SUDDIKSHANA KANNADA NEWS/ DAVANAGERE/ DATE:09-04-2025
ಮಲಪುರಂ: ಮುದ್ದಿನ ಮಗಳನ್ನು ಅತ್ಯಾಚಾರ ಮಾಡಿ ಕೊಂದಿದ್ದ ಪಾಪಿಗೆ ಗುಂಡಿಟ್ಟು ಹತ್ಯೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ಕೇರಳದ ಮಲಪುರಂನ ಶಂಕರನಾರಾಯಣ ಅವರು ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಕೇರಳದಲ್ಲಿ 24 ವರುಷಗಳ ಹಿಂದೆ ಕೃಷ್ಣಪ್ರಿಯಾಳನ್ನು ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಕೋರ್ಟ್ ಕಟಕಟಗೆ ಕರೆತರುವ ಮುನ್ನವೇ ಶೂಟ್ ಮಾಡಿ ಕೊಂದು ಹಾಕಿದ್ದರು.
ಕೃಷ್ಣಾ ಪ್ರಿಯಳ ತಂದೆ ಎಂಬ ಒಂದೆ ಒಂದು ವಿಶೇಷಣದಿಂದ ಕೇರಳದಲ್ಲಿ ನೆನಪಿಸಿಕೊಳ್ಳುವ ವ್ಯಕ್ತಿ ಎಂದರೆ ಮಲಪುರಂ ಮಂಚೇರಿ ಚಾರಗಾವು ಚೆನೋಟುಕುನ್ನುವಿನ ಪೂವೇಂಚೇರಿ ಶಂಕರನಾರಾಯಣನ್. ಎಳೆಯ ಪ್ರಾಯದ ಮಗಳ ಹಂತಕನನ್ನು ಕಾನೂನಿನ ಕಟಕಟೆಗೆ ಬಿಡದೆ ಒಂದೆ ಗುಂಡಿನಲ್ಲಿ ಮುಗಿಸಿದ್ದರು.. ಅತೀವವಾಗಿ ಮಗಳನ್ನು ಪ್ರೀತಿಸುತ್ತಿದ್ದ ತಂದೆಯ ಬಗ್ಗೆ ಕೇರಳದಲ್ಲಿ ಬಹು ಚರ್ಚಿತರಾಗಿದ್ದರು. ಅದರೆ ಈಗ ಮಗಳ ನೆನಪುಗಳೊದಿಂಗೆ ವಿಧಿವಶರಾಗಿದ್ದಾರೆ.
ಘಟನೆ ಹಿನ್ನೆಲೆ ಏನು…?
ಅದು ಬರೋಬ್ಬರಿ 24 ವರುಷಗಳ ಹಿಂದಿನ ಘಟನೆ. ಸೌಜನ್ಯ ಪ್ರಕರಣವನ್ನೆ ಹೋಲುವ ಘಟನೆ ಅದು. 2001 ಪೆಬ್ರವರಿ 1 ರಂದು ಕೇರಳದ ಮಂಚೇರಿ ಎಳಂಗೂರಿನಲ್ಲಿ ಏಳನೇ ತರಗತಿ ಓದುತ್ತಿದ್ದ ಕೃಷ್ಣ ಪ್ರಿಯಾ ಕಾಮುಕನ ಅಟ್ಟಹಾಸಕ್ಕೆ
ಬಲಿ ಅಗಿದ್ದಳು.. ಅಕೆಗೆ ಕೇವಲ 13 ವರುಷ ವಯಸ್ಸು. ನೆರೆಮನೆಯವನೇ ಅದ ಮಹಮ್ಮದ್ ಕೋಯಾ(24) ಎಂಬಾತ ಎಳೆಯ ಕೃಷ್ಣಾ ಪ್ರಿಯಾಳನ್ನೂ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಂದಿದ್ದ. ಈ ಘಟನೆ ಕೇರಳದಲ್ಲಿ ಕಾಡ್ಗಿಚ್ಚಿನಂತೆ
ಹಬ್ಬಿತ್ತು.
