SUDDIKSHANA KANNADA NEWS/ DAVANAGERE/ DATE:01-04-2025
ಬೆಂಗಳೂರು: ಮುತ್ತೇ ಪ್ರಥಮ… ಅದುವೇ ಜಗದ ನಿಯಮ… ಈ ಹಾಡು ಜನಪ್ರಿಯವಾಗಿದೆ. ಆದ್ರೆ, ಇಲ್ಲಿ ಮುತ್ತೇ ಪ್ರಥಮ ಆಗಿದ್ದೂ ಆಯ್ತು.. ಅಪಾಯವೂ ಬಂದದ್ದು ಆಯ್ತು. ಇಂಥದ್ದೊಂದು ಘಟನೆ ನಡೆದಿರುವುದು ಸಿಲಿಕಾನ್ ಸಿಟಿಯಲ್ಲಿ.
ತೆಳ್ಳಗೆ, ಬೆಳ್ಳಗೆ, ಮೈಕಟ್ಟು ತುಂಬಿಕೊಂಡು ಸುಂದರಿಯಾಗಿದ್ದರೆ ಮುಗಿದೇ ಹೋಯ್ತು. ಸೌಂದರ್ಯವನ್ನೇ ಬಂಡವಾಳನ್ನಾಗಿಸಿಕೊಂಡು ಹಣದ ಲೂಟಿಗೆ ಇಳಿದು ಬಿಡುತ್ತಾರೆ. ಅದ್ರಲ್ಲೂ ಡೇಟಿಂಗ್, ಚಾಟಿಂಗ್, ಟಾಕಿಂಗ್ ಇದ್ದರಂತೂ
ಕಥೆ ಮುಗಿದೇ ಹೋಯ್ತು.
ಮುತ್ತು ಕೊಡುತ್ತಾರೆ, ತೊಡೆ ಮೇಲೆ ಕುಳಿತುಕೊಳ್ಳುತ್ತಾರೆ. ಖಾಸಗಿ ಕ್ಷಣವನ್ನೂ ಕಳೆಯುತ್ತಾರೆ. ವಿಪರ್ಯಾಸ ಎಂದರೆ ಗೊತ್ತಾಗದ ಹಾಗೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಸ್ವಲ್ಪ ದಿನ ಸುತ್ತಾಡಿ ಎಂಜಾಯ್ ಮಾಡುತ್ತಾರೆ. ಆಮೇಲೆ
ಹಣದ ಆಸೆಗೆ ಬಿದ್ದು ಬ್ಲ್ಯಾಕ್ ಮೇಲ್ ಮಾಡಲು ಶುರುವಿಟ್ಟುಕೊಂಡು ಬಿಡುತ್ತಾರೆ.
ಇಲ್ಲೊಬ್ಳು ಸುಂದರಿ ಮಾಡಿರುವುದೇ ಇದೆ. ಬೆಂಗಳೂರಿನ ಉದ್ಯಮಿಯೊಬ್ಬರು ಸುಂದರಿಯ ಸಂಗ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಅಲ್ಲದೇ, ಮರ್ಯಾದೆಗೆ ಅಂಜಿ ಇಷ್ಟು ದಿನ ಸುಮ್ಮನಿದ್ದಾರೆ. ಆದ್ರೆ, ಯಾವಾಗ ಸುಂದರಿಯ ಕಾಟ ಹೆಚ್ಚಾಯಿತೋ ಸಾಕು ಸಾಕಾಗಿ ಹೋಗಿದ್ದಾರೆ. ಆಕೆ ಬ್ಲ್ಯಾಕ್ ಮೇಲ್ ಗೆ ಗುರಿಯಾಗಿ ಪರಿತಪಿಸುತ್ತಿದ್ದಾರೆ. ಆಕೆ ನೋಡುತ್ತಿದ್ದಂತೆ ರೋಮಾಂಚನಗೊಳ್ಳುತ್ತಿದ್ದ ಉದ್ಯಮಿಯು ಆಕೆ ಒಂದು ಮುತ್ತು ಕೊಟ್ಟರೆ ಸ್ಥಳದಲ್ಲಿಯೇ 50 ಸಾವಿರ ರೂಪಾಯಿ ಕೊಟ್ಟುಬಿಡುತ್ತಿದ್ದರಂತೆ. ಉದ್ಯಮಿ ಜೊತೆ ಚಾಟಿಂಗ್, ಡೇಟಿಂಗ್ ನಡೆಸಿದ್ದ ಆಕೆ, ಉದ್ಯಮಿಯೊಂದಿಗಿನ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಇಟ್ಟುಕೊಂಡಿದ್ದಳು ಈ ಮಹಾ ನಾಟಕ ಮಾಡುತ್ತಿದ್ದ ಸುಂದರಿ.
ಈ ವಿಡಿಯೋಗಳು, ಫೋಟೋ ತೋರಿಸಿ ಸುಂದರಿ ಮತ್ತು ಆಕೆಯ ಸ್ನೇಹಿತರು ಸೇರಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಅಪಹರಣ, ಸುಲಿಗೆಯನ್ನೂ ಮಾಡಿರುವ ಆರೋಪ ಕೇಳಿ ಬಂದಿದೆ.ಅದೂ ಒಂದೂವರೆ ವರ್ಷದ ಬಳಿಕ. ಉದ್ಯಮಿ ಅಪಹರಿಸಿ ಹಣ ಸುಲಿಗೆ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಬೆಂಗಳೂರು ಸಿಸಿಬಿಗೆ ರಾಕೇಶ್ ದೂರು ನೀಡಿದ್ದು, ಯುವತಿ, ಅರುಣ್ ಮತ್ತು ಸಾಗರ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ಮುಂದುವರಿದಿದೆ.
