SUDDIKSHANA KANNADA NEWS/ DAVANAGERE/ DATE:15-08-2024
ದಾವಣಗೆರೆನ 32ನೇ ವಾರ್ಡಿನ ಜಯನಗರ ಸಿ ಬ್ಲಾಕ್ ಅಲ್ಲಿ ಮೂರು ಮತ್ತು ನಾಲ್ಕನೇ ಕ್ರಾಸ್ ನಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ಸಿಸಿ ರಸ್ತೆ ಕಾಮಗಾರಿಯ ಪ್ರಾರಂಭದ ಪೂಜೆಯನ್ನು ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಮಾಜಿ ಮಹಾಪೌರರಾದ ಉಮಾ ಪ್ರಕಾಶ್ ಸಮ್ಮುಖದಲ್ಲಿ ನೆರವೇರಿತು.
ಈ ಸಮಯದಲ್ಲಿ ಮಾತನಾಡಿದ ಉಮಾ ಪ್ರಕಾಶ್ ರವರು 32ನೇ ವಾರ್ಡ್ ದೊಡ್ಡ ವಾರ್ಡ್ಗಳಲ್ಲಿ ಒಂದಾಗಿದ್ದು ಇದೀಗ ಅಭಿವೃದ್ಧಿಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಬೇಕೆಂದರೆ 32ನೇ ವಾರ್ಡಿಗೆ 100 ಕೋಟಿ ರೂಪಾಯಿಯಷ್ಟು ಕಾಮಗಾರಿ ಮಾಡಬೇಕಾಗುತ್ತದೆ. ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
32ನೇ ವಾರ್ಡಿನ ರಸ್ತೆ ,ಮಳೆ ನೀರು ಚರಂಡಿ, ಒಳಚರಂಡಿ ಹಾಗೂ ಉದ್ಯಾನವನಗಳ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಲು ಕೋರಲಾಗುವುದು ಎಂದು ಹೇಳಿದರು.