Site icon Kannada News-suddikshana

ನ. 26ರಿಂದ ಐದು ದಿನಗಳ ಶಾಮನೂರು ಡೈಮಂಡ್, ಶಿವಗಂಗಾ ಕಪ್ 2025: ಅಂತರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜನೆ

ಅಂತರಾಷ್ಟ್ರ

ದಾವಣಗೆರೆ: ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಮತ್ತು ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನವೆಂಬರ್ 26ರಿಂದ ಡಿಸೆಂಬರ್ 30ರವರೆಗೆ ಐದು ದಿನಗಳ ಕಾಲ 18 ನೇ ಬಾರಿಗೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಅಂಗವಾಗಿ ಅಂತರಾಷ್ಟ್ರ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.

READ ALSO THIS STORY: ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಹೆಚ್ಚಿನ ಸಂಶೋಧನೆಗೆ ಅನುದಾನ ಕೊಡುವಂತೆ ಕೇಂದ್ರ ಕೃಷಿ ಸಚಿವರಿಗೆ ಮನವಿ: ಡಾ. ಪ್ರಭಾ ಮಲ್ಲಿಕಾರ್ಜುನ್

ಜಿಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಟೂರ್ನಿ ನಡೆಯಲಿದ್ದು, ಶ್ರೀಲಂಕಾ ಹಾಗೂ ನೇಪಾಳ ತಂಡಗಳು ಈ ಬಾರಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಹೊರರಾಜ್ಯದ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು. ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಒಟ್ಟು 52 ತಂಡಗಳು ಭಾಗವಹಿಸಲಿವೆ ಎಂದು ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟು 850 ಆಟಗಾರರಿಗೆ ಟೀ ಶರ್ಟ್ ವಿತರಿಸಲಾಗುವುದು. ಊಟ ಮತ್ತು ವಸತಿ ಕಲ್ಪಿಸಲಾಗಿದೆ. ಈ ಟೂರ್ನಿಯಲ್ಲಿ ವಿಜೇತರಿಗೆ ಪ್ರಥಮ ಸ್ಥಾನ ರೂ. 5,55,555 ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನಕ್ಕೆ ರೂ. 3,55,555 ರೂ. ಹಾಗೂ ಶಿವಗಂಗಾ ಕಪ್, ತೃತೀಯ ಬಹುಮಾನ ರೂ. 1,55,555 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅದೇ ರೀತಿ ವೈಯಕ್ತಿಕ ಉತ್ತಮ ಆಲ್‌ರೌಂಡರ್‌ಗೆ ಹೀರೋ ಹೊಂಡಾ ಬೈಕ್‌ ಅನ್ನು ನೀಡಲಾಗುವುದು ಎಂದು ಹೇಳಿದರು.

ವಿಶೇಷವಾಗಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಕುಳಿತುಕೊಂಡು ನೋಡಲು ಮೈದಾನದಲ್ಲಿ ಗ್ಯಾಲರಿಯ ವ್ಯವಸ್ಥೆ ಮಾಡಲಾಗುವುದು. ಈ ಟೂರ್ನಿಯಲ್ಲಿ ಮೂರನೇ ತೀರ್ಪುಗಾರರ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು ಈ ಟೂರ್ನಿಯ ಅಂದಾಜು ವೆಚ್ಚ 35 ರಿಂದ 40 ಲಕ್ಷ ಇರುತ್ತದೆ. ಈ ಟೂರ್ನಿಯಲ್ಲಿ ವಿಶೇಷವಾಗಿ ಪೊಲೀಸ್ ತಂಡ, ಪತ್ರಕರ್ತರ ತಂಡ, ವರ್ತಕರ ತಂಡ, ಜಿಲ್ಲಾಧಿಕಾರಿಗಳ ತಂಡ, ಮಹಾನಗರ ಪಾಲಿಕೆ ಸದಸ್ಯರ ತಂಡ, ವಕೀಲರ ತಂಡ ಸೇರಿದಂತೆ ಒಟ್ಟು 8 ತಂಡಗಳುಳ್ಳ ಫೀಶಿಯಲ್ ಪಂದ್ಯಾವಳಿಯನ್ನು ಆಡಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಶಿವಗಂಗಾ ಶ್ರೀನಿವಾಸ್, ಜಯಪ್ರಕಾಶ್ ಗೌಡ ಮತ್ತಿತರರು ಹಾಜರಿದ್ದರು.

Exit mobile version