ಘಟನೆ ಹಿನ್ನೆಲೆ:
ಪ್ಲೇ ಹೋಮ್ನ ಓನರ್ ಯುವತಿ, ಆಕೆಯ ಬಾಯ್ಫ್ರೆಂಡ್ ಸಾಗರ್ ಹಾಗೂ ರೌಡಿಶೀಟರ್ ಗಣೇಶ್ ಇದೀಗ ಬಂಧನಕ್ಕೊಳಗಾದ ಆರೋಪಿಗಳು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರೀಸ್ಕೂಲ್ ನಡೆಸುತ್ತಿದ್ದ ಯುವತಿಗೆ 2023 ರಲ್ಲಿ ರಾಕೇಶ್ ವೈಷ್ಣವ್ ಪರಿಚಯವಾಗಿತ್ತು. ರಾಕೇಶ್ ತನ್ನ ಮಕ್ಕಳನ್ನು ಆ ಯುವತಿಯ ಪ್ಲೇ ಹೋಮ್ ಗೆ ಕಳಿಸುತ್ತಿದ್ದರು. ಶಾಲೆ ನಿರ್ವಹಣೆ ಸಲುವಾಗಿ ಯುವತಿ 2 ಲಕ್ಷ ಸಾಲ ಪಡೆದಿದ್ದರು. ಹಣ ವಾಪಸ್ ಕೇಳಿದಾಗ, ಪ್ರೀಸ್ಕೂಲ್ ಪಾರ್ಟ್ನರ್ ಆಗಲು ಆಫರ್ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು ಎಂದು ತಿಳಿದು ಬಂದಿದೆ.
ರಾಕೇಶ್ ಹಣ ವಾಪಸ್ ಕೊಡುವಂತೆ ಜನವರಿ ತಿಂಗಳ ಮೊದಲ ವಾರದಲ್ಲಿ ಆರೋಪಿ ಗಣೇಶ್ ಕಾಳೆಗೆ ಕೇಳಿದ್ದಾರೆ. ಯುವತಿಯು ರಾಕೇಶ್ ಮನೆಗೆ ಹೋಗಿ 50 ಸಾವಿರ ತೆಗೆದುಕೊಂಡಿದ್ದಾಳೆ. ಸಂಬಂಧದಲ್ಲಿ ಇರುತ್ತೇನೆ ಎಂದು ಹೇಳಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ. ಮಾತ್ರವಲ್ಲ ಪದೇ ಪದೇ ಕರೆ ಮಾಡುತ್ತಿದ್ದರಿಂದ ರಾಕೇಶ್ ಸಿಮ್ ಮುರಿದು ಬಿಸಾಕಿದ್ದರು.
ಮಾರ್ಚ್ 12ರಂದು ಮಕ್ಕಳ ಸ್ಕೂಲ್ ಟಿಸಿ ತರಲು ಯುವತಿ ಪ್ರೀಸ್ಕೂಲ್ ಗೆ ರಾಕೇಶ್ ಹೋದಾಗ, ಯುವತಿ ಜೊತೆಯಲ್ಲಿದ್ದ ಸಾಗರ್ ಹಾಗೂ ಗಣೇಶ್ ಸೇರಿಕೊಂಡು ಉದ್ಯಮಿ ರಾಕೇಶ್ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಯುವತಿ ತಂದೆ
ಮತ್ತು ರಾಕೇಶ್ ಹೆಂಡತಿಗೆ ಸಂಬಂಧದ ವಿಚಾರ ತಿಳಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಆರೋಪಿ ಸಾಗರ್ ಮೋರೆ ಪೊಲೀಸರು ಠಾಣೆಗೆ ಹೋಗೋಣ ಎಂದು ರಾಕೇಶ್ ಅವರನ್ನು ಕಾರಿನಲ್ಲಿ ಕರೆದೊಯ್ದು, ಒಂದು ಕೋಟಿಗೆ ಡಿಮ್ಯಾಂಡ್
ಮಾಡಿದ್ದಾರೆ. ಆ ನಂತರ ಗೊರಗುಂಟೆಪಾಳ್ಯದಲ್ಲಿ ಕಾರು ನಿಲ್ಲಿಸಿ, 1 ಲಕ್ಷ 90 ಸಾವಿರ ಹಣ ಪಡೆದು ಬಿಟ್ಟು ಕಳುಹಿಸಿದ್ದಾರೆ.
ಇಷ್ಟಕ್ಕೆ ನಿಂತಿಲ್ಲ. ಮತ್ತೆ ರಾಕೇಶ್ ಗೆ ಮಾರ್ಚ್ 17ರಂದು ಯುವತಿ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಟ್ಟರೆ ಅಶ್ಲೀಲ ವಿಡಿಯೋ ಚಾಟಿಂಗ್ ಡಿಲೀಟ್ ಮಾಡುತ್ತೇನೆ, ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಹೆದರಿಸಿದ್ದಾಳೆ ಎಂದು ತಿಳಿದು ಬಂದಿದೆ.