ಈ ಪ್ರಕರಣ ಕೇರಳವನ್ನೇ ಬೆಚ್ಚಿ ಬೀಳೀಸಿತ್ತು. ಮಾಧ್ಯಮಗಳು ಈ ಪ್ರಕರಣವನ್ನು ಹೆಚ್ಚು ಪ್ರಾಮುಖ್ಯತೆ ನೀಡಿದ್ದವು. ಪೊಲೀಸರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಅರೋಪಿಯನ್ನು ಕಾನೂನಿನ ಕುಣಿಕೆಗೆ ಒಪ್ಪಿಸುವಲ್ಲಿ ಸಫಲರಾಗಿದ್ದರು..
ಸಾಕ್ಷಾಧಾರಗಳ ಸಮರ್ಪಕತೆಯಿಂದ ನ್ಯಾಯಲಯವು ಶಿಕ್ಷೆಯನ್ನು ನೀಡಿತ್ತು. ಅದರೆ ನಾವು ಕಂಡಿದ್ದ ಕೇಳಿದ್ದ ಇತರ ಪ್ರಕರಣದಂತೆ ಇತಿಹಾಸದ ಪುಟ ಸೇರಲಿದ್ದ ಈ ಪ್ರಕರಣ ತಂದೆ ಶಂಕರನಾರಾಯಣನ್ ಅವರ ಕಣ್ಣೀರ ಸೇಡಿನಿಂದ
ಹೊಸ ತಿರುವು ಪಡೆಯಿತು..
ಅರೋಪಿ ಜಾಮೀನಿನ ಮೂಲಕ 2002 ಪೆಬ್ರವರಿ 27 ಹೊರಬರುತ್ತಿದ್ದಂತೆ ಗುಂಡೇಟಿಗೆ ಬಲಿಯಾದ. ಈ ಪ್ರಕರಣದಲ್ಲಿ ಕೃಷ್ಣಾ ಪ್ರಿಯಾಳ ತಂದೆ ಶಂಕರನಾರಾಯಣನ್ ಅರೋಪಿ ಅದರು. ಮುದ್ದು ಮಗಳ ಸಾವಿನಿಂದ ಕಣ್ಣೀರಿನಲ್ಲೇ ದಿನ ಕಳೆಯುತ್ತಿದ್ದ ಶಂಕರನಾಯಣ್ ಮಗಳ ಹತ್ಯೆಗೖದ ಪಾಪಿಯನ್ನೂ ಕೊಂದು ಹೀರೊ ಅಗಿದ್ದರು.
ಮಗಳ ಸಾವಿನಿಂದ ತುಂಬಾ ದುಃಖಿತರಾಗಿದ್ದರೂ ಸೇಡು ಮಾತ್ರ ಅವರನ್ನು ಬಿಟ್ಟಿರಲಿಲ್ಲ. ಘಟನೆಯ ನಂತರ ಕೇರಳದ ಮಂಚೇರಿ ಕೋರ್ಟ್ ಶಂಕರ್ ನಾರಾಯಣ್ ಅವರಿಗೆ ಜೀವಾವದಿ ಶಿಕ್ಷೆ ವಿಧಿಸಿತು. ಆದರೆ 2006 ಮೇ ತಿಂಗಳಲ್ಲಿ ಸಾಕ್ಷಧಾರ ಕೊರತೆಯಿಂದ ಶಂಕರ್ ನಾರಯಣನ್ ಅವರನ್ನು ಖುಲಾಸೆಗೊಳಿಸಿತ್ತು. ಬರೋಬ್ಬರಿ ಎರಡು ದಶಕಗಳನ್ನು ಕಳೆದರೂ ಕೇರಳದ ಜನತೆ ಮರೆತಿಲ್ಲ. ಪುತ್ರಿ ಕೊಂದಿದ್ದ ಪಾಪಿಯನ್ನು ಕೊಂದು ಹಾಕಿ ಸೇಡುತೀರಿಸಿಕೊಂಡಿದ್ದ ತಂದೆಯೂ ವಿಧಿವಶರಾಗಿದ್ದಾರೆ.