ದಾವಣಗೆರೆ: ಮನೆಯಲ್ಲಿ ನೇಣು ಬಿಗಿದುಕೊಂಡು ಕಾಪರ್ ಏಜ್ ಗ್ರೂಪ್ ಆಫ್ ಇನ್ಸಿಸ್ಟಿಟ್ಯೂಟ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಸ್. ಎಸ್. ಬಡಾವಣೆಯಲ್ಲಿ ನಡೆದಿದೆ.
ಬಿ. ಎನ್. ಶರತ್ (35) ಆತ್ಮಹತ್ಯೆ ಮಾಡಿಕೊಂಡವರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವ ಮೂಲಕ ಮನೆ ಮಾತಾಗಿದ್ದರು. ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬದವರು, ಸ್ನೇಹಿತರು, ನೂರಾರು ವಿದ್ಯಾರ್ಥಿಗಳು, ಕಾಪರ್ ಏಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ.
ಮದುವೆಗೆ ಪೋಷಕರು ಹೋಗಿದ್ದರು. ಮನೆಯಲ್ಲಿ ಶರತ್ ಒಬ್ಬರೇ ಇದ್ದರು. ಮದುವೆ ಮುಗಿಸಿ ಮನೆಗೆ ಬಂದಾಗ ಬೆಲ್ ಒತ್ತಿದರೂ ಬಾಗಿಲು ತೆರೆದಿಲ್ಲ. ಆ ಬಳಿಕ ಡೋರ್ ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶರತ್ ಪತ್ತೆಯಾಗಿದ್ದಾರೆ. ಮಗನನ್ನು ಈ ಸ್ಥಿತಿಯಲ್ಲಿ ನೋಡುತ್ತಿದ್ದಂತೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ದಾವಣಗೆರೆಯ ಪ್ರತಿಷ್ಠಿತ ಬಡಾವಣೆಯಾದ ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಸಮೀಪ ಕಾಪರ್ ಏಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥೆ ಕಟ್ಟಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜನಪ್ರಿಯತೆ ಗಳಿಸಿದ್ದರು.
ತಂದೆ ಬಿಎಸ್ ಎನ್ ಎಲ್ ನಿವೃತ್ತ ಎಜಿಎಂ ಆಗಿದ್ದ ನಾಗರಾಜ್ ಹಾಗೂ ತಾಯಿ ಜಾನಕಿ ದಂಪತಿ ಪುತ್ರನಾಗಿದ್ದು, ಹಣಕಾಸಿನ ಯಾವುದೇ ತೊಂದರೆ ಇರಲಿಲ್ಲ. ಆದ್ರೆ, ಒಳ್ಳೆಯ ಹುಡುಗ ಎಂಬ ಹೆಸರು ಪಡೆದಿದ್ದರು. ಆದ್ರೆ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಐಎಎಸ್, ಐಪಿಎಸ್ ಸೇರಲು ತುಂಬಾನೇ ಕಷ್ಟಪಟ್ಟು ಓದಿದ್ದರೂ ಜಿ. ಎನ್. ಶರತ್ ಉದ್ಯೋಗ ಸೇರಲು ಆಗಿರಲಿಲ್ಲ. ಇದೊಂದು ನೋವು ಅವರಿಗೆ ಕಾಡುತಿತ್ತು ಎನ್ನಲಾಗಿದೆ.