SUDDIKSHANA KANNADA NEWS/ DAVANAGERE/ DATE:21-03-2025
ದಾವಣಗೆರೆ: 2024-25 ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಜರುಗಲಿವೆ. ಹೊಸದಾಗಿ ಒಟ್ಟು 21704 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇದರಲ್ಲಿ 10587 ಬಾಲಕ, 11117 ಬಾಲಕಿಯರು ಇದ್ದಾರೆ. ಇದಲ್ಲದೇ ಖಾಸಗಿ 194, ಖಾಸಗಿ ಪುನರಾವರ್ತಿತ 41 ಹಾಗೂ ಪುನರಾವರ್ತಿತ 640 ವಿದ್ಯಾರ್ಥಿಗಳು ಸೇರಿ 22579 ವಿದ್ಯಾರ್ಥಿಗಳು ಒಟ್ಟು 81 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವರು.
ಜಿಲ್ಲೆಯಲ್ಲಿ 475 ಪ್ರೌಢಶಾಲೆಗಳಿದ್ದು ಇದರಲ್ಲಿ 135 ಸರ್ಕಾರಿ, 166 ಅನುದಾನಿತ, 169 ಅನುದಾನ ರಹಿತ ಪ್ರೌಢಶಾಲೆಗಳಿವೆ.
ಕೇಂದ್ರಗಳ ವಿವರ; ಚನ್ನಗಿರಿ 16, ದಾವಣಗೆರೆ ಉತ್ತರ 14, ದಾವಣಗೆರೆ ದಕ್ಷಿಣ 17, ಹರಿಹರ 12, ಹೊನ್ನಾಳಿ 11, ಜಗಳೂರು 11 ಸೇರಿ 81 ಕೇಂದ್ರಗಳಿವೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಿದ್ದು ವೆಬ್ ಕಾಸ್ಟಿಂಗ್ ಇರಲಿದೆ.