SUDDIKSHANA KANNADA NEWS/ DAVANAGERE/ DATE:25-08-2024
ದಾವಣಗೆರೆ.; ಎಸ್.ಎಸ್ ಜನಕಲ್ಯಾಣ ಟ್ರಸ್ಟ್ ನಿಂದ ಛಾಯಾಗ್ರಾಹಕ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸ್ಕಾಲರ್ ಶಿಪ್ ನೀಡಲು ತೀರ್ಮಾನಿಸಲಾಗಿದೆ.
ಛಾಯಾಗ್ರಾಹಕರ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಯೋಜಕರು, ತಮ್ಮ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಜನಕಲ್ಯಾಣ ಟ್ರಸ್ಟ್ ನಿಂದ ನೆರವು ನೀಡಬೇಕೆಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಿಕೊಂಡರು.
ಮೊದಲ ಎರಡು ವರ್ಷ ಸ್ಕಾಲರ್ ಶಿಪ್ ನೀಡಿ ನಂತರ ಕೆಲವು ಕಾರಣಗಳಿಂದ ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಆಯೋಜಕರ ಮನವಿಗೆ ಸ್ಪಂದಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಿ ಛಾಯಾಗ್ರಾಹಕರ ಮಕ್ಕಳಿಗೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ನಿಂದ ಸ್ಕಾಲರ್ಶಿಪ್ ನೀಡಲು ಅನುಕೂಲ ಕಲ್ಪಿಸಿದ್ದಾರೆ.
ಸಂಸದರ ಈ ನಿರ್ಧಾರದಿಂದ ಆರ್ಥಿಕವಾಗಿ ಹಿಂದುಳಿದ ಛಾಯಾಗ್ರಾಹಕರ ಮಕ್ಕಳಿಗೆ ಅನುಕೂಲವಾಗಲಿದೆ.