹೋಗುತ್ತಿದ್ದಾರೆ. ಇಂದು ದಾವಣಗೆರೆಯಿಂದ ಚಿತ್ರದುರ್ಗಕ್ಕೆ ತೆರಳಿ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಹೊರಟಿದ್ದಾರೆ. ದಾವಣಗೆರೆಯ ಶ್ರೀರಾಮ ಭಕ್ತರು ತೆರಳುತ್ತಿದ್ದು, ರೈಲಿನಲ್ಲಿ ಮಹಿಳೆಯರು ಶ್ರೀರಾಮನ ಭಜನೆ ಮಾಡುತ್ತಿದ್ದಾರೆ.
ಕೇಸರಿ ಶಾಲು ಧರಿಸಿ, ಶ್ರೀರಾಮನ ಜಪ ಮಾಡುತ್ತಿರುವ ತೆರಳುತ್ತಿರುವ ಮಹಿಳಾ ಭಕ್ತರು ಎಲ್ಲರನ್ನೂ ಗಮನ ಸೆಳೆಯುತ್ತಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಶ್ರೀರಾಮನ ಮಹತ್ವ ಸಾರುವಂಥ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಚಿತ್ರದುರ್ಗದ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆ ಗೆ ಹೊರಟ ದಾವಣಗೆರೆ ಜಿಲ್ಲೆಯ 364 ಶ್ರೀರಾಮ ಭಕ್ತರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಪ್ರಯಾಣ ಸುಖಕರವಾಗಿರಲಿ ಎಂದು ಬಿಜೆಪಿ ಮುಖಂಡರು, ಹಿಂದೂಪರ ಸಂಘಟನೆಗಳ ಮುಖಂಡರು ಶುಭ ಕೋರಿದರು. ರೈಲಿನಲ್ಲಿ ಮಹಿಳೆಯರಿಂದ ರಾಮನ ಭಜನೆ ಕೇಳುತ್ತಾ ಪ್ರಯಾಣಿಕರು ಖುಷಿ ಖುಷಿಯಾಗಿ ಪ್ರಯಾಣ ಮಾಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ವಾಲಿ, ಭಾಗ್ಯ ಪಿಸಾಳೆ, ಶಾಂತ ದೊರೈ, ಶುಭ ಐನಳ್ಳಿ, ರತ್ನಮ್ಮ, ಸುನಂದಾ, ಸುಮಾ ಮಲ್ಲಿಕಾರ್ಜುನ, ರೇಖಾ ಓಂಕಾರಪ್ಪ, ಮಂಜುಳಾ, ಇಂದ್ರ, ಮಮತಾ,
ಶಾಂತ, ಶಂಕುತಲಮ್ಮ, ಸುನಿತಾ, ರೂಪ ಕಾಟ್ವೆ, ಸಂತೋಷಿ, ಮಂಜುನಾಥ್, ರಾಕೇಶ್, ರಾಮ ಭಕ್ತರು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.
ಮತ್ತೊಂದೆಡೆ ಚಿತ್ರದುರ್ಗ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಹೊರಟ ಶ್ರೀ ರಾಮ ಭಕ್ತರನ್ನು ಶ್ರೀ ರಾಮ ಮಂದಿರ ದರ್ಶನ ಅಭಿಯಾನದ ಪದಾಧಿಕಾರಿಗಳ ಜೊತೆಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಹರಿಹರ ಶಾಸಕ ಬಿ. ಪಿ. ಹರೀಶ್, ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಅಭಿಯಾನದ ರಾಜ್ಯ ಸಹ ಸಂಚಾಲಕ ಜಗದೀಶ್ ಹಿರೇಮನಿ, ಬಿಜೆಪಿ ಮುಖಂಡ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರರ ಪುತ್ರ ಅನಿತ್ ಸಿದ್ದೇಶ್ವರ್, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,ಶಿವಾನಂದ್, ರಾಜು ಶಾಮನೂರು, ಬಸವರಾಜಯ್ಯ, ಶ್ರೀನಿವಾಸ್ ಭಟ್ ಮತ್ತು ಪ್ರಮುಖರು ಅಯೋಧ್ಯೆಗೆ ತೆರಳಿದವರಿಗೆ ಶುಭ ಕೋರಿದರು.