ದಾವಣಗೆರೆ: ಪೌರಾಡಳಿತ ನಿರ್ದೇಶನದಂತೆ ಗ್ರೇಡ್1 ನಗರಸಭೆಗಳಿಗೆ 8, ಗ್ರೇಡ್ 2 ನಗರಸಭೆಗಳಿಗೆ 6, ಪುರಸಭೆ 3 ಮತ್ತು ಪಟ್ಟಣ ಪಂಚಾಯಿತಿಗಳಿಗೆ 3 ಪೌರಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿಗೆ ಹಂಚಿಕೆ ಮಾಡಲಾಗಿತ್ತು.
READ ALSO THIS STORY: ಚಿನ್ನದ ಬೆಲೆ ಗಗನಕ್ಕೆೇರಿದ್ದರಿಂದ ಕಳ್ಳರಿಂದ ತಪ್ಪಿಸಿಕೊಳ್ಳಲು ಪೊಲೀಸರ ಈ ಸೂಚನೆಗಳ ಪಾಲಿಸಿದರೆ ಸಾಕು!
ಈ ಹುದ್ದೆಗಳಿಗೆ ಒಳಮೀಸಲಾತಿ ಅಳವಡಿಸಿಕೊಂಡು ರೋಸ್ಟರ್ ಬಿಂದುವಿನ ಅನುಬಂಧದAತೆ ವರ್ಗವಾರು ವರ್ಗಿಕರಿಸಿಕೊಂಡು ಸರ್ಕಾರದ ವಿಶೇಷ ನೇಮಕಾತಿ ನಿಯಮಗಳ ರೀತ್ಯಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನವಂಬರ್ 28 ರೊಳಗಾಗಿ ಅರ್ಜಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಅಧಿಕೃತ ವೆಬ್ ಸೈಟ್ http://davanageredudc.mrc.gov.in ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕೃತ ವೆಬ್ ಸೈಟ್ ಸಂಪರ್ಕಿಸಬೇಕೆAದು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಡಾ.ಎನ್ ಮಹಾಂತೇಶ್ ತಿಳಿಸಿದ್ದಾರೆ.








