SUDDIKSHANA KANNADA NEWS/ DAVANAGERE/ DATE:03-02-2024
ಕೇಂದ್ರ ಸರ್ಕಾರದ ಬಜೆಟ್ ನಂತರ ಹೂಡಿಕೆದಾರರು ಖರೀದಿಗೆ ಮುಂದಾದ ಕಾರಣ ಭಾರತೀಯ ಷೇರುಪೇಟೆಗೆ ಏರಿಕೆ ಕಂಡಿದೆ. ವಹಿವಾಟಿನ ಮಧ್ಯೆ ನಿಫ್ಟಿ ಸೂಚ್ಯಂಕ ಸಾರ್ವಕಾಲಿಕ ಎತ್ತರ ದಾಖಲಿಸಿ ತದನಂತರ ಇಳಿಕೆಯಾತ್ತ ಸಾಗಿತು. ಶುಕ್ರವಾರದ ವಹಿವಾಟಿನಲ್ಲಿ ಆಯಿಲ್, ಗ್ಯಾಸ್, ಬ್ಯಾಂಕಿಂಗ್ ವಲಯವಾರು ಷೇರುಗಳಲ್ಲಿ ಹೆಚ್ಚು ಖರೀದಿ ಕಂಡುಬಂದಿತು.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 156.35 (0.72%) ಅಂಕ ಏರಿಕೆ ಕಂಡು 21,853.80 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 440.33 (0.61%) ಅಂಕ ಏರಿಕೆ ಕಂಡು 72,085.63 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ BPCL, POWERGRID, ONGC,ADANIPORTS, NTPC ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ EICHERMOT, AXISBANK, HDFCLIFE, HDFCBANK, HINDUNILVR ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
FII ಮತ್ತು DII ನಗದು ವಹಿವಾಟು ವಿವರ
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.70.69 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.2,463.16 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.92 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.