SUDDIKSHANA KANNADA NEWS/ DAVANAGERE/ DATE-08-05-2025
ದಾವಣಗೆರೆ: 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಳ್ಳಲು ಮೇ.10 ಕೊನೆಯ ದಿನವಾಗಿರುತ್ತದೆ.
ಮೇ.26 ರಿಂದ ಜೂನ್ 2 ರವರೆಗೆ ಪರೀಕ್ಷೆ-2ನ್ನು ನಡೆಸಲಾಗುವುದು. ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಕೂಡಲೇ ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೊಟ್ರೇಶ್ ಜಿ ತಿಳಿಸಿದ್ದಾರೆ.