SUDDIKSHANA KANNADA NEWS/ DAVANAGERE/ DATE:17-08-2024
ದಾವಣಗೆರೆ: ಜಾಲಿನಗರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಕಮಿಟಿಯಿಂದ 18 ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶಿವಕುಮಾರ್. ಜಿ, ಉಪಾಧ್ಯಕ್ಷರಾದ ಪ್ರಭುಕುಮಾರ್ ಧನ್ನೂರು, ಕರಿಬಸಪ್ಪ ಕಸವಾಳ, ಖಜಾಂಚಿ ಜಯರಾಜ್. ಬಿ, ಕಾರ್ಯದರ್ಶಿ ಬಸವರಾಜ್ ಜಿ.ಎನ್. ಸಹ ಕಾರ್ಯದರ್ಶಿ ವಾಸುದೇವ. ಆರ್, ಸದಸ್ಯರಾದ ಕೃಷ್ಣಾರೆಡ್ಡಿ, ರಘುಬಡಿಗಿ, ಚೇತನಾ ಶಿವಕುಮಾರ್, ಯಂಕೋಜಿರಾವ್, ಮಲ್ಲಿಕಾರ್ಜುನ ರಾಮನಗೌಡ, ಸೋಮಣ್ಣ, ಅರುಣ್ ಕುಮಾರ್ ಪಿ.ಡಿ ಹಾಗೂ ದೇವಸ್ಥಾನದ ಕಮಿಟಿಯವರು ಇತರರು ಇದ್ದರು.