SUDDIKSHANA KANNADA NEWS/ DAVANAGERE/ DATE:15-02-2024
ದಾವಣಗೆರೆ: ಅಪಘಾತದಲ್ಲಿ ಗಾಯಗೊಂಡ ಮಹಿಳೆ ಹಾಗೂ ಆಕೆ ಪತಿಯನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರ ಪುತ್ರ ಹಾಗೂ ಬಿಜೆಪಿಯ ಯುವ ನಾಯಕ ಜಿ. ಎಸ್. ಅನಿತ್ ಕುಮಾರ್ ಅವರು ಮಾನವೀಯತೆ ಮೆರೆದಿದ್ದಾರೆ.
ಕಾರ್ಯ ನಿಮಿತ್ತ ಜಗಳೂರಿಗೆ ಹೋಗಿ ದಾವಣಗೆರೆಗೆ ವಾಪಸ್ ಬರುವಾಗ ಬೇತೂರು ಗ್ರಾಮದ ಬಳಿ ಮಹಿಳೆ ಹಾಗೂ ಆಕೆಯ ಪತಿ ಬೈಕ್ ನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಈ ಮಾರ್ಗದಲ್ಲಿ ಬರುತ್ತಿದ್ದ ಅನಿತ್ ಕುಮಾರ್ ಅವರು ಇದನ್ನು ನೋಡಿದ ಕೂಡಲೇ ಕಾರು ನಿಲ್ಲಿಸಿದರು.
ಈ ಕಾರಿನಲ್ಲಿಯೇ ಮಹಿಳೆ ಹಾಗೂ ಆಕೆಯ ಪತಿಯನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸಿದರು. ದಾವಣಗೆರೆ ನಗರದ ಆಂಜನೇಯ ಬಡಾವಣೆಯ ಮಹೇಶ್ ದಂಪತಿಯ ತಮ್ಮ ಕಾರಿನಲ್ಲಿ ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಿಸಿ ಮಾನವೀಯತೆ ತೋರಿದರು.