SUDDIKSHANA KANNADA NEWS/ DAVANAGERE/ DATE:08-01-2025
ಟ್ಯಾಕ್ಸಿಕ್. ಕೆಜಿಎಫ್2 ಬಳಿಕ ತೆರೆ ಕಾಣುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಕೆಜಿಎಫ್ ಹಾಗೂ ಕೆಜಿಎಫ್ -2 ಬಳಿಕ ಯಶ್ ಸ್ಟಾರ್ಡಂ ದೇಶಾದ್ಯಂತ ಹೆಚ್ಚಿದೆ. ಎಲ್ಲೆಲ್ಲೂ ರಾಕಿ ಭಾಯ್ ದ್ದೇ ಹವಾ.
ಸ್ಯಾಂಡಲ್ ವುಡ್, ಮಾಲಿವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ನಲ್ಲಿ ಈಗ ಯಶ್ ಓಡುವ ಕುದುರೆ. ಕೆಜಿಎಫ್ ಬಳಿಕ ಯಶ್ ಅಭಿಮಾನಿಗಳು ಹೆಚ್ಚಾದರು. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕೆಜಿಎಫ್-2 ಕೂಡ ಧೂಳೆಬ್ಬಿಸಿತ್ತು. ಆದ್ರೆ, ಈ ಸಿನಿಮಾ ಬಳಿಕ ಯಶ್ ನಟನೆಯ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ಹಾಗಾಗಿ, ಟಾಕ್ಸಿಕ್ ಸಿನಿಮಾ ನೋಡಲು ದೇಶವೇ ತುದಿಗಾಲ ಮೇಲೆ ನಿಂತಿದೆ.
ಯಶ್ ಜನುಮದಿನಕ್ಕೆ ಟಾಕ್ಸಿಕ್ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಲಾಗಿ. ಈ ಟೀಸರ್ ನಲ್ಲಿ ಯಶ್ ಕಾಣಿಸಿಕೊಂಡಿರುವುದನ್ನು ನೋಡಿದರೆ ಮತ್ತೆ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಟೀಸರ್ ನಲ್ಲಿ ಕಾರಿನಲ್ಲಿ ಇಳಿಯುತ್ತಿದ್ದಂತೆ ಯಶ್ ಸಿಗರೇಟ್ ಸೇದುತ್ತಾ ಹೊಗೆ ಬಿಡುತ್ತಾ ಪಬ್ ನೊಳಗೆ ಬರುವ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಟಾಕ್ಸಿಕ್ ಟೀಸರ್ ಈ ಲಿಂಕ್ ನಲ್ಲಿ ವೀಕ್ಷಿಸಿ
ಹುಟ್ಟುಹಬ್ಬದ ದಿನದಂದು ರಾಕಿ ಭಾಯ್ ಫ್ಯಾನ್ಸ್ ಗೆ ಭರ್ಜರಿ ಸಿಹಿಯೂಟ ಸಿಕ್ಕಿದೆ. ಬಿಜಿಎಂ ಸೌಂಡ್ ಅಂತೂ ಯಶ್ ಲುಕ್ ಮತ್ತಷ್ಚು ಮೆರಗು ಹೆಚ್ಚಿಸಿದೆ. 39ನೇ ವರ್ಷಕ್ಕೆ ಕಾಲಿಟ್ಚಿರುವ ಯಶ್ ಈ ಚಿತ್ರಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಟೀಸರ್
ರಿಲೀಸ್ ಆಗುತ್ತಿದ್ದಂತೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಯಶ್ ಅವರನ್ನು ಟೀಸರ್ನಲ್ಲಿ ತುಂಬಾ ಸ್ಟೈಲಿಷ್ ಆಗಿ ತೋರಿಸಲಾಗಿದೆ. ವಿಂಟೇಜ್ ಕಾರಿನಿಂದ ಬಂದು ಇಳಿಯುವ ಯಶ್ ಅವರು ಒಂದು ಪಾರ್ಟಿ ಒಂದಕ್ಕೆ ಹೋಗುತ್ತಾರೆ. ಮದ್ಯ,
ಲಲನೆಯರು, ನಶೆ ತುಂಬಿರುವ ಪಾರ್ಟಿಯಲ್ಲಿ ರಾಕಿ ಭಾಯ್ ಎಂಟ್ರಿ ಮಸ್ತ್ ಆಗಿ ತೋರಿಸಲಾಗಿದೆ. ಅದರಲ್ಲಿಯೂ ಯುವತಿ ಜೊತೆಗೆ ಕುಳಿತು ಎಣ್ಣೆ ಸುರಿಯುವ ಸೀನ್ ಅಂತೂ ಅದ್ಧೂರಿಯಾಗಿ ಬಂದಿದೆ.