SUDDIKSHANA KANNADA NEWS/ DAVANAGERE/ DATE:08-04-2025
ಬೆಂಗಳೂರು: ಮದುವೆಯಾಗಿ ಮುದ್ದು ಮುದ್ದಾದ ಪತ್ನಿ ಇದ್ದರೂ ಬೇರೆಯೊಬ್ಬಳ ಜೊತೆ ಲವ್ವಿ ಡವ್ವಿ ಪತಿ ಹೊಂದಿದ್ದ. ಈ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗುತಿತ್ತು. ಇದು ತಾರಕಕ್ಕೇರಿತ್ತು. ಆದ್ರೆ, ಗೃಹಿಣಿಯ ಸಾವಿನಲ್ಲಿ ದುರಂತ ಅಂತ್ಯ ಕಂಡಿದೆ.
ಅನೈತಿಕ ಸಂಬಂಧ ಬಿಡುವಂತೆ ಎಷ್ಟೇ ಮನವಿ ಮಾಡಿದರೂ ಪತಿ ಒಪ್ಪದ ಕಾರಣ ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೆಬ್ಬಾಳದ ಕನಕ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆ ಹೆಸರು ಬಾಹರ್ ಆಸ್ಮಾ. ಬಶೀರ್ ವುಲ್ಲಾ ಜೊತೆ ಕಳೆದ ಎರಡು ವರ್ಷಗಳ ಹಿಂದೆ ಬಾಹರ್ ಆಸ್ಮಾ ಮದುವೆಯಾಗಿದ್ದರು. ಆದ್ರೆ, ಆತನಿಗೆ ಬೇರೊಬ್ಬ ಯುವತಿ ಜೊತೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನ ಈಕೆಗಿತ್ತು. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆಯುತ್ತಲೇ ಇತ್ತು. ಯುವತಿ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ಆಕೆ ಮನವಿ ಮಾಡಿದ್ದಾಳೆ. ಈ ವೇಳೆ ಪತಿಯು ಈಕೆಯನ್ನೇ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಆದ್ರೆ, ಮೃತಳ ಕುಟುಂಬದವರು ಪತಿಯೇ ಕೊಲೆ ಮಾಡಿದ್ದಾನೆ. ಆತನೇ ನೇಣು ಹಾಕಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.