(subsidy:) ತೋಟಗಾರಿಕೆ ಇಲಾಖೆಯಿಂದ ಕೃಷಿಯೇತರ ಚಟುವಟಿಕೆಯಾದ ಜೇನು ಸಾಕಾಣಿಕೆ ಮಾಡಿ ರೈತರು ಆರ್ಥಿಕವಾಗಿ ಸದೃಢರಾಗಲಿ ಎಂಬ ಕಾರಣದಿಂದಾಗಿ ಜೇನು ಸಾಕಾಣಿಕೆಯನ್ನು ಉತ್ತೇಜಿಸಲು “ಜೇನು ಸಾಕಾಣಿಕೆ” ಕಾರ್ಯಕ್ರಮದ ಅಡಿಯಲ್ಲಿ ಅರ್ಹರಿಗೆ ಸಬ್ಸಿಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಯಾವ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು? ಏನೆಲ್ಲಾ ಸೌಲಭ್ಯಗಳು ಸಿಗಲಿದೆ?
ಸದ್ಯಕ್ಕೆ ಈ ಯೋಜನೆಯ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೋಟಗಾರಿಕೆ ಇಲಾಖೆಯ ವತಿಯಿಂದ 2024-25ನೇ ಸಾಲಿಗೆ ಜಿಲ್ಲಾ ವಲಯದ ರೈತರಿಗೆ ಜೇನು ಸಾಕಾಣಿಕೆ ಮಾಡಲು ಜೇನು ಪೆಟ್ಟಿಗೆ, ಕುಟುಂಬ ಹಾಗೂ ಸ್ಟ್ಯಾಂಡ್ ಗಳನ್ನು ಖರೀದಿಸಲು ರೈತರಿಗೆ ಸಹಾಯಧನ ನೀಡಲು ಸರ್ಕಾರವು ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಹರಿರುವ ಶಿವಮೊಗ್ಗ ಜಿಲ್ಲೆಯ ರೈತರು ಜಿಲ್ಲೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆಗಸ್ಟ್ 30 ಸಂಜೆ 5:00 ಗಂಟೆಯ ಒಳಗಾಗಿ ಅಥವಾ ನೇರವಾಗಿ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಸಂಬಂಧಪಟ್ಟ ತಾಲೂಕಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅಧಿಕೃತ ವೆಬ್ಸೈಟ್ ಲಿಂಕ್:
shimoga.nic.in