(post office scholarship) ಅಂಚೆ ಇಲಾಖೆಯು ‘ದೀನ್ ದಯಾಳ್ ಸ್ಪರ್ಶ್’ ಯೋಜನೆಯಡಿ 2023-24ನೇ ಶೈಕ್ಷಣಿಕ ವರ್ಷದಲ್ಲಿ 60% ಅಂಕ ಗಳಿಸಿದ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಂಚೆಚೀಟಿ ಸಂಗ್ರಹಣೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಹುಟ್ಟುಹಾಕುವುದು ಮತ್ತು ಅದನ್ನು ಹವ್ಯಾಸವಾಗಿ ಮುಂದುವರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳು ವಾರ್ಷಿಕ ರೂ 6,000 ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
ಪರೀಕ್ಷೆಯ ಮೊದಲ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪೋಸ್ಟ್ ಆಫೀಸ್ ಸ್ಟಾಂಪ್ ಸಂಗ್ರಹಿಸುವ ಯೋಜನೆಯಲ್ಲಿ ಯಶಸ್ವಿಯಾಗಿ ಭಾಗವಹಿಸಬೇಕು.
ಅಂಚೆಚೀಟಿ ಸಂಗ್ರಹಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿಗಳನ್ನು ಸೆ. 30 ರೊಳಗಾಗಿ ಖುದ್ದಾಗಿ/ಅಂಚೆ ಮೂಲಕ ಸಲ್ಲಿಸುವಂತೆ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಜಿ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ www.indiapost.gov.in ಮತ್ತು www.karnatakapost.gov.in ಗೆ ಭೇಟಿ ನೀಡಿ.