SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ಮಹಾಶಿವರಾತ್ರಿ ಹಬ್ಬ ಮತ್ತು ಜಾಗರಣೆ ಪ್ರಯಕ್ತ ದಾವಣಗೆರೆ ಲೇಬರ್ ಕಾಲೋನಿಯಲ್ಲಿ ನೋತನವಾಗಿ ನಿರ್ಮಿಸಿರುವ ಶ್ರೀ ಕರಿಬಸವೇಶ್ವರ ದೇವಸ್ಥಾನದಲ್ಲಿ 57 ನೇ ವರ್ಷದ ಶಿವರಾತ್ರಿ ಹಬ್ಬದ ವಿಶೇಷ ಪೊಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಫೆ. 28ರ ಶುಕ್ರವಾರ ಬೆಳಿಗ್ಗೆ ಮಹಾ ರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ, ಸಂಜೆ 7 ಗಂಟೆಗೆ ಭಜನಾ ಮಂಡಳಿಯಿಂದ ಭಜನೆಯೊಂದಿಗೆ ಜಾಗರಣೆ ಕಾರ್ಯಕ್ರವೂ ನೆರವೇರಲಿದೆ.
ಮಾರ್ಚ್ 1ರಂದು ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕ, ಮಹಾ ಪೂಜೆ ನಂತರ ವಾದ್ಯ ವೈಭವಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಂತರ ಮಧ್ಯಾಹ್ನ 12.30 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಮಾ. 2ರಂದು ಬೆಳಿಗ್ಗೆ 8 ಗಂಟೆಗೆ ವಿಶೇಷ ಪೂಜೆಯ ನಂತರ ಫಲಹಾರ ವ್ಯವಸ್ಥೆ ಇರಲಿದೆ. 4ರಂದು ಸಂಜೆ 6.30ಕ್ಕೆ ಪಳಾರ ಹಂಚುವುದು. ಈ ಎಲ್ಲಾ ದಿನಗಳಲ್ಲೊ ದೇವರಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಇರಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಗರಸೇವಕ ಜೆ.ಎನ್ ಶ್ರೀನಿವಾಸ್ ಮತ್ತು ಕಾರ್ಯದರ್ಶಿ ಪಿ. ಎನ್. ಲೋಕೇಶಪ್ಪ ತಿಳಿಸಿದ್ದಾರೆ.