SUDDIKSHANA KANNADA NEWS/ DAVANAGERE/ DATE:24-02-2025
ದಾವಣಗೆರೆ: ಇಲ್ಲಿನ ಕೆ.ಬಿ. ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್ ಸುತ್ತಮುತ್ತಲ ಮುಖ್ಯ ರಸ್ತೆಗಳಲ್ಲಿ ಕೆಲವು ಮನೆಮಾಲೀಕರು ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿ, ನೀರಿನ ಸಂಪುಗಳ ರಕ್ಷಿಸಲೆಂದು ಪಾಲಿಕೆಯಿಂದ ನಡೆಯುತ್ತಿರುವ ಪೇವರ್ಸ್ ಕಾಮಗಾರಿಯನ್ನು ಪೂರ್ಣಗೊಳಿಸಲು ತಡೆಹಿಡಿಯುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಲ್ಲಿನ ನಾಗರೀಕರು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಕೆ.ಬಿ. ಬಡಾವಣೆ ಮತ್ತು ಸಿದ್ಧಮ್ಮ ಪಾರ್ಕ್ ರಸ್ತೆಗಳಲ್ಲಿ ಪೇವರ್ಸ್ ಹಾಕುವ ಕಾಮಗಾರಿ ನಡೆಯುತ್ತಿದ್ದು, ಈ ಭಾಗದ ಕೆಲ ಮನೆ ಮಾಲೀಕರು ರಸ್ತೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿ, ನೀರಿನ ಸಂಪುಗಳನ್ನು ನಿರ್ಮಿಸಿದ್ದಾರೆ. ಪೇವರ್ಸ್ ಹಾಕುವ ಸಮಯದಲ್ಲಿ ಈ ಸಂಪು ಅಡೆತಡೆಯಾಗಿದ್ದು, ಇದನ್ನು ತೆರೆವುಗೊಳಿಸಿ ಪೇವರ್ಸ್ ಗಳನ್ನು ಅಳವಡಿಸಬೇಕಿದೆ. ಆದರೆ ಇಲ್ಲಿನ ಕೆಲ ಮನೆ ಮಾಲೀಕರು ಇದಕ್ಕೆ ತಡೆ ಮಾಡುತ್ತಿದ್ದಾರೆ ಮತ್ತು ಗುತ್ತಿಗೆದಾರರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಈ ಮನೆ ಮಾಲೀಕರಿಗೆ ಯಾವುದೇ ಸಾರ್ವಜನಿಕ ಕಳವಳಿ ಇಲ್ಲ, ಅಕ್ರಮ ನೀರಿನ ಸಂಪುಗಳನ್ನು ಉಳಿಸಲು ತೊಂದರೆ ನೀಡುತ್ತಿದ್ದಾರೆ. ಈ ಭಾಗದಲ್ಲಿ ಕೆಲ ಮನೆ ಮಾಲೀಕರು ತಮ್ಮ ಸ್ವಾರ್ಥಕ್ಕೆ ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿಕೊಂಡ ನಿರ್ಮಿಸಿರುವ ನೀರಿನ ಸಂಪುಗಳನ್ನು ಉಳಿಸಲು, ಚರಂಡಿ ನಿರ್ಮಾಣ ಮಾಡುವ ಯೋಜನೆಯನ್ನು ತಪ್ಪಿಸಿ ಪೇವರ್ಸ್ ಹಾಕಲು ಹೇಳಬೇಕು. ಈ ಕಾಮಗಾರಿಗೂ ಸಹ ತೊಂದರೆ ನೀಡುತ್ತಿದ್ದಾರೆ. ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ನೀರಿನ ಸಂಪುಗಳನ್ನು ತೆರವುಗೊಳಿಸಿ, ಸ್ವಾರ್ಥಿ ಮನೆ ಮಾಲೀಕರು ಮನವಿಯನ್ನು ತಿರಸ್ಕರಿಸಿ, ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಕಾಮಗಾರಿಯನ್ನು ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಭಾಕರ್, ತಿಪ್ಪೇಸ್ವಾಮಿ, ಎಂ.ಆರ್. ಶ್ರೀನಿವಾಸ್, ಚಂದ್ರಶೇಖರ, ಎಂ. ರಾಜಾರಾಮ್, ನಾಗರಾಜ ಮನಿ ಮತ್ತಿತರ ನಾಗರೀಕರು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.